Advertisement
ತಾಲೂಕಿನ ಗಂಜಿಗುಂಟೆ ಗ್ರಾಪಂನ ರೆಡ್ಡಿ ಕೆರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದೆ. ಕೋಡಿಯಿಂದ ಧುಮ್ಮಿಕ್ಕುವ ಜಲಧಾರೆಯ ದೃಶ್ಯ ಜೋಗ ಜಲಪಾತ ನೆನಪಿಸುತ್ತದೆ. ನೀರಿನ ವೈಭವವನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು ಎಂದು ಈಭಾಗಕ್ಕೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ರೆಡ್ಡಿಕೆರೆಯನ್ನು ಪ್ರವಾಸಿ ತಾಣ ಮಾಡಲು ಎಲ್ಲಾ ರೀತಿಯ ಅವಕಾಶಗಳಿದ್ದರೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದೆ.
Related Articles
Advertisement
ಪ್ರವಾಸಿ ತಾಣ ಮಾಡಿ : ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ರೆಡ್ಡಿಕೆರೆ ಪ್ರಕೃತಿಯ ಸೌಂದರ್ಯ ತನ್ನ ಮಡಲಲ್ಲಿಟ್ಟು ಕೊಂಡಿದೆ. ಸುತ್ತಮುತ್ತಲು ಬೆಟ್ಟಗುಡ್ಡಗಳ ಸಾಲು, ಹಸಿರು ವಾತಾವರಣ ಕಂಡು ಬರುತ್ತಿದೆ. ಇಲ್ಲಿನ ಕೆರೆಯಲ್ಲಿ ಬೋಟಿಂಗ್ ಮಾಡಲು ಸಹ ಉತ್ತಮ ಅವಕಾಶಗಳಿವೆ. ಆದರೆ, ಈ ಸ್ಥಳವನ್ನು ಪ್ರವಾಸೋದ್ಯಮ ಕೇಂದ್ರ ಮಾಡಲು ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಬೇಕಾಗಿದೆ.
ರೆಡ್ಡಿಕೆರೆ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಸುತ್ತಮುತ್ತ ಲಿನ ಜನ ಇಲ್ಲಿಗೆ ಆಗಮಿಸಿ ಕೆರೆಯ ಸೌಂದರ್ಯ ಸವಿಯುತ್ತಾರೆ. ತಾಲೂಕು, ಜಿಲ್ಲಾಡಳಿತ ಪ್ರವಾಸಿ ತಾಣ ಮಾಡಿದರೆ, ನಮ್ಮ ಗ್ರಾಪಂನಿಂದ ಸಹಕಾರ ಕೊಡಲು ಸಿದ್ಧರಾಗಿದ್ದೇವೆ. –ನರಸಿಂಹಮೂರ್ತಿ, ಉಪಾಧ್ಯಕ್ಷ, ಗಂಜಿಗುಂಟೆ ಗ್ರಾಪಂ.
ಗಂಜಿಗುಂಟೆ ಗ್ರಾಮದ ರೆಡ್ಡಿಕೆರೆಯ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಕೆರೆಯನ್ನು ಪ್ರವಾಸೋದ್ಯ ಮದ ಕೇಂದ್ರವಾಗಿ ಪರಿವರ್ತನೆ ಮಾಡುವ ಆಲೋಚನೆ ಇದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ರೆಡ್ಡಿಕೆರೆ ಸ್ವರೂಪ ಬದಲಾವಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿ, ತಾಲೂಕು ಮಾತ್ರವಲ್ಲದೆ, ಜಿಲ್ಲೆಯ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿ, ಕೆರೆ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. –ಮಹೇಶ್ ಪಿಡಿಒ, ಗಂಜಿಗುಂಟೆ ಗ್ರಾಪಂ
–ಎಂ.ಎ.ಅಬ್ದುಲ್ವಹಾಬ್