ಗಂಗಾವತಿ: ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿದ್ದು ಸರಕಾರ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೆಚ್ಚು ಜನ ಗುಂಪು ಸೇರಬಾರದು. ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮುನ್ನೆಚ್ಚರಿಕೆ ಇದ್ದರೂ ಕೆಲವರು ನಿಯಮ ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಪೊಲೀಸರು ಗಂಗಾವತಿ ನಗರದಲ್ಲಿ ಕೋವಿಡ್ ಎರಡನೇ ಅಲೆಯು ಹೆಚ್ಚಳವಾಗದಂತೆ ತಡೆಯಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡುತ್ತಿದ್ದಾರೆ.
ಈ ಮಧ್ಯೆ ಪ್ರಮುಖ ವೃತ್ತಗಳು ಜನನಿಬಿಡ ಪ್ರದೇಶದಲ್ಲಿ ಸಂಚಾರ ಮಾಡಿ ಜನರಿಗೆ ತಿಳುವಳಿಕೆ ಹೇಳುವ ಜತೆಗೆ ಪದೇ ಪದೇ ಮಾಸ್ಕ್ ಇಲ್ಲದೇ ಸಂಚಾರ ಮಾಡುವವರ ವಿರುದ್ದ 297 ಕೇಸ್ ದಾಖಲು ಮಾಡಿ ಅವರಿಂದ 29700 ರೂ. ದಂಡ ವಸೂಲಿ ಮಾಡಿದ್ದಾರೆ. ಒಎಸ್ಬಿ ರೋಡ್ ಗಾಂಧಿ, ಮಹಾವೀರ ಮತ್ತು ಗಣೇಶ ವೃತ್ತಗಳಲ್ಲಿರುವ ಕೆಲ ಅಂಗಡಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿ ಜನರನ್ನು ಸೇರಿಸಲು ಕಾರಣರಾದ ಅಂಗಡಿ ಮಾಲೀಕರ ವಿರುದ್ದ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?
ಜನಜಾಗೃತಿ ಅಗತ್ಯ: ಕೋವಿಡ್ ರೋಗ ವ್ಯಾಪಕವಾಗುತ್ತಿದ್ದು ಜನರು ಮನೆಯಿಂದ ಹೊರಗೆ ಅನಿವಾರ್ಯವಿದ್ದರೆ ಮಾತ್ರ ಮುನ್ನೆಚ್ಚರಿಕೆ ಕ್ರಮದಲ್ಲಿ ಬರಬೇಕು. ಮಾಸ್ಕ್ ಧರಿಸಬೇಕು ಸಾಮಾಜಿಕ ಅಂತರ ಕಾಪಾಡುವಂತೆ ನಗರಠಾಣೆ ಪಿಐ ವೆಂಕಟಸ್ವಾಮಿ ಮನವಿ ಮಾಡಿದ್ದಾರೆ