Advertisement

Gangolli: ಮಡಿ ಲೈಟ್‌ಹೌಸ್‌ ತೀರದಲ್ಲಿ ಕಸ ರಾಶಿ

05:28 PM Aug 12, 2024 | Team Udayavani |

ಗಂಗೊಳ್ಳಿ: ಇಲ್ಲಿನ ಮಡಿ ಲೈಟ್‌ಹೌಸ್‌ ಹತ್ತಿರದ ಕಡಲ ತೀರದಲ್ಲಿ ರವಿವಾರ ಬೆಳಿಗ್ಗೆ ಕಂಡು ಬಂದ ದೃಶ್ಯ ಇದಾಗಿದ್ದು, ಕಸದ ರಾಶಿಯೇ ಕಡಲ ಕಿನಾರೆಯಲ್ಲಿ ಬಂದು ಬಿದ್ದಿದೆ. ಜನರು ಬಳಸಿ, ಬೀಸಾಡಿರುವ ಪ್ಲಾಸ್ಟಿಕ್‌ ವಸ್ತುಗಳು ದಿನದಿಂದ ದಿನಕ್ಕೆ ಯಥೇಚ್ಚವಾಗಿ ಕಡಲ ಗರ್ಭ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ.

Advertisement

ಕಡಲಿನಲ್ಲಿ ಕಲ್ಮಶಗಳ ಪ್ರಮಾಣ ಅಧಿಕವಾದ ಕಾರಣ ಕಡಲ ಮಾತೆ ಕೋಪಗೊಂಡು ಮಾನವನು ತನ್ನೊಡಲಿಗೆ ಎಸೆದಿರುವ ಎಲ್ಲ ಕೊಳಕುಗಳನ್ನು ಸಮುದ್ರದ ದಂಡೆಗೆ ಎಸೆದಿರುವ ಹಾಗೆ ಕಾಣುತ್ತಿದೆ.

ಈ ಕಸದ ರಾಶಿಯಲ್ಲಿ ಅತೀ ಹೆಚ್ಚಾಗಿ ಪ್ಯಾಡ್‌ಗಳು, ಚಪ್ಪಲಿಗಳು ಕ್ಯಾರಿಬ್ಯಾಗ್‌ಗಳೇ ಕಾಣುತ್ತಿವೆ. ಸಮುದ್ರದ ಸ್ವತ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬನ ಕರ್ತವ್ಯ. ಅಲ್ಲದೆ ಈ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕಾದದ್ದು ಯೋಚನೆ ಮಾಡಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next