Advertisement

ಗಂಗಾವತಿ : ಸ್ವಯಂಪ್ರೇರಿತ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ ವಾರ್ಡ್ ನಿವಾಸಿಗಳು

07:14 PM May 15, 2021 | Team Udayavani |

ಗಂಗಾವತಿ: ಕೊರೊನಾ ರೋಗದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ನಗರದ ಪೀರಜಾದ್ ಗಲ್ಲಿಯ ನಿವಾಸಿಗಳು ಸ್ವಯಂ ಪ್ರೇರಣೆ ರಸ್ತೆಗೆ ಮುಳ್ಳು ಬೇಲಿ ಹಾಕಿ ಬೆದರುಗೊಂಬೆ ನಿಲ್ಲಿಸಿದ್ದಾರೆ. ಹೆಚ್ಚು ಜನರು ಹಾಗೂ ಸೋಂಕಿತರನ್ನು ಮತ್ತು ಕೊರೊನಾ ದಿಂದ ಮೃತರಾದವರನ್ನು ಸಾಗಿಸಲು ಅಂಬುಲೆನ್ಸ್ ಗಳು ಹೆಚ್ಚಾಗಿ‌ ಇದೇ ದಾರಿ ಬಳಸುವುದರಿಂದ ವಾರ್ಡಿನ ಜನರಲ್ಲಿ ಆತಂಕವುಂಟಾಗಿದ್ದು ಸ್ವಯಂ ಪ್ರೇರಿತರಾಗಿ ಮುಳ್ಳು ಬೇಲಿ ಹಾಕಿ ಜನ ಹಾಗೂ ವಾಹನಗಳು ಸಂಚರಿಸದಂತೆ ತಡೆದಿದ್ದಾರೆ.

Advertisement

ಈಗಾಗಲೇ ನಗರದ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಸರಕಾರಿ ಆಸ್ಪತ್ರೆಗೆ ಹೋಗಲು ಪೀರಜಾದ್ ಗಲ್ಲಿಯ ರಸ್ತೆ ಬಳಸಲಾಗುತ್ತಿದೆ. ಸಣ್ಣ ರಸ್ತೆ ಇರುವುದರಿಂದ ಹೊಸಳ್ಳಿ, ಲಕ್ಷ್ಮಿಕ್ಯಾಂಪ್, ನೀಲಕಂಠೇಶ್ವರ ಕ್ಯಾಂಪ್, ಮುರಾರಿ ಕ್ಯಾಂಪ್,ಅಂಬೇಡ್ಕರ್ ನಗರ‌ ಪ್ರದೇಶಕ್ಕೆ ಹೋಗಲು ಪಾದಚಾರಿಗಳಿಗೆ ಇದು ಒಳ ರಸ್ತೆಯಾಗಿದ್ದು ಇಲ್ಲಿ ಹೆಚ್ಚಾಗಿ ಅಂಬುಲೆನ್ಸ್ ಗಳು ಸಂಚಾರ ಮಾಡುತ್ತಿದ್ದವು ಇದನ್ನು ನಿಲ್ಲಿಸಲು ಸ್ಥಳೀಯರು ರಸ್ತೆಗೆ ಮುಳ್ಳು ಬೇಲಿ ಹಾಕಿದ್ದಾರೆ.

ಇದನ್ನೂ ಓದಿ :ಶಿಡ್ಲಘಟ್ಟ : ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿ ಕ್ಯಾಮೆರಾದ DVR ಹೊತ್ತೊಯ್ದ ಕಳ್ಳರು

Advertisement

Udayavani is now on Telegram. Click here to join our channel and stay updated with the latest news.

Next