ಗಂಗಾವತಿ: ಕೆಎಸಾರ್ಟಿಸಿ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದು ಬಸ್ ನ ಹಿಂಬದಿಯ ಗಾಜು ಪುಡಿ ಪುಡಿಯಾಗಿದೆ.
ಗಂಗಾವತಿ ಮುಸ್ಟೂರು ಮಾರ್ಗದ ಕೆಎಸಾರ್ಟಿಸಿ ಬಸ್ ಇದಾಗಿದ್ದು, ಚಾಲಕ, ಕಂಡಕ್ಟರ್ ಪೊಲೀಸ್ 112 ವಾಹನಕ್ಕೆ ಕರೆ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಕಲ್ಲು ಎಸೆದ ದುಷ್ಕರ್ಮಿಗಳ ಪತ್ತೆಗೆ ಮನವಿ ಮಾಡಿದ್ದಾರೆ.
ಗಂಗಾವತಿ ಮುಸ್ಟೂರು ಬಸ್ ಬೆಳಿಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗಂಗಾವತಿ, ಢಣಾಪೂರ ಮತ್ತು ಮರಳಿ ಗ್ರಾಮಕ್ಕೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಇಡೀ ಬಸ್ ತುಂಬಾ ಪ್ರಯಾಣಿಕರು ತುಂಬಿದ್ದರಿಂದ ಮುಸ್ಟೂರಿನ ಇನ್ನೊಂದು ಸ್ಟಾಪ್ ಬಳಿ ಬಸ್ ನಿಲುಗಡೆ ವಿಳಂಬ ಮಾಡಿದ್ದರಿಂದ ದುಷ್ಕರ್ಮಿಗಳು ಹಿಂಬದಿಯ ಗಾಜಿಗೆ ಕಲ್ಲು ಎಸೆದಿದ್ದಾರೆ.
ಈ ಸಂದರ್ಭದಲ್ಲಿ ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಪೊಲೀಸರು ದುಷ್ಕರ್ಮಿಗಳ ಪತ್ತೆ ಕಾರ್ಯ ಮಾಡುತ್ತಿದ್ದಾರೆ. ಪ್ರಕರಣ ಕುರಿತು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ದುಷ್ಕರ್ಮಿಗಳ ಪತ್ತೆಗೆ ಮನವಿ: ಗಂಗಾವತಿ ಮುಸ್ಟೂರು ಕೆಎಸ್ಆರ್ಟಿಸಿ ಬಸ್ ಮೇಲೆ ದುಷ್ಕರ್ಮಿಗಳು ಹಿಂಬದಿಯ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. ಇದರಲ್ಲಿ ಪ್ರಯಾಣಿಕರು ಸೇರಿದಂತೆ ವಿದ್ಯಾರ್ಥಿಗಳಿಗೆ ಗಾಯಗಳಾಗಿಲ್ಲ. ದುಷ್ಕರ್ಮಿಗಳನ್ನು ಪತ್ತೆ ಮಾಡಲು ಪೊಲೀಸರಿಗೆ ಮನ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಗಂಗಾವತಿ ಘಟಕದ ವ್ಯವಸ್ಥಾಪಕ ರಾಜಶೇಖರ ಉದಯವಾಣಿ ಗೆ ತಿಳಿಸಿದ್ದಾರೆ.