ಮುಂಬಯಿ: ನಾವು ಪ್ರತಿಯೊಬ್ಬ ಭಾರತೀಯ ಮತಪಂಥ ಪಂಗಡ, ಮೇಲು- ಕೀಳುಗಳೆಂಬ ಮನೋಭಾವದಿಂದ ಮುಕ್ತರಾಗಿ ಬಾಳಿದಾಗಲೇ ನಿಜಾರ್ಥದ ಸ್ವಾತಂತ್ರ್ಯ ಲಭಿಸು ವುದು. ಎಲ್ಲಿಯವರೆಗೆ ರಾಷ್ಟ್ರಾಭಿಮಾನ ಮತ್ತು ಮಾನವೀಯ ಮೌಲ್ಯಗಳನ್ನು ಮನದಟ್ಟು ಮಾಡಿ ಸೌಹಾರ್ದತೆ ಯಿಂದ ಬಾಳಲಾರೆವೋ ಅಲ್ಲಿಯ ವರೆಗೆ ಸಂಪೂರ್ಣ ಸ್ವಾತಂತ್ರ್ಯವು ಹುಸಿಯಾಗಿರುವುದು. ರಾಷ್ಟ್ರೀಯ ಭಾವೈಕ್ಯತೆ ನಮ್ಮಲ್ಲಿ ಮೂಡಿಸಿ ಬಾಳುವ ಅಗತ್ಯವಿದೆ. ಇದೇ ನಿಜವಾದ ಸ್ವಾತಂತ್ರ್ಯವಾಗಿದೆ. ಅದಕ್ಕಾಗಿ ಸ್ವಾತಂತ್ರ್ಯೋತ್ಸವ ಸಡಗರದಿಂದ ರಾಷ್ಟ್ರಾಭಿಮಾನ ಮೂಡಿಸಿಕೊಳ್ಳುವ ಅಗತ್ಯವಿದೆ ಎಂದು ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ ಅವರು ನುಡಿದರು.
ಕುರ್ಲಾ ಪೂರ್ವದ ಗುಲ್‌ರಾಜ್ ಟವರ್‌ನಲ್ಲಿನ ಗಾಣಿಗ ಸಮಾಜ ಮುಂಬಯಿ ಕಚೇರಿಯಲ್ಲಿ ಆ. 15ರಂದು ನಡೆದ 71ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ಧ್ವಜಾರೋಹಣಗೈದು ಬಳಿಕ ಸಂಸ್ಥೆಯ ವಿದ್ಯೋದಯ ಸಮಿತಿ ಆಯೋಜಿಸಿದ್ದ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ಭಾಸ್ಕರ ಎಂ. ಗಾಣಿಗ, ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್. ಗಾಣಿಗ, ಗೌರವ ಕೋಶಾಧಿಕಾರಿ ಜಯಂತ ಪದ್ಮನಾಭ ಗಾಣಿಗ, ವಿದ್ಯೋದಯ ಸಮಿತಿಯ ಕಾರ್ಯಾಧ್ಯಕ್ಷ ವಿಜಯೇಂದ್ರ ಗಾಣಿಗ, ಯುವ ವಿಭಾಗಾಧ್ಯಕ್ಷ ಗಣೀಶ್ ಆರ್. ಕುತ್ಪಾಡಿ, ಯು. ಬಾಲಕೃಷ್ಣ ಕಟಪಾಡಿ ವೇದಿಕೆಯಲ್ಲಿಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ಜಗದೀಶ್ ಗಾಣಿಗ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರಾಜೇಶ್ ಕುತ್ಪಾಡಿ, ಆರತಿ ಸತೀಶ್ ಗಾಣಿಗ, ವೀಣಾ ದಿನೇಶ್ ಗಾಣಿಗ, ದಿನೇಶ್ ರಾವ್ ಟಿ. ಎಸ್., ನರೇಂದ್ರ ರಾವ್, ವಿನಾಯಕ ಭಟ್ಕಳ, ದಿನೇಶ್ ಗಾಣಿಗ ಭಾಯಂದರ್, ಗಂಗಾಧರ ಎನ್. ಗಾಣಿಗ ಕಚೇರಿ ಉಸ್ತುವಾರಿ ಪದ್ಮನಾಭ ಎನ್. ಗಾಣಿಗ ಮತ್ತಿತರರು ಹಾಜರಿದ್ದರು.
