Advertisement

ಗಂಗಾವತಿ –ಬಾಗಲಕೋಟೆ ರೈಲು ಮಾರ್ಗ ವಿಸ್ತರಿಸುವ ಸಮೀಕ್ಷಾ ಕಾರ್ಯಕ್ಕೆ ಗ್ರೀನ್ ಸಿಗ್ನಲ್

08:49 AM Aug 31, 2022 | Team Udayavani |

ಕುಷ್ಟಗಿ : ದರೋಜಿ-ಗಂಗಾವತಿ ರೈಲು ಮಾರ್ಗವನ್ನು ಕುಷ್ಟಗಿ ಮೂಲಕ ಬಾಗಲಕೋಟೆಯವರೆಗೂ ವಿಸ್ತರಿಸುವ ಸಮೀಕ್ಷಾ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಗಂಗಾವತಿ-ಕನಕಗಿರಿ-ಕುಷ್ಟಗಿ-ಇಲಕಲ್ – ಹುನಗುಂದ-ಭಾಗಲಕೋಟೆ ಒಟ್ಟು152 ಕಿ.ಮೀ. ಉದ್ದದ ಹೊಸ ರೈಲು ಮಾರ್ಗದ ಯೋಜನಾ ಸಮೀಕ್ಷೆಗೆ ಕೇಂದ್ರ ಸರ್ಕಾರ ಸ್ಪಂಧಿಸಿದ್ದು ಅಷ್ಟೇ ಅಲ್ಲ, 78.50 ಲಕ್ಷ ರೂ. ಮಂಜೂರು ಮಾಡಿರುವುದಕ್ಕೆ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಇಲ್ಲಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ನೂತನ ರೈಲು ಮಾರ್ಗ ವಿಸ್ತರಿಸಲು ಕೊಪ್ಪಳ ಸಂಸದರು, ಹುಬ್ಬಳ್ಳಿ ನೈರುತ್ಯ ರೈಲ್ವೇ ವಿಭಾಗದ ಮುಖ್ಯ ಪ್ರಬಂಧಕರಿಗೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಮನವಿ ಮಾಡಿದ್ದರು.ಸದರಿ ಮನವಿಗೆ ಕೇಂದ್ರ ಸರ್ಕಾರ ಸ್ಪಂಧಿಸಿ ಅನುಮತಿ ನೀಡಿದ್ದು ಅಲ್ಲದೇ 152 ಕಿ.ಮೀ. ಉದ್ದದ ಈ ರೈಲು ಮಾರ್ಗಕ್ಕೆ 78.50 ಲಕ್ಷ ರೂ. ಸಮೀಕ್ಷೆ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿದೆ. ಈ ರೈಲು ಮಾರ್ಗ ಕುಷ್ಟಗಿ ತಾಲೂಕಿನ ಜನತೆಗೆ ಹರ್ಷ ತಂದಿದ್ದು ಭಾಗಲಕೋಟೆ ಭಾಗದ ಪ್ರಯಾಣಿಕರು ಬೆಂಗಳೂರು ತಿರುಪತಿ ಪ್ರಯಾಣ ದೂರ ಮತ್ತು ಸಮಯ ಕಡಿಮೆಯಾಗಿ ಅನುಕೂಲವಾಗಲಿದೆ. ಈ ಸರ್ವೇ ಕಾರ್ಯಕ್ಕೆ ಅನುದಾನ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಸದರಾದ ಕರಡಿ ಸಂಗಣ್ಣ, ಪಿ.ಸಿ.ಗದ್ದಿಗೌಡರ್, ರಮೇಶ ಜಿಗಜಿಣಗಿ ಹಾಗೂ ರೈಲ್ವೆ ಮಂತ್ರಿ ಹಾಗೂ ರೈಲ್ವೇ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ : ಹುಣಸೂರು : 10 ದಿನಗಳಲ್ಲಿ 250ಕ್ಕೂ ಹೆಚ್ಚು ಹಂದಿಗಳ ನಿಗೂಢ ಸಾವು : ಗ್ರಾಮಸ್ಥರಲ್ಲಿ ಆತಂಕ

ಕುಷ್ಟಗಿ ತಾಲೂಕಿನ ಜನತೆ ರೈಲು ಕಾಣುತ್ತೇವೆಯೋ ಇಲ್ಲವೋ ಅನುಮಾನ ಇತ್ತು. ನಮ್ಮ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ನನಸಾಗುತ್ತಿದೆ. ತಳಕಲ್-ವಾಡಿ ರೈಲು ಮಾರ್ಗದ ಕಾಮಗಾರಿ ಭರದಿಂದ ಸಾಗಿದ್ದು, ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಶೀಘ್ರವೇ ಓಡಲಿದೆ. ಈ ಸಂಭ್ರಮದಲ್ಲಿ ಮತ್ತೊಂದು ರೈಲು ಮಾರ್ಗ ದರೋಜಿ-ಗಂಗಾವತಿ ರೈಲು ಮಾರ್ಗವನ್ನು ಕನಕಗಿರಿ, ಕುಷ್ಟಗಿ, ಇಲಕಲ್, ಹುನಗುಂದ, ಭಾಗಲಕೋಟೆಗೆ ಸಂಪರ್ಕಿಸುವ ಸಮೀಕ್ಷೆಗೆ ಮಂಜೂರಾತಿ ಸಿಕ್ಕಿದೆ ಇದರಿಂದ ಈ ಭಾಗದ ಸಾರಿಗೆ ಸಂಪರ್ಕ ವಾಣಿಜ್ಯ ವಹಿವಾಟಿಗೆ ಅನುಕೂಲವಾಗಲಿದೆ. ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು, ಜನಸಾಮಾನ್ಯರಿಗೆ ಅಗತ್ಯವಿರುವ ಕೆಲಸ ಹುಡುಕಿ ಮಾಡುವ ಉತ್ತಮ ಕೆಲಸಗಾರ ಆಗಿದ್ದಾರೆ.

ಕುಷ್ಟಗಿ- ಯಲಬುರ್ಗಾ ಉಭಯ ತಾಲೂಕುಗಳ ಬಹುಗ್ರಾಮದ ಕುಡಿಯುವ ನೀರಿನ ಯೋಜನೆ ತಾವು ಶಾಸಕರಾಗಿದ್ದ ವೇಳೆ ಯಲಬುಗರ್ಾ ಶಾಸಕ ಬಸವರಾಜ ರಾಯರೆಡ್ಡಿ ಜೊತೆ ಸೇರಿ ಈಗಾಗಲೇ 120ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸೌಕರ್ಯವಾಗಿರುವುದು ಸಂತೃಪ್ತಿ ತಂದಿದ್ದು, ಕುಷ್ಟಗಿಯ ಈಗಿನ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಕ್ಷೇತ್ರಕ್ಕೆ ಇನ್ನಷ್ಟು ಅಭಿವೃಧ್ಧಿಯ ಅವಕಾಶಗಳಿದ್ದವು ಆದರೆ ಅವರ ಸೇವೆ ತೃಪ್ತಿಧಾಯಕವಾಗಿಲ್ಲ ಎಂದರು. ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ, ಬಿಜೆಪಿ ತಾಲೂಕಾ ಅಧ್ಯಕ್ಷ ಬಸವರಾಜ್ ಹಳ್ಳೂರು, ಮಲ್ಲಣ್ಣ ಪಲ್ಲೇದ್, ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಪ್ರಭುಶಂಕರಗೌಡ ಪಾಟೀಲ ಮತ್ತೀತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next