Advertisement

Ganja Peddler: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ಪೆಡ್ಲರ್‌ ಬಂಧನ

10:57 AM Sep 18, 2023 | Team Udayavani |

ಬೆಂಗಳೂರು: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ಪೆಡ್ಲರ್‌ನನ್ನು ಬಂಧಿಸಲಾಗಿದೆ.

Advertisement

ಕೋರಮಂಗಲ ನಿವಾಸಿ ಪ್ರವೀಣ್‌ (28) ಬಂಧಿತ. ಆರೋಪಿಯಿಂದ 12 ಲಕ್ಷ ರೂ. ಮೌಲ್ಯದ 20 ಕೆ.ಜಿ. 280 ಗ್ರಾಂ ತೂಕದ ಗಾಂಜಾ, 1,500 ರೂ. ನಗದು, 52 ಖಾಕಿ ಕವರ್‌ಗಳು ಹಾಗೂ ಎರಡು ಟ್ರಾಲಿ ಬ್ಯಾಗ್‌ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಅಪರಿಚಿತ ವ್ಯಕ್ತಿ ಆಟೋದಲ್ಲಿ ಮಾದಕವಸ್ತು ಸಾಗಿಸಿ ಗ್ರಾಹಕರಿಗೆ ಮಾರುತ್ತಿರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಮಾಲು ಸಹಿತ ಆರೋಪಿಯನ್ನು ಬಂಧಿಸಲಾಗಿದೆ.

ಒಡಿಶಾ ಮೂಲದ ಡ್ರಗ್ಸ್‌ ಪೆಡ್ಲರ್‌ಗಳು ಲಗೇಜ್‌ ಸಾಗಿಸುವ ಟ್ರಾಲಿ ಬ್ಯಾಗ್‌

ಗಳಲ್ಲಿ ಗಾಂಜಾ ಬಚ್ಚಿಟ್ಟು ರೈಲಿನಲ್ಲಿ ನಗರಕ್ಕೆ ತರುತ್ತಿದ್ದರು. ಬಳಿಕ ಆರೋಪಿ ಪ್ರವೀಣ್‌ ರೈಲು ನಿಲ್ದಾಣದಲ್ಲಿ ಆ ಟ್ರಾಲಿ ಬ್ಯಾಗ್‌ಗಳನ್ನು ಪಡೆದು ಪ್ಯಾಸೆಂಜರ್‌ ಆಟೋರಿಕ್ಷಾದಲ್ಲಿ ವಿವೇಕನಗರ ಹಾಗೂ ಸುತ್ತಮುತ್ತಲ ಸ್ಥಳಕ್ಕೆ ಸಾಗಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

ಈ ಸಂಬಂಧ ವಿವೇಕನಗರ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಕೇಸ್‌ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next