Advertisement

ಶಾಸ್ತ್ರೀ ಅಧಿಕಾರಕ್ಕೆ ಕತ್ತರಿ ಹಾಕಿದರಾ ಗಂಗೂಲಿ?

03:50 AM Jul 13, 2017 | Harsha Rao |

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ಎಂದು ರವಿಶಾಸ್ತ್ರೀ ಹೆಸರನ್ನು ಪ್ರಕಟಿಸುವ ಮುನ್ನ ಬಿಸಿಸಿಐನಲ್ಲಿ ಭಾರೀ ವಾದವಿವಾದಗಳು ನಡೆದಿದ್ದವಾ? ಹೌದು ಎನ್ನುತ್ತವೆ ಕೆಲ ಮೂಲಗಳು. ಮಂಗಳವಾರ ರಾತ್ರಿ ಕೋಚ್‌ ಹೆಸರನ್ನು ಅಧಿಕೃತವಾಗಿ ಪ್ರಕಟಿಸುವ ಮುನ್ನ ಬಿಸಿಸಿಐ ಸೃಷ್ಟಿಸಿದ ಅವಾಂತರಗಳನ್ನು ಗಮನಿಸಿದರೆ ಇದನ್ನು ಹೌದು ಎಂದು ಒಪ್ಪಿಕೊಳ್ಳದೇ ವಿಧಿಯಿಲ್ಲ.

Advertisement

ಮೂಲಗಳ ಪ್ರಕಾರ, ರವಿಶಾಸ್ತ್ರೀಯನ್ನು ಆಯ್ಕೆ ಮಾಡಲು ಬಿಸಿಸಿಐ ಸಲಹಾ ಸಮಿತಿ ಸದಸ್ಯ ಗಂಗೂಲಿಗೆ ಇಷ್ಟವಿರಲಿಲ್ಲವಂತೆ. ಸಲಹಾ ಸಮಿತಿಯ ಮತ್ತೂಬ್ಬ ಸದಸ್ಯ ಸಚಿನ್‌ ತೆಂಡುಲ್ಕರ್‌, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಒತ್ತಾಸೆಯೇ ಶಾಸ್ತ್ರೀ ಆಯ್ಕೆಗೆ ಕಾರಣ ಎನ್ನಲಾಗಿದೆ.

ರವಿಶಾಸ್ತ್ರೀಯನ್ನು ಒಪ್ಪಿಕೊಳ್ಳುವಂತೆ ಸಚಿನ್‌, ಗಂಗೂಲಿಯ ಮನವೊಲಿಸಿದ ರಂತೆ. ತಂಡದ ಆಟಗಾರರು, ನಾಯಕ ಕೊಹ್ಲಿ ಶಾಸ್ತ್ರೀಯನ್ನು ಬಯಸುತ್ತಿದ್ದಾರೆ. ಆದ್ದರಿಂದ ಶಾಸ್ತ್ರೀಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸಚಿನ್‌ ಹೇಳಿದ್ದನ್ನು ಗಂಗೂಲಿ ಮಾನ್ಯ ಮಾಡಿದರು. ಮತ್ತೂಂದು ಕಡೆ ವಿರಾಟ್‌ ಕೊಹ್ಲಿ, ರವಿಶಾಸ್ತ್ರೀಯೇ ಬೇಕೆಂದು ಬಲವಾಗಿ ಹಠ ಹಿಡಿದ ಕಾರಣ ಶಾಸ್ತ್ರೀಯನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು ಎನ್ನಲಾಗಿದೆ.

ರವಿಶಾಸ್ತ್ರೀ ಅಧಿಕಾರಕ್ಕೆ ಕತ್ತರಿ: ಆದರೆ ರವಿಶಾಸ್ತ್ರೀಯನ್ನು ಒಪ್ಪಿಕೊಳ್ಳುವುದಕ್ಕೂ ಮುನ್ನ ಗಂಗೂಲಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಬೌಲಿಂಗ್‌ ಕೋಚ್‌ ಆಗಿ ಭರತ್‌ ಅರುಣ್‌ ಬೇಕೆಂಬ ರವಿಶಾಸ್ತ್ರೀ ಬೇಡಿಕೆಯನ್ನು ಒಪ್ಪಿಲ್ಲ. ಬದಲಿಗೆ ಜಹೀರ್‌ ಖಾನ್‌ರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದು ಹಠ ಹಿಡಿದಿದ್ದಾರೆ. ಇದಕ್ಕೆ ಬಿಸಿಸಿಐ ಒಪ್ಪಿದೆ. ಆಗ ಗಂಗೂಲಿಯು ತಣ್ಣಗಾಗಿದ್ದಾರೆ. ಮತ್ತೂಂದು ರಾಹುಲ್‌ ದ್ರಾವಿಡ್‌ರನ್ನು ವಿದೇಶ ಪ್ರವಾಸದ ಕೆಲ ನಿರ್ದಿಷ್ಟ ಸಂದರ್ಭದಲ್ಲಿ ಬ್ಯಾಟಿಂಗ್‌ ಸಲಹಾಗಾರರನ್ನಾಗಿ ನೇಮಿಸಲಾಗಿದೆ. ಇವೆಲ್ಲ ಮೂಲಕ ರವಿಶಾಸ್ತ್ರೀ ಅಧಿಕಾರಕ್ಕೆ ಕತ್ತರಿ ಹಾಕಲಾಗಿದೆ ಎನ್ನುವುದು ಊಹೆಗಳು.

2016ರಲ್ಲೂ ಕೋಚ್‌ ಹುದ್ದೆಗೆ ಸಂದರ್ಶನ ನಡೆದಾಗ ರವಿಶಾಸ್ತ್ರೀ ಸ್ಪರ್ಧೆ ಯಲ್ಲಿದ್ದರು. ಆಗಲೂ ಗಂಗೂಲಿಯ ವಿರೋಧ ಕಾರಣ ಅನಿಲ್‌ ಕುಂಬ್ಳೆ ಆಯ್ಕೆಯಾಗಿದ್ದರು. ಇದಾದ ನಂತರ ರವಿಶಾಸ್ತ್ರೀ ಮತ್ತು ಗಂಗೂಲಿ ಸಂಬಂಧ ತೀವ್ರ ಹದ ಗೆಟ್ಟಿತ್ತು. ಈ ಬಾರಿ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿ ಕರೆದಿದ್ದಾಗ ಆರಂಭದಲ್ಲಿ ರವಿಶಾಸ್ತ್ರೀ ಕಣಕ್ಕಿಳಿದಿರಲಿಲ್ಲ. ಅನಿಲ್‌ ಕುಂಬ್ಳೆ ವಿದಾಯದ ಬಳಿಕ ಬಿಸಿಸಿಐ ಗಡುವನ್ನು ವಿಸ್ತರಿಸಿತು. ಆಗ ರವಿಶಾಸ್ತ್ರೀ ಅರ್ಜಿ ಹಾಕಿದರು. ಅಂತಿಮವಾಗಿ ಕೋಚ್‌ ಹುದ್ದೆ ಪಡೆಯಲು ಯಶಸ್ವಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next