ಗಂಗಾವತಿ: ಗಂಗಾವತಿ ವಿಧಾನಸಭಾ ಸೇರಿ ರಾಜ್ಯದ ಯಾವುದೇ ಕ್ಷೇತ್ರದ ಟಿಕೇಟ್ ಇನ್ನೂ ಫೈನಲ್ ಆಗಿಲ್ಲ. ಗಂಗಾವತಿಯಲ್ಲಿ ಕಾಂಗ್ರೆಸ್ ಟಿಕೇಟ್‌ಗಾಗಿ ತೀವ್ರ ಪೈಪೋಟಿ ಇದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಮಗ್ರ ವರದಿಯನ್ನು ಎಐಸಿಸಿ ಹಾಗೂ ರಾಹುಲ್ ಗಾಂಧಿಯವರಿಗೆ ಸಲ್ಲಿಸಲಾಗುತ್ತದೆ ನಂತರ ಎಲ್ಲಾ ಕ್ಷೇತ್ರಗಳ ಟಿಕೇಟ್ ಪೈನಲ್ ಆಗಲಿವೆ ಎಂದು ರಾಜ್ಯಸಭಾ ಸದಸ್ಯೆ ಹಾಗೂ ಕಾಂಗ್ರೆಸ್ ಕೊಪ್ಪಳ ಲೋಕಸಭಾ ಕ್ಷೆತ್ರದ ಉಸ್ತುವಾರಿ ಜೇಬಿ ಮಾಥರ್ ಹೇಳಿದರು.
ಅವರು ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆ ದೇಶದ ರಾಜಕೀಯ ದಿಕ್ಕನ್ನು ಬದಲಿಸಲಿದ್ದು ರಾಜ್ಯದಲ್ಲಿ ಬಿಜೆಪಿ ಸರಕಾರದ ಶೇ.40 ರಷ್ಟು ಲಂಚದ ಭ್ರಷ್ಠಾಚಾರ, ಜಾತಿ ವೈಷಮ್ಯದ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ 150 ಕ್ಷೇತ್ರಗಳಲ್ಲಿ ಗೆದ್ದು 5 ವರ್ಷ ಸುಭದ್ರ ಸರಕಾರ ನೀಡಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ, ಬಿ.ಕೆ.ಹರಿಪ್ರಸಾದ, ಎಂ.ಬಿ.ಪಾಟೀಲ್, ಸಲೀಂ ಆಹಮದ್ ಸೇರಿ ಹಿರಿಯ ಕಿರಿಯ ಕಾಂಗ್ರೆಸ್ ನಾಯಕರು ಕಾರ್ಯಕರ್ತರ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಜಯಭೇರಿ ಭಾರಿಸಲಿದೆ ಎಂದು ಹೇಳಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಗಂಗಾವತಿಯಲ್ಲಿ ಟಿಕೇಟ್‌ಗಾಗಿ ಭಾರಿ ಪೈಪೋಟಿ ಇದೆ. ಗಂಗಾವತಿ ದೇಶದ ಗಮನ ಸೆಳೆದಿದ್ದು ಪಕ್ಷ ಇನ್ನೂ ಯಾರಿಗೂ ಟಿಕೇಟ್ ಫೈನಲ್ ಮಾಡಿಲ್ಲ. ಎಲ್ಲರೂ ಪಕ್ಷದ ಬ್ಯಾನರನಡಿಯಲ್ಲಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಬಿಜೆಪಿ ದುರಾಡಳಿತದ ಕುರಿತು ಜನತಗೆ ಮನವರಿಕೆ ಮಾಡಬೇಕಿದ್ದು ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತ ಭಿನ್ನ ಗುಂಪುಗಳಿಲ್ಲ. ದೇಶದ ಉಳಿವಿಗಾಗಿ ಕಾಂಗ್ರೆಸ್ ಕರ್ನಾಟಕ ಮತ್ತು ದೇಶದಲ್ಲಿ ಆಡಳಿತಕ್ಕೆ ಬರಬೇಕು ಎಂದರು.
ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು ಹಿರಿಯ ಧುರೀಣರಾದ ಮಾಜಿ ಸಂಸದ ಎಚ್.ಜಿ.ರಾಮುಲು, ಶ್ರೀರಂಗದೇವರಾಯಲು ಸೇರಿ ಜಿಲ್ಲೆಯ ಇನ್ನೂ ಅನೇಕ ಹಿರಿಯ ಮಾರ್ಗದರ್ಶನದಲ್ಲಿ ಪಕ್ಷ ಈ ಭಾರಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳು, ಮುಖಂಡರು ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷದ ಗೆಲುವಿಗೆ ಅನುಸರಿಸಬೇಕಾದ ಮಾರ್ಗಗಳ ಕುರಿತು ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ, ಅಪ್ಸಾನಿ ನಾರಾಯಣ ರಾವ್, ಎಸ್.ಬಿ.ಖಾದ್ರಿ, ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪಕುಮಾರ, ಅಮರಜ್ಯೋತಿ ನರಸಪ್ಪ, ರೆಡ್ಡಿ ಶ್ರೀನಿವಾಸ, ಕೆ.ಕಾಳಪ್ಪ, ಸರ್ವೇಶ ನಾಗಪ್ಪ, ಬಿ.ಕೃಷ್ಣಪ್ಪ ನಾಯಕ, ವೀರನಗೌಡ, ಮಹಮದ್ ಉಸ್ಮಾನ್, ಎಸ್.ಬಿ.ಖಾದ್ರಿ, ಐಲಿ ಬಸವರಾಜ, ಆಯೂಬ್ ಖಾನ್ ಐಲಿ ಮಾರುತಿ, ಐಲಿ ಚಂದ್ರಪ್ಪ, ಯುವರಾಜ ಪೋಲಕಲ್, ಜೋಗದ ಲಿಂಗಪ್ಪ ನಾಯಕ, ರತ್ಮಮ್ಮ ಸೇರಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರಿದ್ದರು.