Advertisement
ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ದಿಂದ ಒಂದು ತಿಂಗಳ ಮೊದಲು ಆರಂಭ ವಾಗಬೇಕಿದ್ದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಈಗ ತಾನೇ ಶುರುವಾಗಿದೆ. ಸಮುದ್ರದಲ್ಲಿ ತೂಫಾನ್ ಎದ್ದಿದ್ದರಿಂದ ಈವರೆಗೆ ಸಮುದ್ರ ಬಿರುಸಾಗಿದ್ದು, ಗಾಳಿಯ ಒತ್ತಡವೂ ಹೆಚ್ಚಾಗಿತ್ತು. ಈ ಸಮಯದಲ್ಲಿ ಕಡಲಿಗಿಳಿ ಯುವುದು ಅಪಾಯಕಾರಿ ಎನ್ನುವ ಕಾರಣಕ್ಕೆ ದೋಣಿಗಳು ಮೀನುಗಾರಿಕೆಗೆ ತೆರಳಿರಲಿಲ್ಲ.
ನಾಡದೋಣಿ ಮೀನುಗಾರಿಕೆಯೇನೋ ಆರಂಭವಾಗಿದೆ. ಆದರೆ ಮಳೆಗಾಲದ ಮೀನುಗಾರಿಕಾ ಋತು ಮುಗಿಯಲು ಬಾಕಿ ಇರುವುದು ಬರೀ 5 ದಿನ ಮಾತ್ರ. ಅನಂತರ ಯಾಂತ್ರೀಕೃತ ಬೋಟುಗಳು ಕಡಲಿಗಿಳಿದರೆ ನಾಡದೋಣಿಗಳಿಗೆ ಮೀನುಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ. ಗ್ರಹಣ ಭೀತಿ
ಜು. 27ರಂದು ಗ್ರಹಣ ಕೂಡ ಇರುವು ದರಿಂದ ಗ್ರಹಣದ ಸಮಯದಲ್ಲಿಯೇ ಸಾಮಾನ್ಯವಾಗಿ ಕಡಲು ಮತ್ತಷ್ಟು ಪ್ರಕ್ಷುಬ್ಧ ಗೊಂಡರೆ ಮತ್ತೆ ನಾಡದೋಣಿಗಳಿಗೆ ಮೀನುಗಾರಿಕೆ ನಡೆಸಲು ಕಷ್ಟವಾಗಲಿದೆ. ಅದೇ ಭೀತಿಯಲ್ಲಿ ಗುರುವಾರ ಗಂಗೊಳ್ಳಿ ಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದಾರೆ.
ಸರಿ ಸುಮಾರು 60 ದಿನಗಳಿಂದ ಮೀನು ಗಾರಿಕೆ ಸ್ಥಗಿತಗೊಂಡಿದ್ದರಿಂದ ಮಾರುಕಟ್ಟೆ ಯಲ್ಲಿ ತಾಜಾ ಮೀನುಗಳು ಸಿಗುತ್ತಿರಲಿಲ್ಲ. ಅದಲ್ಲದೆ ಹೊರಗಡೆಯಿಂದ ತರಿಸುವ ಮೀನುಗಳ ಬೆಲೆಯೂ ಗಗನಕ್ಕೇರಿತ್ತು. ಆದರೆ ಈಗ ನಾಡದೋಣಿಗಳು ಕಡಲಿಗಿಳಿ ದಿದ್ದರಿಂದ ತಾಜಾ ಮೀನುಗಳ ಕೊರತೆ ನೀಗಲಿದೆ.
Related Articles
ಗಂಗೊಳ್ಳಿ, ಕೋಡಿ, ಉಪ್ಪುಂದ ಭಾಗದ ಎಲ್ಲ 600 ದೋಣಿಗಳು ಸಹ ಗುರುವಾರ ಕಡಲಿಗಿಳಿದಿವೆ. ಎಲ್ಲ ದೋಣಿಗಳಿಗೂ ಮೊದಲ ದಿನ ಒಳ್ಳೆಯ ಪ್ರಮಾಣದಲ್ಲಿ ಚಟಿ ಹಾಗೂ ಮೀನುಗಳು ಸಿಕ್ಕಿರುವುದು ಮೀನುಗಾರರಿಗೆ ಖುಷಿ ತಂದಿದೆ ಎಂದು ಗಂಗೊಳ್ಳಿ ನಾಡದೋಣಿ ಸಂಘದ ಅಧ್ಯಕ್ಷ ಮಂಜು ಬಿಲ್ಲವ ತಿಳಿಸಿದ್ದಾರೆ.
Advertisement