ಇಹೇಬಿ(29) ಬಂಧನವಾಗಿರುವ ನೈಜೀರಿಯ ಮೂಲದ ವ್ಯಕ್ತಿ. ನೈಜೀರಿಯಾ ಪ್ರಜೆ ಇಹೇಬಿಯಾ ಗಾಂಜಾ ಮತ್ತು ಕೊಕೇನ್ ಅಕ್ರಮವಾಗಿ ಕೆಆರ್ ಪುರ ಸುತ್ತಮುತ್ತ ಮಾರಾಟ ಮಾಡುತ್ತಿದ್ದ, ಅರೋಪಿ ಟಿ.ಸಿ.ಪಾಳ್ಯದಲ್ಲಿ ಕಳೆದ ನಾಲ್ಕು ತಿಂಗಳನಿಂದ ವಾಸವಾಗಿದ್ದ,
Advertisement
ಬಾಣಸವಾಡಿಯಲ್ಲಿ ನೆಲಸಿದ್ದ ತನ್ನ ಸ್ನೇಹಿತನ ಮನೆಗೆ ತೆರಳುತ್ತಿದ್ದಾಗ ಖಚಿತ ಮಾಹಿತಿನ್ನಾಧಾರಿಸಿ ಕೆಆರ್ ಪುರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಜಯರಾಜ್ ನೇತೃತ್ವದಲ್ಲಿ ಬೆಳಗ್ಗೆ 10.30 ರ ಸಮಯದಲ್ಲಿ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿರುವ ಸೆಂಟ್ ಅಂಥೋಣಿ ಚರ್ಚ್ ಬಳಿ ದಾಳಿ ಮಾಡಿದ ಪೊಲೀಸರು ಅತನ ಬಳಿಯಿದ್ದ 550 ಗ್ರಾಂ ಗಾಂಜಾ ಹಾಗೂ 10ಗ್ರಾಂ ಕೋಕೇನ್ ವಶಪಡಿಸಿಕೊಂಡು ಅರೋಪಿಯನ್ನು ನಾಯ್ನಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.