Advertisement
“ಸ್ವಚ್ಛಭಾರತ ಅಭಿಯಾನ’, “ಕ್ಲೀನ್ ಸಿಟಿ’ ಅಭಿಯಾನ ಸೇರಿದಂತೆ ಹಲವು ಯೋಜನೆಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರು ನಗರ ಪ್ರದೇಶ ಮಾತ್ರ ಕಸಮುಕ್ತವಾಗದೆ ಇರೋದು ವಿಪರ್ಯಾಸವೇ ಸರಿ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ರಾಮನಗರ ಪಾಧಿಕಾರದ ಕಚೇರಿ ಹಾಗೂ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ವಿದ್ಯಾಪೀಠ ಶಾಲೆಯ ಮುಂಭಾಗದ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದೆ. ಅಷ್ಟೇ ಏಕೆ ಡಾ. ಬಿ.ಆರ್.ಅಂಬೇಡ್ಕರ್ ಭವನದ ಎದುರು ರಾಶಿ ಕಸ ಹಾಕಿದ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಆರೋಪ ಸ್ಥಳೀಯರದ್ದು.
Related Articles
Advertisement
ಗಾರ್ಬೇಜ್ ಸಿಟಿಯಾಗುವುದನ್ನ ತಪ್ಪಿಸಬೇಕಿದೆ: ನಗರದ ಪ್ರಮುಖ ಬೀದಿಗಳಲ್ಲಿಯೇ ಹೀಗಾದರೆ ಇನ್ನೂ ಗಲ್ಲಿ ಪ್ರದೇಶದ ಪಾಡು ಹೇಳತೀರದಾಗಿದೆ, ಈಗ ಮಳೆ ಸುರಿಯುತ್ತಿದ್ದು ಕಸದ ರಾಶಿ ಗಬ್ಬೆದ್ದು ನಾರುತ್ತದೆ ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸಾರ್ವಜನಿಕರದ್ದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಸ ಸಂಗ್ರಹಣೆಯ ಜವಾಬ್ದಾರಿ ನಿಭಾಯಿಸಿ ಗಾರ್ಬೇಜ್ ಸಿಟಿಯಾಗುವುದನ್ನ ತಪ್ಪಿಸಬೇಕಿದೆ ಎನ್ನುವುದು ಸ್ಥಳೀಯರ ಒತ್ತಾಯ.
ನಗರದೆಲ್ಲೆಡೆ ಕಸದ ರಾಶಿ ಇದ್ದ ಹಾಗೇ ಇರುತ್ತೆ ಇದರಿಂದ ರೋಗರುಜಿನ ಗಳು ಹರಡುವ ಸಾಧ್ಯತೆಯಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಜರುಗಿಸಿ ಕಸವನ್ನು ಬೀದಿಯಲ್ಲಿ ಹಾಕುವವರನ್ನು ಗುರುತಿಸಿ ದಂಡ ವಿಧಿಸಲಿ. – ರಾಜಣ್ಣ, ನಗರದ ವಾಸಿ
ನಗರಸಭೆಯಿಂದ ಪ್ರತಿ ವಾರ್ಡ್‌ಗಳ ಮನೆ ಮನೆ ಬಳಿಗೆ ವಾಹನಗಳನ್ನು ಕಳುಹಿಸಿ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಕೆಲವು ಅಂಗಡಿಯವರು ನಗರದ ಪ್ರಮುಖ ಬೀದಿಗಳಲ್ಲಿ ತಡವಾಗಿ ಬಂದು ಕಸ ಸುರಿಯುತ್ತಿದ್ದಾರೆ. ಈ ಬಗ್ಗೆ ಗಮನಕ್ಕೆ ಬಂದಿದೆ ನಾವು ಅವರನ್ನು ಗುರ್ತಿಸಲು ಹೋಗಿದ್ದಾಗ ಅವರ ಬಗ್ಗೆ ಮಾಹಿತಿ ನೀಡುವವರಿಲ್ಲ ಆದ್ದರಿಂದ ನಾವೇ ಅವ ರನ್ನು ಕಂಡುಹಿಡಿದು ಮುಂದಿನ ದಿನಗಳಲ್ಲಿ ದಂಡವಿಧಿಸುವ ಮೂಲಕ ಸ್ವತ್ಛತೆ ಕಾಪಾಡು ವತ್ತ ಗಮನಹರಿಸುತ್ತೇವೆ. – ಸುಭ್ರಮಣ್ಯ, ಎಇಇ, ಆರೋಗ್ಯ ಶಾಖೆ, ನಗರಸಭೆ
-ಎಂ.ಎಚ್. ಪ್ರಕಾಶ್ ರಾಮನಗರ