Advertisement
ಗೊಂದಲ ಬಗೆಹರಿಯುವವರೆಗೆ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶವಾಗದಂತೆ ಶಾಂತಿ ಕಾಪಾಡಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದವರು ವಿವರಿಸಿದ್ದಾರೆ. ಇದೇ ವೇಳೆ ಮಂಗಳೂರಿನ ನ್ಯಾಯಾಲಯ ಕೂಡ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
Related Articles
ಧನಂಜಯ ಅವರು ದಾಖಲಿಸಿದ ಖಾಸಗಿ ಧಾವೆಯನ್ನನುಸರಿಸಿ ಪತ್ತೆಯಾದ ದೇವಸ್ಥಾನವನ್ನು ಹೋಲುವ ರಚನೆಯನ್ನು ಮುಂದಿನ ವಿಚಾರಣೆಯ ತನಕ ಕೆಡಹು ವುದರ ವಿರುದ್ಧ ಅಥವಾ ಅದಕ್ಕೆ ಹಾನಿ ಎಸಗುವುದರ ವಿರುದ್ಧ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ. ಮುಂದಿನ ವಿಚಾರಣೆ 2022 ಜೂನ್ 3ರಂದು ನಡೆಯಲಿದೆ. ದಾವೆದಾರರ ಪರವಾಗಿ ವಕೀಲರಾದ ಚಿದಾನಂದ ಕೆದಿಲಾಯ, ಕೀರ್ತನ್ ಮತ್ತು ರವಿಚಂದ್ರ ವಾದಿಸಿದ್ದರು.
Advertisement
ಪುರಾತತ್ವ ಇಲಾಖೆಯಿಂದತನಿಖೆ ನಡೆಯಲಿ
ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿರುವುದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸುತ್ತದೆ ಎಂದು ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ. ಮಸೀದಿ ಸ್ಥಳದಲ್ಲಿ ಕಾಣಿಸಿರುವ ದೇವಸ್ಥಾನದ ಮಾದರಿಯನ್ನು ಹೋಲುವ ರಚನೆ ಬಗ್ಗೆ ಪುರಾತತ್ವ ಇಲಾಖೆಯಿಂದ ಅಧ್ಯಯನ ನಡೆಸಿ ಸತ್ಯಾಂಶವನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ. ಗಂಜಿಮಠ ಗ್ರಾ.ಪಂ. ನೊಟೀಸು
ಬಜಪೆ: ಮಸೀದಿ ನವೀಕರಣ ಸಂದರ್ಭ ದೇವಸ್ಥಾನ ಅಥವಾ ಬಸದಿಯ ಮಾದರಿಯನ್ನು ಹೋಲುವ ರಚನೆ ಕಂಡುಬಂದಿರುವ ಹಾಗೂ ಅದಕ್ಕೆ ಸಂಬಂಧಿಸಿ ದೂರು ಅರ್ಜಿ ನೀಡಿದ ಹಿನ್ನೆಲೆಯಲ್ಲಿ ಗಂಜಿಮಠ ಗ್ರಾ.ಪಂ. ಮೇಲಧಿಕಾರಿಗಳಿಗೆ ವರದಿ ಮಾಡಲಾಗಿದೆ ಮತ್ತು ಮುಂದಿನ ಆದೇಶ ಬರುವ ತನಕ ಕಟ್ಟಡದ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಪಾಡುವಂತೆ ಗ್ರಾ.ಪಂ.ನಿಂದ ಶುಕ್ರವಾರ ನೊಟೀಸು ನೀಡಲಾಗಿದೆ. ಕಟ್ಟಡದ ಪರಿಸರದಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.