Advertisement

ಗಾಣಿಗ ಸಮಾಜ ಮುಂಬಯಿ ವಾರ್ಷಿಕ ಕ್ರೀಡೋತ್ಸವ 

04:53 PM Apr 18, 2017 | |

ಮುಂಬಯಿ: ಕ್ರೀಡೆ ಯೋಗ್ಯತೆ ಅಳೆಯುವ ಮಾಪನವಲ್ಲ. ಆರೋಗ್ಯ ಕಾಪಾ ಡುವ ಒಂದು ರೀತಿಯ  ಕಲೆ. ಈ ಕ್ರೀಡಾಕೂಟ ಸಮಾಜ ಬಾಂಧವರ ಪ್ರೀತಿ ತೋರುವ ಔದಾರ್ಯವೇ ಹೊರತು ಸ್ಪರ್ಧೆಯಲ್ಲ. ಹೆಚ್ಚುವರಿ ಪರಿಚಯ ಮಾಡಿಕೊಳ್ಳಲು ಅನುಕೂಲಕರ ಹಾಗೂ  ಸಂಬಂಧಗಳ ಅರಿವು ಪಡೆಯುವ ಉಪಾಯವೂ ಇದಾಗಿದೆ. ಜ್ಞಾನ ಎಲ್ಲದಕ್ಕಿಂತ ಶ್ರೇಷ್ಠವಾದದ್ದು,  ಅಂತೆಯೇ ಇಲ್ಲಿ ಪರಸ್ಪರ ಮಾತುಕತೆಯಿಂದ ಸ್ವಸಮುದಾಯದ ಸಂಸ್ಕೃತಿ, ಸಂಬಂಧಗಳ ಜ್ಞಾನೋದಯ ಸಾಧ್ಯವಾಗುತ್ತದೆ. ಏಕತಾ ಬದುಕು ವ್ಯರ್ಥವಾಗದಂತೆ ಸಾಂಘಿಕ ಜೀವನದ ಅರ್ಥ ಕಲ್ಪಿಸುವಲ್ಲಿ ಇಂತಹ ಅವ ಕಾಶಗಳು ಪೂರಕವಾಗಿವೆ ಎಂದು ಗಾಣಿಗ ಸಮಾಜ ಮುಂಬಯಿ ಇದರ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ ತಿಳಿಸಿದರು.

Advertisement

ಎ. 15ರಂದು ಬೆಳಗ್ಗೆ  ಗಾಣಿಗ ಸಮಾಜ ಮುಂಬಯಿ  ಸಂಸ್ಥೆಯು  ಮಾಟುಂಗಾ ಪೂರ್ವದ ಕಿಂಗ್ಸ್‌ ಸರ್ಕಲ್‌ನ ಜಿಎಸ್‌ಬಿ ನ್ಪೋರ್ಟ್ಸ್  ಕ್ಲಬ್‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ  ವಾರ್ಷಿಕ ಕ್ರೀಡಾಕೂಟ 2017 ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಸಂಭ್ರಮಗಳಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಂಘಟನೆ ಬಲಗೊಳಿಸಬೇಕು ಎಂದು ತಿಳಿಸಿದರು.

ಗಾಣಿಗ ಸಮಾಜ ಮುಂಬಯಿ ಸಂಸ್ಥೆಯ ಹಿರಿಯ ಸದಸ್ಯ ಅಣ್ಣಪ್ಪಯ್ಯ ಕೊಳಂಬೆ  ಅವರು ಕ್ರೀಡೋತ್ಸವ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬೆಂಗಳೂರಿನ  ಉದ್ಯಮಿ ಬಿ. ಎನ್‌. ರಾಮಕೃಷ್ಣ , ಸಂಪರ್ಕ ಸುಧಾ ಪತ್ರಿಕೆಯ ಸಂಪಾದಕ ಪ್ರಕಾಶಕ‌ ಯು. ಬಾಲಚಂದ್ರ ಕಟಪಾಡಿ, ಸದಾನಂದ ಕಲ್ಯಾಣು³ರ್‌ ಉಪಸ್ಥಿತರಿದ್ದರು. 

ಉದ್ಯಮಿ ರತ್ನಾಕರ್‌ ಎ. ಶೆಟ್ಟಿ ಥಾಣೆ ಬ್ಯಾಟಿಂಗ್‌ ಮಾಡಿ ಕ್ರಿಕೆಟ್‌ ಪಂದ್ಯಾಟಕ್ಕೆ ಚಾಲನೆ ನೀಡಿದರು. ಬಳಿಕ ಅಣ್ಣಪ್ಪಯ್ಯ ಕೊಳಂಬೆ ಅವರನ್ನು ಸಂಸ್ಥೆಯ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ  ಗೌರವಿಸಲಾಯಿತು.

