Advertisement

ಭಾವೈಕ್ಯತೆ ಸಾರುವ ಗಂಗೋದಕ

04:41 AM Jun 26, 2020 | Lakshmi GovindaRaj |

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹೊಸಬಗೆಯ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಆ ಪೈಕಿ “ಗಂಗೋದಕ ‘ ಎಂಬ ಚಿತ್ರವೂ ಸೇರಿದೆ. ಸದ್ಯಕ್ಕೆ ಚಿತ್ರೀಕರಣ ಮುಗಿಸಿರುವ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈಗಾಗಲೇ ಚಿತ್ರದ  ಟ್ರೇಲರ್‌ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಪ್ರಶಂಸೆ ಪಡೆದಿದೆ. ಇದೊಂದು ಭಾವೈಕ್ಯತೆ ಸಾರುವಂತಹ ಸಿನಿಮಾ. ಅದರಲ್ಲೂ ಜಾತಿ, ಧರ್ಮ ಕುರಿ ತಾದ ಸೂಕ್ಷ್ಮ ವಿಷಯಗಳನ್ನು ಹೊಂದಿರುವ ಸಿನಿಮಾವಿದು.

Advertisement

ಆ್ಯಕ್ಷನ್‌  ಕಟ್‌ ಪಿಕ್ಚರ್‌ ಹೌಸ್‌ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗಿದೆ. ಶ್ರೀಧರ್‌ ಹೆಗಡೆ ನಿರ್ದೇಶನ ಮಾಡಿದರೆ, ರಘು ಕಲಾ ವಿದ ನಿಮಾರ್ಣವಿದೆ. ಚಿತ್ರದಲ್ಲಿ ಐಕ್ಯತೆ ವಿಷಯಗಳಿವೆ. ಇಂದಿಗೂ ಜಾತಿ, ಧರ್ಮದ ಮಾತಿದೆ. ಚಿತ್ರದಲ್ಲಿ ಮುಸಲ್ಮಾನ  ಹುಡುಗನ ಬಾಯಲ್ಲಿ ಭಗವದ್ಗೀತೆ ಬಂದರೆ, ಏನೆಲ್ಲಾ ತೊಂದರೆ ಆಗುತ್ತೆ, ಆಗಲ್ಲ ಅನ್ನೋ ಸೂಕ್ಷ್ಮತೆ ಇಲ್ಲಿದೆ. ಒಟ್ಟಾರೆ, ಇದೊಂದು ಭಾವುಕತೆಯನ್ನು ಹೆಚ್ಚಿಸುವ ಸಾಮಾಜಿಕ ಸಮಸ್ಯೆ ಗಳನ್ನು ಬಿಂಬಿಸುವ ಕಥಾಹಂದರ ಹೊಂದಿದೆ.

ಚಿತ್ರಕ್ಕೆ  ಪ್ರವೀಣ್‌ಕುಮಾರ್‌ ,ಮೋಹನ್‌ಕುಮಾರ್‌, ರಮೇಶ್‌, ಪ್ರಸನ್ನ ರಮಲತಾ, ಗಿರಿಧರ್‌, ಸುನಿಲ್‌ ಸನ್ನಿ ಸಹ ನಿರ್ಮಾಣವಿದೆ. ಕೃಷ್ಣ ನಾಯಕ್‌ ಛಾಯಾಗ್ರಹಣ ಮಾಡಿದರೆ, ಉದಯ್‌ ಸಂಭಾಷಣೆ, ಚಿತ್ರಕಥೆ ಮಾಡಿ ದ್ದಾರೆ. ನಿತಿನ್‌ ಕುಮಾರ್‌  ಸಂಗೀತವಿದೆ. ಪ್ರಜ್ವಲ್‌ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ರಮೇಶ್‌ ಪಂಡಿತ್‌ ಹೈಲೈಟ್‌. ಅವರ ಮಗಳ ಪಾತ್ರದಲ್ಲಿ ಶ್ರುತಿ ಶಂಕರ್‌ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕೃಷ್ಣ ನಾಡಿಗ್‌, ನಾಗರಾಜ್‌ ರಾವ್‌, ಶ್ರೀಧರ್‌, ಮಾಲಿನಿ ರಾವ್‌,ಶಾಲಿನಿ,  ಇತರರು ಇದ್ದಾರೆ.

ಚಿತ್ರ ಇಷ್ಟರಲ್ಲೆ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು, ಗಂಗೋದಕ ಚಿತ್ರದಲ್ಲಿ ನಟಿಸಿರುವ ಶ್ರುತಿ ಶಂಕರ್‌ ಅವರು ಮೂಲತಃ ಡಬ್ಬಿಂಗ್‌ ಕಲಾವಿದೆ. ತಮ್ಮ ಧ್ವನಿ ನೀಡುವ ಮುನ್ನ ಅವರು ಗಾಯಕಿಯಾ ಗಿಯೂ  ಗುರುತಿಸಿಕೊಂಡವರು. ಕನ್ನಡದ ಬಹುತೇಕ ನಟಿಯರಿಗೆ ವಾಯ್ಸ್‌ ಕೊಡುವ ಮೂಲಕ ಆ ನಟಿಯರ ಪಾತ್ರಕ್ಕೆ ಜೀವ ತುಂಬುವಂತಹ ಕೆಲಸ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next