Advertisement

ಗಂಗಾವತಿ: ಸತತ ಮಳೆ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಅಳವಡಿಸಿಕೊಳ್ಳಲು ಮನವಿ

05:16 PM Dec 13, 2022 | Team Udayavani |

ಗಂಗಾವತಿ: ಮೌಂಡಸ್ ಚಂಡಮಾರುತ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಮತ್ತು ಮಳೆಯಾಗುತ್ತಿದ್ದು ಜಿಲ್ಲೆಯ ನೀರಾವರಿ ಮತ್ತು ಮಳೆಯಾಧಾರಿತ ಕೃಷಿ ಮಾಡುವ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಕೃಷಿ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆಯ ಮಾಹಿತಿ ಆಧರಿಸಿ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಕೃಷಿ ವಿಜ್ಞಾನಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ|ರಾಘವೇಂದ್ರ ಎಲಿಗಾರ ಹಾಗೂ ಹವಾಮಾನ ಶಾಸ್ತ್ರ ವಿಷಯತಜ್ಞ ಡಾ| ಫಕೀರಪ್ಪ ಅರಭಾಂವಿ ಪ್ರಕಟಣೆಗೆ ತಿಳಿಸಿದ್ದಾರೆ.

Advertisement

ಎರಡು ಮೂರು ದಿನಗಳಿಂದ ಗಂಗಾವತಿ ಭಾಗದಲ್ಲಿ ಸುಮಾರು 40 ಮಿ.ಮೀ ಮಳೆಯಾಗಿದ್ದು ಹಾಗೂ ವಾತಾವರಣದಲ್ಲಿ ಕಡಿಮೆ ಉಷ್ಣಾಂಶವಿರುವುದರಿಂದ, ಬೆಳೆಯ ಬೆಳವಣಿಗೆ ಕುಂಠಿತಕೊಂಡಿದ್ದು ಹಾಗೂ ಕೆಲವು ಬೆಳೆಗಳಲ್ಲಿ ಮೊಗ್ಗು ಮತ್ತು ಹೂ ಉದುರುವಿಕೆಕಂಡು ಬಂದಲ್ಲಿ ಹಾವಾಮಾನ ಮುನ್ಸೂಚನೆ ತಿಳಿದುಕೊಂಡು, 0.25 ಮಿ.ಲೀ ಪ್ಲಾನೋಪಿಕ್ಸ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಶೇಂಗಾ ಬೆಳೆಯಲ್ಲಿ ರಬ್ಬರ್ ಹುಳುವಿನ ನಿರ್ವಹಣೆಗಾಗಿ 0.5 ಮಿ.ಲೀ ಲ್ಯಾಂಬ್ಡಾಸೈಯಲೋಥ್ರಿನ್ 5 ಇ.ಸಿ ಅಥವಾ 0.2 ಗ್ರಾಂ. ಇಮಾಮೆಕ್ಟಿನ್ ಬೆಂಜೋಯೇಟ್‌ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಸತತವಾಗಿ ಮೋಡಕವಿದ ವಾತಾವರಣವಿರುವುದರಿಂದ ಶೇಂಗಾ ಬೆಳೆಯು ಹಳದಿ ಬಣ್ಣಕ್ಕೆ ತಿರುಗಿದ್ದು, 19:19:19 ಅಥವಾ 20 ಗ್ರಾಂ.ಯೂರಿಯಾ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಡಿಸೆಂಬರ್ ತಿಂಗಳಲ್ಲಿ ಮಾವು ಬೆಳೆಗೆ ಹೂ ಬಿಡುವುದಕ್ಕೆ ಮುಂಚಿತವಾಗಿ 5 ಗ್ರಾಂ.ಮಾವು ಸ್ಪೆಷಲ್ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.ಮಾವು ಬೆಳೆಯಲ್ಲಿ ಜಿಗಿಹುಳು ಕಂಡು ಬಂದಲ್ಲಿ ಥಯಾಮೆಥಾಕ್ಸಾಮ್ 0.3 ಗ್ರಾಂ.ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.ಕೋಳಿ ಗೂಡಿನ ಸುತ್ತಲೂ ನೀರು ನಿಲ್ಲುವುದನ್ನುತಡೆಗಟ್ಟಬೇಕು ಹಾಗೂ ಕೋಳಿ ಕೊಠಡಿಯಉಷ್ಣಾಂಶವನ್ನು ಯಥಾಸ್ಥಿತಿ ಕಾಪಾಡಬೇಕು. ದನ, ಹಸು-ಕರಗಳನ್ನು ಬೆಚ್ಚಗಿನ ವಾತಾವರಣದಲ್ಲಿ ಕಟ್ಟಬೇಕೆಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, 9844696316 ಸಂಪರ್ಕಿಸಲು ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next