ಬಾಲಚಂದ್ರ ಕಟಪಾಡಿ ಅವರು ಮಾತ ನಾಡಿ, ನಮ್ಮದು ಚಿಕ್ಕದಾದ ಹಿಂದುಳಿದ ಸಮುದಾಯ ಎನ್ನುವ ಮನೋಭಾವಕ್ಕಿಂತ ಒಗ್ಗಟ್ಟಿನ ಮೂಲಕ ಮುಂದುವರಿದ ಸಮಾಜ ಎನ್ನುವ ಭಾವನೆ ನಮ್ಮಲ್ಲಿರಲಿ. ಇದು ಕ್ರೀಡಾಕೂಟ ಮಾತ್ರವಲ್ಲ ಸಮಾಜದ ಒಗ್ಗೂಡು ವಿಕೆಯ ಅವಕಾಶವಾಗಿದೆ. ಇಲ್ಲಿ ಸ್ಪರ್ಧೆಗಿಂತ
ಭಾಗವಹಿಸುವಿಕೆ ಮುಖ್ಯವಾದುದು. ಸಮು ದಾಯ  ಒಗ್ಗೂಡುವಿಕೆ ಸಂಬಂಧಗಳನ್ನು ಬಲ ಪಡಿಸಲು ಸಹಕಾರಿಯಾಗಿವೆ. ಆದ್ದರಿಂದ ಕನಿಷ್ಠ ವರ್ಷಕ್ಕೆರಡು ಬಾರಿಯಾದರೂ ಸ್ವಸಮುದಾಯದ ಕಾರ್ಯಕ್ರಮಗಳಲ್ಲಿ ತೊಡಗಿಸಿ   ಅಸ್ಮಿತೆ ಬಲಪಡಿಸಬೇಕು ಎಂದರು.

Advertisement

 ಕೇರಂ, ಲೆಮನ್‌ ಆ್ಯಂಡ್‌ ಸ್ಪೂನ್‌, ಮ್ಯೂಸಿಕಲ್‌ ಚೇಯರ್‌, ಚಿತ್ರ ಬಿಡಿಸುವ ಸ್ಪರ್ಧೆ, ಬಾಲ್‌ ಇನ್‌ ಬಕೆಟ್‌, ವಿವಿಧ ಓಟಗಳ ಸ್ಪರ್ಧೆ, ಶಾಟ್‌ಫುಟ್‌, ತ್ರೋಬಾಲ್‌, ಕ್ರಿಕೆಟ್‌ ಪಂದ್ಯಾಟ ಸ್ಪರ್ಧೆಗಳಲ್ಲಿ ನೂರಾರು ಸಮಾಜ ಬಾಂಧವರು, ಯುವಕ ಯುವತಿಯರು, ಮಕ್ಕಳು ಭಾಗವಹಿಸಿದರು.
ಕ್ರೀಡಾಕೂಟದ ಉದ್ಘಾಟನಾ ಸಮಾ ರಂಭದಲ್ಲಿ ಗೌರವಾಧ್ಯಕ್ಷ ಜಗನ್ನಾಥ ಎಂ. ಗಾಣಿಗ, ಉಪಾಧ್ಯಕ್ಷರಾದ ಭಾಸ್ಕರ ಎಂ. ಗಾಣಿಗ, ಗೌರವ  ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ಆರ್‌. ಗಾಣಿಗ, ಜೊತೆ ಕಾರ್ಯದರ್ಶಿ ಬಿ. ಜಗದೀಶ್‌ ಗಾಣಿಗ, ಗೌರವ ಕೋಶಾಧಿಕಾರಿ ಜಯಂತ ಪದ್ಮನಾಭ ಗಾಣಿಗ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಆಶಾ ಹರೀಶ್‌ ತೋನ್ಸೆ, ಆರತಿ ಸತೀಶ್‌ ಗಾಣಿಗ, ವೀಣಾ ದಿನೇಶ್‌ ಗಾಣಿಗ, ಪೂರ್ಣಿಮಾ ಕಲ್ಯಾಣು³ರ್‌, ವೀಣಾ ರಾವ್‌ ಚೆಂಬೂರು, ನಿತೀಶ್‌ ಬಿ. ರಾವ್‌, ಗೋಪಾಲಕೃಷ್ಣ ಗೋವಿಂದ ಗಾಣಿಗ, ಜಯಂತ್‌ ಗಾಣಿಗ, ರಾಜೇಶ್‌ ಕುತ್ಪಾಡಿ, ರಘು ಗಾಣಿಗ ಚಕಲಾ, ಶುಭಾ ಗಣೇಶ್‌ ಕುತ್ಪಾಡಿ ಸೇರಿದಂತೆ ಇತರ ಪದಾಧಿಕಾರಿ ಗಳು, ಸದಸ್ಯರು, ಸಮಾಜ ಬಾಂಧವರು ಹಾಜರಿದ್ದರು.

ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೀಶ್‌ ಆರ್‌. ಕುತ್ಪಾಡಿ ಸ್ವಾಗತಿಸಿದರು. ರಾಮಚಂದ್ರ ಗಾಣಿಗ ಅತಿಥಿಗಳನ್ನು   ಗೌರವಿಸಿದರು. ಮಾಜಿ ಕಾರ್ಯದರ್ಶಿ ಬಿ. ವಿ. ರಾವ್‌ ಕಾರ್ಯಕ್ರಮ ನಿರೂಪಿಸಿ, ದರು. ಚಂದ್ರಶೇಖರ್‌ ಆರ್‌. ಗಾಣಿಗ  ವಂದಿಸಿದರು. 

ಚಿತ್ರ – ವರದಿ : ರೋನ್ಸ್‌   ಬಂಟ್ವಾಳ್‌ 

Advertisement

Udayavani is now on Telegram. Click here to join our channel and stay updated with the latest news.

Next