Advertisement

ಭಾವ-ಗಾನ-ಯಾನದಲ್ಲಿ ಗರ್ತಿಕೆರೆ ರಾಘಣ್ಣ

02:40 AM Jul 14, 2017 | Harsha Rao |

ಮುಜುಂಗಾವು: ಸುಗಮ ಸಂಗೀತಲೋಕದಲ್ಲಿ ಪ್ರಖ್ಯಾತರೂ ಪ್ರಶಸ್ತಿ ವಿಜೇತರೂ ಆದ ಗರಿಕೆರೆ ರಾಘಣ್ಣನೆಂದೇ ಮನೆಮಾತಾದ ಹೊ.ನಾ.ರಾಘವೇಂದ್ರ ಅವರು ಮುಜುಂಗಾವಿನ ಶ್ರೀ ಭಾರತೀವಿದ್ಯಾ ಪೀಠದಲ್ಲಿ ಗಾನ ಮಾಧುರ್ಯದಿಂದ ಶಿಕ್ಷಕರ, ಮಕ್ಕಳ ಮನ ಸೂರೆಗೊಂಡರು.

Advertisement

ಗಣಪ ನಿನಗೆ ಯಾಕೆ ಉದ್ದ ಸೊಂಡಿಲು, ಪಿಳ್ಳಾರಯ್ಯ ಕುಳ್ಳರರಾಜ ಎತ್ತರ ಒಂದೇಮೊಳ, ತಟಕ ಪಟಕ ನೋಡಿ ನಮ್ಮ ಜಟಕ, ಕೃಷ್ಣ ಕಾಡಿದನು ಅಮ್ಮಾ ಅಮ್ಮಾ, ಅಮ್ಮಾ ನೋಡೆ ನಾನಿಷ್ಟುದ್ದ ಕಡೆಗೋಲಷ್ಟುದ್ದ, ಬೆಳಕಿನಕಡೆ ಮುಖ ಮಾಡೋಣ ಹೀಗೆ ಹಾಡಿದ ಹತ್ತು ಗೀತೆಗಳಲ್ಲಿ ಆರೇಳು ಹಾಡುಗಳೂ ಮಕ್ಕಳ ಮಟ್ಟದಲ್ಲಿ ಮಕ್ಕಳಿಗಾಗಿ ಮಗುವಾಗಿ ಹಾಡಿ ಒಂದೂವರೆ ಗಂಟೆ ಹೊತ್ತು ಮಕ್ಕಳೊಂದಿಗೆ ಶಿಕ್ಷಕರ ಮನಸೂರೆಗೊಂಡುದೂ ಅಪ್ಪಟ ಸತ್ಯ.

ಗಾಯನಕ್ಕೆ ಪಕ್ಕವಾದ್ಯ ನುಡಿಸಿದವರು ದೇರಜೆ ಮೂರ್ತಿ ಹಾಗೂ ನಿವೃತ್ತ ಅಧ್ಯಾಪಕ ಶಂಕರಪ್ರಸಾದ ಕುಂಚಿನಡ್ಕ. ಆಡ‌ಳಿತಾಧಿಕಾರಿ ಶ್ಯಾಂಭಟ್‌ ದರ್ಬೆಮಾರ್ಗ ಸ್ವಾಗತಿಸಿ ವಂದಿಸಿದರು. ಎಲ್‌.ಕೆ.ಜಿ.ಪುಟಾಣಿಗಳು ಗರ್ತಿಕೆರೆ ಅವರಿಗೆ ಸ್ಮರಣಿಕೆಯನ್ನಿತ್ತು ನಮಸ್ಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next