Advertisement

Gangavati; ಹೋಳಿಗೆ ಡಿಜೆ ಕಟ್ಟುನಿಟ್ಟಿನ ನಿಷೇಧ: ಪೊಲೀಸ್ ಇಲಾಖೆ ಸ್ಪಷ್ಟನೆ

09:32 PM Mar 21, 2024 | Team Udayavani |

ಗಂಗಾವತಿ: ಈ ಬಾರಿಯ ಹೋಳಿ ಹಬ್ಬದ ರಂಗ ಪಂಚಮಿ ಸಂದರ್ಭದಲ್ಲಿ ಡಿ ಜೆ ಹಾಕಲು ಪರವಾನಿಗೆ ನಿಷೇಧಿಸಲಾಗಿದೆ ಎಂದು ಡಿ.ವೈ.ಎಸ್. ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿದರು.

Advertisement

ನಗರ ಪೊಲೀಸ್ ಠಾಣಾ ಸಭಾಂಗಣದಲ್ಲಿ ಹೋಳಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಯಾವುದೇ ಡಿಜೆ ಆಚರಣೆ ಸಂಪೂರ್ಣವಾಗಿ ನಿಷೇಧಿಸುವಂತೆ ಸೂಚನೆಯ ಹಿನ್ನೆಲೆಯಲ್ಲಿ ಹೋಳಿ ಹಬ್ಬ ಕಾಮದಾನ ಸಂದರ್ಭದಲ್ಲಿ ಮತ್ತು ರಂಗ ಪಂಚಮಿಯಂದು ಸಾರ್ವಜನಿಕರಿಗೆ ಬಣ್ಣ ಹಾಕಲು ಪರವಾನಿಗೆ ನೀಡುವುದಿಲ್ಲ. ಮತ್ತು ವೇದಿಕೆ ನಿರ್ಮಿಸಿ ಕಾರ್ಯಕ್ರಮ ಮಾಡಲು ಚುನಾವಣಾಧಿಕಾರಿಗಳ ಪರವಾನಿಗೆ ಅಗತ್ಯವಾಗಿರುತ್ತದೆ.ಯಾವುದೇ ಮೆರವಣಿಗೆ ಹಾಗೂ ಹೆಚ್ಚು ಜನ ಗುಂಪು ಸೇರಲು ಅವಕಾಶವಿರುವುದಿಲ್ಲ’ ಎಂದು ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಸೂಕ್ಷ್ಮ ಮತ್ತು ಅದೇ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಮುನ್ನೆಚ್ಚರಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಲ್ಲಾ ಕೋಮುಗಳ ಜನರು ಪೊಲೀಸ್ ಇಲಾಖೆ ಮತ್ತು ಚುನಾವಣಾ ಆಯೋಗದ ನಿಯಮಗಳಿಗೆ ಮನ್ನಣೆ ನೀಡಿ ಶಾಂತಿ ಸೌಹಾರ್ದತೆ ಕಾಪಾಡಬೇಕು. ಹೋಳಿ ಹಬ್ಬದ ಸಂದರ್ಭದಲ್ಲಿ ಕಾಮದಾನ ಮತ್ತು ರಂಗ ಪಂಚಮಿ ಎಂದು ಬಣ್ಣದಾಟವ ಪರಸ್ಪರ ಬಣ್ಣ ಹಚ್ಚುವಾಗ ಯಾವುದೇ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು.ಹಬ್ಬಗಳು ಎಲ್ಲಾ ಸಮುದಾಯದವರನ್ನು ಒಂದುಗೂಡಿಸುವ ಪವಿತ್ರ ಆಚರಣೆಗಳಾಗಿವೆ. ಆಚರಣೆಯಲ್ಲಿ ಯಾವುದೇ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

ಸಭೆಯಲ್ಲಿ ನಗರ ಠಾಣೆಯ ಪಿ ಐ ವಾಸು ಕುಮಾರ್, ಗ್ರಾಮೀಣ ಠಾಣೆಯ ಸಿಪಿಐ ಸೋಮಶೇಖರ್ ಜುಟ್ಟಲ್, ಸಮಾಜದ ಮುಖಂಡರಾದ ಹೊಸಳ್ಳಿ ಶಂಕರಗೌಡ, ಜೋಗದ ನಾರಾಯಣಪ್ಪ ಜೋಗದ ಹನುಮಂತಪ್ಪ, ಜಿಲಾನಿ ಪಾಷಾ, ಪಂಪಣ್ಣ ನಾಯಕ, ವಿನಯ್ ಪಾಟೀಲ್, ಸಂಗಮೇಶ್ ಅಯೋಧ್ಯೆ, ಶೇಕ್ ಇಲಿಯಾಸ್ ಬಾಬಾ ,ಮೊಹಮ್ಮದ್ ಉಸ್ಮಾನ್ ದಾನಪ್ಪ ದರೋಜಿ, ಪರಶುರಾಮ ಕಿರಿಕಿರಿ ಬಸವರಾಜ್ ಮಾಂತ ಗೊಂಡ ,ಪ್ರಸಾದ್ ,ಅರ್ಜುನ್ ನಾಯಕ ಸೇರಿದಂತೆ ಎಲ್ಲಾ ಸಮಾಜಗಳ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next