ಗಂಗಾವತಿ : ನಗರದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಜಿ ಎಚ್ ಎನ್ ಕಾಮರ್ಸ್ ಕಾಲೇಜಿನಲ್ಲಿ 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಆಗಮಿಸಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಹಿಜಾಬ್ ತೆಗೆದು ಪರೀಕ್ಷೆ ಬರೆಯುವಂತೆ ಪ್ರಾಚಾರ್ಯರು ಸೂಚನೆ ನೀಡಿದ ತಕ್ಷಣ ಪರೀಕ್ಷೆಯನ್ನ ನಿಲ್ಲಿಸಿ ವಿದ್ಯಾರ್ಥಿನಿಯರು ಕಾಲೇಜಿನ ವರೆಗೆ ಬಂದು ಪ್ರತಿಭಟನೆ ನಡೆಸಿದ ಘಟನೆ ಜಿಎಚ್ ಕಾಲೇಜಿನಲ್ಲಿ ಗುರುವಾರ ಜರುಗಿದೆ .
ಜಿಎಚ್ ಕಾಲೇಜಿನಲ್ಲಿ ಬುಧವಾರ ಮತ್ತು ಗುರುವಾರ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು ಇದನ್ನು ಕಾಲೇಜ್ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರು ಪ್ರಶ್ನಿಸಿ ಹೈಕೋರ್ಟ್ ಸೂಚನೆಯಂತೆ ಹಿಜಾಬನ್ನು ತೆಗೆದು ಕಾಲೇಜಿನ ತರಗತಿಗೆ ಬರುವಂತೆ ತಿಳಿಸಿದರು .
ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಿಲ್ಲ ಎಂದು ಹಠ ಹಿಡಿದಾಗ ತರಗತಿಯಿಂದ ವಿದ್ಯಾರ್ಥಿ ಹೊರಗೆ ಕಳಿಸಲಾಯಿತು .ವಿದ್ಯಾರ್ಥಿನಿಯರು ಮನೆಗೆ ಹೋಗದೆ ಕಾಲೇಜ್ ಮುಂಭಾಗದಲ್ಲಿಯೇ ತಮಗೆ ಕಾಲಾವಕಾಶ ನೀಡಬೇಕು ಇಲ್ಲವೇ ಮುಂದಿನ ದಿನಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಲಿಖಿತ ರೂಪದಲ್ಲಿ ಬರವಣಿಗೆ ನೀಡುವಂತೆ ಒತ್ತಾಯಿಸಿದರು .
ಈ ಮಧ್ಯೆ ತಹಸೀಲ್ದಾರ್ ಯು. ನಾಗರಾಜ ಹಾಗೂ ಡಿವೈಎಸ್ ಪಿ ರುದ್ರೇಶ್ ಉಜ್ಜನಕೊಪ್ಪ, ನಗರ ಠಾಣೆಯ ಪಿಐ ಟಿ ವೆಂಕಟಸ್ವಾಮಿ ಮಧ್ಯಪ್ರವೇಶ ಮಾಡಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ : ಆಲಮಟ್ಟಿ : ಬಸ್ಸು ಡಿಕ್ಕಿ ಹೊಡೆದು ಬೈಕ್ ಸವಾರರು ಸ್ಥಳದಲ್ಲೇ ಸಾವು
ತಾವು ಹಿಜಾಬ್ ಧರಿಸಿಯೇ ಒಂದನೇ ತರಗತಿ ಯಿಂದ ಹಿಜಾಬ್ ಧರಿಸಿಯೇ ಶಾಲೆ ಕಲಿತಿದ್ದು ಕಾಲೇಜಿಗೆ ಪ್ರವೇಶ ಪಡೆಯಲಾಗಿದೆ .ಪ್ರವೇಶ ಕೊಡುವ ಸಂದರ್ಭದಲ್ಲಿ ಜಾರ್ಜ್ ಗೆ ಬುರ್ಕಾಕ್ಕೆ ಅವಕಾಶವಿಲ್ಲ ಎಂದು ಎಲ್ಲಾದರೂ ಆದರೂ ಈಗ ಹಿಜಾಬ್ ತೆಗೆಯುವಂತೆ ಒತ್ತಾಯಿಸಿದರು ಸರಿಯಲ್ಲ ಗಂಗಾವತಿಯಲ್ಲಿ ಯಾವುದೇ ಜಗಳವಾಗಿಲ್ಲ ಎಲ್ಲರೂ ಒಂದಾಗಿದ್ದೇವೆ ಈಗ ಸಹಿತ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಮತ್ತು ಪಾಲಕರು ಪ್ರಾಚಾರ್ಯ ಒತ್ತಾಯಿಸಿದರು .
ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸರು ಕೊಟ್ಟೂರೇಶ್ವರ ವಿದ್ಯಾವರ್ಧಕ ಕಾಲೇಜಿನ ಸುತ್ತ ಪೊಲೀಸ್ ಕಾವಲು ಹಾಕಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು .