Advertisement

ಕುಮ್ಮಟದುರ್ಗ ದಸರಾ ಆರಂಭಕ್ಕೆ ಒತ್ತಾಯ

06:23 PM Oct 03, 2019 | Naveen |

ಗಂಗಾವತಿ: ನಾಡಹಬ್ಬ ಮಹಾನವಮಿ ದಸರಾ ಹಬ್ಬವನ್ನು ಮೊದಲು ಕುಮ್ಮಟದುರ್ಗದಲ್ಲಿ ಆಚರಣೆ ಮಾಡಲಾಗುತ್ತಿತ್ತು. ಮುಂದಿನ ವರ್ಷದಿಂದ ಕುಮ್ಮಟದುರ್ಗದಲ್ಲಿ ದಸರಾ ಹಬ್ಬಕ್ಕೆ ಚಾಲನೆ ನೀಡಿ ಹಂಪಿಯ ಮಹಾನವಮಿ ದಿಬ್ಬದಲ್ಲಿ ಮುಕ್ತಾಯ ವಾಗುವಂತೆ ಸರ್ಕಾರ ಕಾರ್ಯಕ್ರಮ ಆಯೋಜನೆ ಮಾಡುವಂತೆ ಶೀಘ್ರವೇ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆಯುವುದಾಗಿ ಖ್ಯಾತ ಸಂಶೋಧಕ ಪ್ರೊ| ಎಂ.ಚಿದಾನಂದಮೂರ್ತಿ ಹೇಳಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮ್ಮಟದುರ್ಗದಲ್ಲಿ ಮೊದಲು ದಸರಾ ಆಚರಣೆ ಮಾಡಲಾಗಿತ್ತು ಎಂಬ ವರದಿ ಹಿನ್ನೆಲೆಯಲ್ಲಿ ತಾವು ಇದೀಗ ಕುಮ್ಮಟದುರ್ಗ, ಹೇಮಗುಡ್ಡ ಪ್ರದೇಶಕ್ಕೆ ಆಗಮಿಸಿದ್ದು, ಈ ವರದಿ ನಿಜವಿದೆ. ವಿಜಯನಗರ ಸಾಮ್ರಾಜ್ಯಕ್ಕೂ ಮುನ್ನ ಕುಮ್ಮಟದುರ್ಗದ ಅರಸರು ಆಳ್ವಿಕೆ ನಡೆಸುತ್ತಿದ್ದರು. ದಸರಾ, ದೀಪಾವಳಿ ಸೇರಿ ನಾಡಿನ ಪರಂಪರೆ ಹಬ್ಬ, ಸಂಸ್ಕೃತಿಗಳನ್ನು ಅರಸರು ಪಾಲನೆ ಮಾಡುತ್ತಿದ್ದ ಅನೇಕ ಕುರುಹುಗಳಿವೆ. ಕುಮ್ಮಟದುರ್ಗದ ಕುರಿತು ಸರ್ಕಾರ ನಿರ್ಲಕ್ಷ್ಯ  ವಹಿಸಿದ್ದು, ಕೂಡಲೇ ಪ್ರವಾಸೋದ್ಯಮ, ಪುರಾತತ್ವ ಇಲಾಖೆ, ಪ್ರಾಚ್ಯವಸ್ತು ಇಲಾಖೆಯವರು ಇಲ್ಲಿನ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗಬೇಕು. ಈ ಸ್ಥಳಗಳ ಕುರಿತು ಪ್ರವಾಸಿಗರಿಗೆ ಮನವರಿಕೆ ಮಾಡಲು ವೆಬ್‌ಸೈಟ್‌ ಸೇರಿ ಹಲವು ಮಾಹಿತಿಗಳನ್ನು ಪ್ರಚಾರ ಮಾಡಬೇಕು. ಪ್ರವಾಸೋದ್ಯಮ ಮಾಹಿತಿಯಲ್ಲಿ ಕುಮ್ಮಟದುರ್ಗ, ಹೇಮಗುಡ್ಡ, ಕನಕಗಿರಿ, ಪುರ ಸೋಮನಾಥೇಶ್ವರ ದೇಗುಲಗಳ ಕುರಿತು ಮಾಹಿತಿ ಕೊಡಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಇತಿಹಾಸ ತಜ್ಞ ಡಾ| ಶರಣಬಸಪ್ಪ ಕೋಲ್ಕಾರ್‌, ಡಾ| ಶಿವಕುಮಾರ ಮಾಲೀಪಾಟೀಲ, ರಾಜೇಶ ನಾಯಕ, ಕೆ. ಬಸವರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next