Advertisement

ನ್ಯಾಯಬೆಲೆ ಅಂಗಡಿ ಮುಂದೆ ನೂಕುನುಗ್ಗಲು

05:15 PM Apr 07, 2020 | Naveen |

ಗಂಗಾವತಿ: ಕೊರೊನಾ ಹಿನ್ನೆಲೆಯಲ್ಲಿ ಜನರಿಗೆ ಸರಕಾರ ಎರಡು ತಿಂಗಳ ಪಡಿತರ ಧಾನ್ಯಗಳನ್ನು ಮುಂಚಿತವಾಗಿಯೇ ವಿತರಣೆ ಮಾಡಿದೆ. ಆಹಾರಧಾನ್ಯ ಪಡೆಯಲು ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ನೂಕುನುಗ್ಗಲು ನಡೆಸುತ್ತಿರುವುದರಿಂದ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗುತ್ತಿಲ್ಲ. ನಿರ್ದಿಷ್ಟ ದೂರದಲ್ಲಿ ನಿಂತು ಆಹಾರ ಧಾನ್ಯ ಪಡೆಯುವಂತೆ ನ್ಯಾಯ ಬೆಲೆ ಅಂಗಡಿಯರು ಮನವಿ ಮಾಡಿದರೂಜನರು ಕ್ಯಾರೆ ಎನ್ನುತ್ತಿಲ್ಲ. ಪೊಲೀಸರನ್ನು ಕರೆಸಿದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ
ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ತಾತ್ಕಾಲಿಕವಾಗಿ ಆಹಾರ ಧಾನ್ಯ ವಿತರಣೆ ಸ್ಥಗಿತ ಮಾಡಲಾಗಿದೆ.

Advertisement

ಕೂಡಲೇ ತಾಲೂಕು ಆಡಳಿತ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಇದುವರೆಗೂ ಜಿಲ್ಲೆಯಲ್ಲಿ ಕಾಪಾಡಿಕೊಂಡು ಬಂದಿದ್ದ ಸಾಮಾಜಿಕ ಅಂತರದ ವ್ಯವಸ್ಥೆ ಹಾಳಾಗಿ ಸೋಂಕು ಇದರಿಂದ ಕೊರೊನಾ ಹರಡುವ ಸಾಧ್ಯತೆ ಇದೆ. ಜಿಲ್ಲೆಯ ಬಿಪಿಎಲ್‌ ಸೇರಿ ವಿವಿಧ ಕಾರ್ಡ್‌ ದಾರರಿಗೆ ಬೇಕಾಗುವಷ್ಟು ದವಸಧಾನ್ಯ ಸಂಗ್ರಹವಿದ್ದು, ಜನರು ನೂಕು ನುಗ್ಗಲು ನಡೆಸದೇ, ಅಂತರ ಕಾಪಾಡಿಕೊಂಡು ಪಡಿತರವನ್ನು ಪಡೆಯುವಂತೆ ತಹಶೀಲ್ದಾರ್‌
ಎಲ್‌.ಡಿ. ಚಂದ್ರಕಾಂತ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next