ಸ್ವಾತಂತ್ರÂ ಪಡೆಯುವಲ್ಲಿ ನಮ್ಮ ಸಾವಿರಾರು ಪೂರ್ವಜರು, ಯೋಧರು, ಸೈನಿಕರು, ದೇಶಭಕ್ತರು ದುಡಿದು, ದೇಶಕ್ಕಾಗಿ ತಮ್ಮ ಜೀವವನ್ನು ಬಲಿದಾನವಾಗಿಸಿದ ಫಲವೇ ಈ ರಾಷ್ಟ್ರೋತ್ಸವ ಸಾಧ್ಯವಾಗಿದೆ. ಇದು ಆಚರಣೆಗಿಂತ ಸ್ವಾತಂತ್ರÂಕ್ಕಾಗಿ ಬಲಿದಾನಗೈದ ಪ್ರತಿಯೊಬ್ಬರಿಗೆ ಕೃತಜ್ಞತಾ ಭಾವ ಅರ್ಪಿಸುವ ಸುದಿನವಾಗಿದೆ ಎಂದು ಬಿ. ವಿ. ರಾವ್ ನುಡಿದು ಶುಭ ಹಾರೈಸಿದರು.
ಇಂದು ದೇಶಾದ್ಯಂತ ಅಲ್ಲಲ್ಲಿ ಸ್ವಾತಂತ್ರೊÂàತ್ಸವದ ಸಂಭ್ರಮ ನಿಜ. ಆದರೆ ನಾವುಗಳು ಇದನ್ನು ಗಳಿಸುವಲ್ಲಿ ಶ್ರಮಿಸಿದವರ ಮನೋಭಾವವನ್ನು ತಿಳಿಯುತ್ತ ಸಂಭ್ರಮಿಸಿದಾಗ ಅರ್ಥಗರ್ಭಿತ ಆಚರಣೆ ಸಾಧ್ಯ ಎಂದು ಬಾಲಕೃಷ್ಣ ಕಟಪಾಡಿ ತಿಳಿಸಿದರು.
ಗಾಣಿಗ ಸಮಾಜದ ಗಣ್ಯರೂ ರಾಷ್ಟ್ರದ ಸ್ವಾತಂತ್ರÂದ ಹಿಂದಿನ ಶಕ್ತಿಗಳಾಗಿದ್ದರು. ಇದನ್ನು ನಮ್ಮ ಯುವಜನತೆಗೆ ತಿಳಿಸುವ ಅಗತ್ಯವಿದೆ. ಆ ಮೂಲಕ ಮೂಲಭೂತ ಸೌಕರ್ಯ ವಂಚಿತವಾಗದಂತೆ ನಮ್ಮ ಸಮಾಜದ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಕೊಡಿಸುವಲ್ಲಿ ಇಂತಹ ವಿದ್ಯಾರ್ಥಿ ವೇತನ ಪ್ರದಾನ ಕಾರ್ಯಕ್ರಮಗಳು ಮಹತ್ವದ್ದಾಗಿದೆ ಎಂದು ವಿಜಯೇಂದ್ರ ಗಾಣಿಗ ನುಡಿದರು.
ಕು| ಈಶಾ ರಾಜೇಶ್ ಗಾಣಿಗ ಸ್ವತ್ಛ ಭಾರತದ ಬಗ್ಗೆ ಸ್ವರಚಿತ ಕವನವನ್ನು ಸಂಗೀತ ಮೂಲಕ ಪ್ರಸ್ತುತ ಪಡಿಸಿದರು. ಮಾಜಿ ಕಾರ್ಯದರ್ಶಿ ಬಿ. ವಿ. ರಾವ್ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ಆರ್. ಗಾಣಿಗ ವಂದಿಸಿದರು. ಸಮಾಜ ಬಾಂಧವರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲುಗೊಂಡಿದ್ದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್