ಗಂಗಾವತಿ: ಯುಗಾದಿ ಹಬ್ಬವನ್ನು ಹಿಂದೂಗಳ ಹೊಸ ವರ್ಷ ಆಚರಣೆ ಮಾಡುತ್ತಾರೆ. ಯುಗಾದಿಯ ಕೊನೆಯ ದಿನವನ್ನು ಸರಿ ಎಂತಲೂ ರಂಗಿನೋಕುಳಿಯ ಮೂಲಕ ಸಂಭ್ರಮದ ಆಚರಣೆ ಮಾಡುತ್ತಾರೆ.
ತಾಲ್ಲೂಕಿನ ಹೇರೂರು ಆನೆಗೊಂದಿ ಸಣಾಪುರ ಜಂಗಮರ ಕಲ್ಗುಡಿ ಸಣಾಪುರ ಬಸವಾ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯುಗಾದಿಯ ನಂತರ ಸಂಭ್ರಮದ ರಂಗಿನೋಕುಳಿಯಲ್ಲಿ ಆಚರಣೆ ಮಾಡಲಾಗುತ್ತದೆ.ಜಾತಿ ಭೇದ ಮರೆತು ಚಿಕ್ಕವರು ದೊಡ್ಡವರೆನ್ನದೆ ಎಲ್ಲರೂ ಪರಸ್ಪರ ಬಣ್ಣವನ್ನು ಹಚ್ಚಿಕೊಂಡು ಕುಣಿದು ಕುಪ್ಪಳಿಸುತ್ತಾರೆ.
ಗ್ರಾಮೀಣ ಭಾಗದಲ್ಲಿ ಇಂದಿಗೂ ಯುಗಾದಿಯನ್ನು ಹೊಸ ವರ್ಷದ ಆಚರಣೆ ಮಾಡುತ್ತಾರೆ ಕೊನೆಯ ದಿನದಂದು ಎಲ್ಲರೂ ಕೈಯಲ್ಲಿ ಬಣ್ಣವನ್ನು ಹಿಡಿದುಕೊಂಡು ಅಳಿಯ ಮಾವ ಹಾಗೂ ಇತರೆ ಸಂಬಂಧಿಕರ ಜೊತೆ ಬಣ್ಣ ಆಡುತ್ತಾರೆ.
ಆನೆಗೊಂದಿ ಭಾಗದಲ್ಲಿ ವಿಶೇಷವಾಗಿ ಇಲ್ಲಿಗೆ ಆಗಮಿಸುವ ದೇಶ ವಿದೇಶದ ಪ್ರವಾಸಿಗರು ಸಹ ರಂಗಿನೋಕುಳಿಯಲ್ಲಿ ಮಿಂದು ಸಂತೋಷ ವ್ಯಕ್ತಪಡಿಸುತ್ತಾರೆ. ಕೆಲ ಗ್ರಾಮಗಳಲ್ಲಿ ಡಿಜೆ ಹಾಕಿಕೊಂಡು ಹಾಡುಗಳಿಗೆ ಕುಣಿಯುತ್ತ ರಂಗಿನೋಕುಳಿ ಆಚರಿಸಿದರು.