ಗಂಗಾವತಿ: ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಮನೆ ದೇವರುಗಳ ದರ್ಶನ ಪಡೆದು ಪುನೀತರಾಗುವ ಮೂಲಕ ಆದ್ಯಾತ್ಮದಿಂದ ಉತ್ತಮ ಕಾರ್ಯ ಮಾಡುವಂತೆ ಬಿಜೆಪಿ ಮುಖಂಡ ಎಚ್.ಆರ್.ಚನ್ನಕೇಶವ ಹೇಳಿದರು.
ಅವರು ಬುಧವಾರ ಶ್ರಾವಣ ಮಾಸದ ನಿಮಿತ್ತ ಇತಿಹಾಸ ಪ್ರಸಿದ್ಧ ವಾಣಿಭದ್ರೇಶ್ವರ ಬೆಟ್ಟದಲ್ಲಿ ವಾಣಿಭದ್ರೇಶ್ವರ ದೇವರಿಗೆ ಪೂಜೆ ನೆರವೇರಿಸಿ ಮಾತನಾಡಿದರು.
ವಾಣಿಭದ್ರೇಶ್ವರ ಬೆಟ್ಟವು ಪವಿತ್ರವಾದದ್ದು ಇಲ್ಲಿ ದೇವಾನುದೇವತೆಗಳು ನೆಲೆಸಿರುವ ಕುರಿತು ವಿದ್ಯಾರಣ್ಯರು ಮನಗಂಡು ಹಂಪಿಯ ಸುತ್ತಲೂ 8 ಲಿಂಗ ಪ್ರತಿಷ್ಠಾಪಿಸಿದಾಗ ವಾಣಿಭದ್ರೇಶ್ವರ ಬೆಟ್ಟದಲ್ಲಿಯೂ ಲಿಂಗ ಸ್ಥಾಪಿಸಿರುವ ಕುರಿತು ಇತಿಹಾಸದಲ್ಲಿ ಉಲ್ಲೇಖವಾಗಿದ್ದು ಪ್ರತಿಯೊಬ್ಬರೂ ವಾಣೀಭದ್ರೇಶ್ವರನ ದರ್ಶನ ಪಡೆಯುವಂತೆ ಮನವಿ ಮಾಡಿದರು.
ಶ್ರಾವಣ ಮಾಸದ ನಿಮಿತ್ತ ವಾಣೀಭದ್ರೇಶ್ವರ ದೇವರಿಗೆ ಬೆಳ್ಳಿಗ್ಗೆ ನೈರ್ಮಲ್ಯ ವಿಸರ್ಜನೆ, ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಪುಷ್ಪಾಲಂಕಾರ ಮತ್ತು ಆಗಮಿಸಿದ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಚ್.ಆರ್. ಚನ್ನಕೇಶವ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಟಿ.ಆರ್.ರಾಯಬಾಗಿ, ರೇಖಾ ರಾಯಬಾಗಿ, ನೀಲಕಂಠಸ್ವಾಮಿ, ಕೆ.ಕಾಳಪ್ಪ, ಅಕ್ಕಿ ಕೊಟ್ರಪ್ಪ, ಹೊಸ್ಕೇರಿ ಗಿರಿಯಪ್ಪ, ದೇಸಾಯಿ ಸೇರಿ ಅನೇಕರಿದ್ದರು.