ಗಂಗಾವತಿ: ನಗರದ ಜುಲೈ ನಗರದ ಮಸೀದಿ ಜಾಗದ ಮಳೆನೀರು ಹೊರ ಬರುವ ನಗರಸಭೆಯರಾಜಕಾಲುವೆ ಮೇಲೆ ಖಾಸಗಿವ್ಯಕ್ತಿಯೊಬ್ಬ ವಾಣಿಜ್ಯ ಮಳಿಗೆನಿರ್ಮಿಸಿದ್ದು, ಇದನ್ನು ತೆರವುಗೊಳಿಸಲುಆಗಮಿಸಿದ್ದ ನಗರಸಭೆ ಅಧಿಕಾರಿಗಳುಅರ್ಧಕ್ಕೆ ವಾಪಸ್ ತೆರಳಿದ ಘಟನೆ ಜರುಗಿದೆ.
ಸಿಬಿಎಸ್ ಗಂಜ್, ಬನ್ನಿಗಿಡದಕ್ಯಾಂಪಿನ ಮಳೆ ನೀರು ಹೋಗಲುಇರುವ ರಾಜಕಾಲುವೆಯ ಮೇಲೆಪಿಲ್ಲರ್ ಹಾಕಿ 8+10 ಅಳತೆಯವಾಣಿಜ್ಯ ಮಳಿಗೆಯನ್ನು ರಾತ್ರೋರಾತ್ರಿ ನಿರ್ಮಿಸಲಾಗಿದೆ.
ಇದರಿಂದ ಮಳೆಹಾಗೂ ನಿರುಪಯುಕ್ತ ನೀರುರಾಜಕಾಲುವೆ ಮೂಲಕ ಹರಿದುದುರುಗಮ್ಮನಹಳ್ಳಕ್ಕೆ ಸೇರುವುದುಮುಂಬರುವ ದಿನಗಳಲ್ಲಿ ನಿಂತುಮುಸ್ಲಿಂ ಸಮುದಾಯದ ಸ್ಮಶಾನಹಾಗೂ ಬನ್ನಿಗಿಡದ ಕ್ಯಾಂಪ್‌ನೀರಿನಲ್ಲಿ ಮುಳುವ ಸಂದರ್ಭವಿದ್ದು,ಅಕ್ರಮ ವಾಣಿಜ್ಯ ಮಳಿಗೆ ತೆರವುಮಾಡುವಂತೆ ಸ್ಥಳೀಯರು ನಗರಸಭೆಗೆಒತ್ತಾಯಿಸಿದ್ದರು.
ಮಳಿಗೆಯನ್ನುನಗರಸಭೆಯವರು ಅರ್ಧಂಬರ್ಧತೆರವು ಮಾಡಿದ್ದು, ಪುನಃ ಖಾಸಗಿವ್ಯಕ್ತಿಗಳು ಮಳಿಗೆಯನ್ನು ಪೂರ್ಣಪ್ರಮಾಣದಲ್ಲಿ ನಿರ್ಮಿಸಿದ್ದಾರೆ. ತೆರವುಕಾರ್ಯಕ್ಕೆ ಆಗಮಿಸಿದ್ದ ನಗರಸಭೆಅವರು ಅರ್ಧ ತೆರವುಗೊಳಿಸಿಹೋಗಿರುವುದು ಸಾರ್ವಜನಿಕರಸಂಶಯಕ್ಕೆ ಕಾರಣವಾಗಿದೆ.
ಕೂಡಲೇನಗರಸಭೆ ಪೌರಾಯುಕ್ತರು ಹಾಗೂಜಿಲ್ಲಾ ನಗರಕೋಶದ ನಿರ್ದೇಶಕರುಸ್ಥಳಕ್ಕೆ ಭೇಟಿ ನೀಡಿ, ರಾಜಕಾಲುವೆಒತ್ತುವರಿ ಮಾಡಿದವರ ವಿರುದ್ಧಕಾನೂನು ಕ್ರಮ ಜರುಗಿಸಬೇಕು.ಅಕ್ರಮ ಮಳಿಗೆ ತೆರವು ಮಾಡುವಂತೆಸ್ಥಳೀಯರು ಒತ್ತಾಯಿಸಿದ್ದಾರೆ.