Advertisement

ಗಂಗಾವತಿ, ಕೊಪ್ಪಳಕ್ಕೆ ಎಸ್.ಎಂ.ಕೃಷ್ಣ ಕೊಡುಗೆ ಅಪಾರ: ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ

12:13 PM Dec 10, 2024 | Team Udayavani |

ಗಂಗಾವತಿ: ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಅಪಾರ ಕೊಡುಗೆ ನೀಡಿದ್ದು ಹಿರೇಹಳ್ಳ ಜಲಾಶಯ, ತುಂಗಭದ್ರಾ ಎಡದಂಡೆ ಕಾಲುವೆಗಳ ಶಾಶ್ವತ ದುರಸ್ತಿ ಸೇರಿದಂತೆ ಅನೇಕ ಯೋಜನೆಗಳಿಗೆ ಎಸ್ಎಂ ಕೃಷ್ಣ ಅವಧಿಯಲ್ಲಿ ಮಂಜೂರಾತಿ ದೊರಕಿದೆ ಎಂದು ಮಾಜಿ ಸಚಿವ ಎಸ್. ಎಂ. ಮಲ್ಲಿಕಾರ್ಜುನ ನಾಗಪ್ಪ ತಿಳಿಸಿದ್ದಾರೆ .

Advertisement

ಅವರು ಉದಯವಾಣಿ ಜೊತೆ ಮಾತನಾಡಿ, ಎಸ್.ಎಂ. ಕೃಷ್ಣ ಅಪರೂಪದ ರಾಜಕಾರಣಿ ಅವರ ಸಚಿವ ಸಂಪುಟದಲ್ಲಿ ಕಂದಾಯ,ಪೌರಾಡಳಿತ ನಗರಾಭಿವೃದ್ಧಿ ಸಚಿವರಾಗಿ ತಾವು ಕಾರ್ಯ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ. ಸಚಿವರ ಕಾರ್ಯದಲ್ಲಿ ಯಾವುದೇ ಅಧ್ಯಕ್ಷ ಮಾಡದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡುತ್ತಿದ್ದರು.ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಐಟಿಬಿಟಿ ಬೆಳವಣಿಗೆಗೆ ಎಸ್ಎಂ ಕೃಷ್ಣ ಪ್ರಮುಖ ಕಾರಣರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಬರದ ನಾಡಿಗೆ ಹಿರೇಹಳ್ಳದಲ್ಲಿ ಡ್ಯಾಮ್ ನಿರ್ಮಾಣಕ್ಕೆ ಪ್ರಮುಖ ಕಾರಣೀಕರ್ತರಲ್ಲಿ ಎಸ್.ಎಂ. ಕೃಷ್ಣ ಒಬ್ಬರಾಗಿದ್ದಾರೆ.ಆನೆಗೊಂದಿ ಉತ್ಸವ,ಹಂಪಿ ಉತ್ಸವಗಳಿಗೆ ಆದ್ಯತೆ ನೀಡಿದ್ದರು.ಗಂಗಾವತಿ, ಕನಕಗಿರಿ,ಕಾರಟಗಿ ಮತ್ತು ಕೊಪ್ಪಳ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆಯಲ್ಲಿ, ಬಸ್ ನಿಲ್ದಾಣ ನಿರ್ಮಾಣ ಕ್ಕೆ ಕಾರಣೀಕರ್ತರಾಗಿದ್ದರು ಎಂದರು.

ಜೊತೆಗೆ ತುಂಗಭದ್ರಾ ಎಡದಂಡೆ ಕಾಲುವೆ ರಾಯಚೂರುವರೆಗೆ ಮತ್ತು ವಿಜಯನಗಕಾಲುವೆಗಳ ಶಾಶ್ವತ ದುರಸ್ತಿಗೆ ಎಸ್ಎಂ ಕೃಷ್ಣ ಬಜೆಟ್ ನಲ್ಲಿ ಅನುದಾನವನ್ನು ಕಲ್ಪಿಸಿದ್ದರು. ಬರಗಾಲ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಗೆ ಹಲವು ಬಾರಿ ಭೇಟಿ ನೀಡಿ ಬರಗಾಲ ಪರಿಹಾರ ಕಾಮಗಾರಿಯನ್ನು ಪ್ರೋತ್ಸಾಹಿಸಿದ್ದರು. ಜೊತೆಗೆ ಹಿರಿಯ ರಾಜಕಾರಣಿ ಮಾಜಿ ಸಂಸದ ಎಚ್.ಜಿ. ರಾಮುಲು ಅವರ ಬಗ್ಗೆ ಅಪಾರ ಗೌರವವನ್ನು ಎಸ್ಎಂ ಕೃಷ್ಣ ಅವರು ಹೊಂದಿದ್ದರು ರಾಮುಲು ಅವರ ಅನಾರೋಗ್ಯ ಸಂದರ್ಭದಲ್ಲಿ ಸ್ವತಹ ಮುಂದೆ ನಿಂತು ಅವರ ಚಿಕಿತ್ಸೆಗೆ ನೆರವಾಗಿದ್ದರು ಎಂದು ಮಲ್ಲಿಕಾರ್ಜುನ ಆಗಪ್ಪ ತಿಳಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ:ನಗರದ ಗೌಳಿ ಮಹಾದೇವಪ್ಪ ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ನಿಧನಕ್ಕೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

Advertisement

ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶಾಮೀದ್ ಮನಿಯಾರ್ ,ಅಸೀಫ್,ಹನುಮಂತಪ್ಪ ಅರಸಿನಕೇರಿ, ಶರಣೇಗೌಡ ಸೇರಿ ಕಾರ್ಯಕರ್ತರು ಪಾಲ್ಗೊಂಡು ಎಸ್ಎಂ ಕೃಷ್ಣ ಅವರ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next