ಗಂಗಾವತಿ: ಕಲ್ಯಾಣ ಕರ್ನಾಟಕ (ಹೈ.ಕ.)ಸಮಗ್ರ ಅಭಿವೃದ್ಧಿಗಾಗಿ 2013ರಲ್ಲಿ ಸಂವಿಧಾನದ ಕಲಂ 371(ಜೆ)ಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ದೊರಕಿದರೂ ಸಮರ್ಪಕ ಅನುಷ್ಠಾನದ ಕೊರತೆಯಿಂದ ಕಲಂ 371(ಜೆ) ಅಡಿಯಲ್ಲಿ ದೊರಕುವ ಶೈಕ್ಷಣಿಕ ಸೌಲಭ್ಯಗಳು ಸೇರಿ ನೇಮಕಾತಿಯಾಗುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ.
Advertisement
ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯ ಹಂಪಿ ಕನ್ನಡ ವಿಶ್ವವಿದ್ಯಾಲಯವೂ ಸೇರಿ ಯಾವ ವಿಶ್ವವಿದ್ಯಾಲಯಗಳಲ್ಲೂ ಸ್ಥಳೀಯ ಮತ್ತು ಸ್ಥಳೀಯೇತರ ಜೇಷ್ಠತಾ ಪಟ್ಟಿ ಇದುವರೆಗೂ ಸರಕಾರಕ್ಕೆ ಸಲ್ಲಿಕೆಯಾಗಿಲ್ಲ. ಇದರ ಪರಿಣಾಮ ಬಹುತೇಕ ವಿವಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಕಾರ್ಯ ವಿಳಂಬವಾಗುತ್ತಿದೆ. 6 ಲ್ಲೆಗಳ ಪೊಲೀಸ್ ಇಲಾಖೆ ಹೊರತುಪಡಿಸಿ ಬಹುತೇಕ ಇಲಾಖೆಗಳಲ್ಲಿ ಜೇಷ್ಠತಾ ಪಟ್ಟಿ ಸಮರ್ಪಕವಾಗಿ ತಯಾರಿಸಿಲ್ಲ. 6 ಜಿಲ್ಲೆಗಳ ವ್ಯಾಪ್ತಿಯ ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಪ್ರವೇಶ ಸಂದರ್ಭದಲ್ಲೂ ಕಲಂ 371(ಜೆ) ಅನುಷ್ಠಾನವಾಗುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಕೊರತೆ ಇದ್ದು ಕಲಂ 371(ಜೆ) ಅನ್ವಯ ಸರಕಾರ ಪ್ರತಿ ಬಜೆಟ್ ಸಂದರ್ಭದಲ್ಲೂ 6 ಜಿಲ್ಲೆಗೆ ಪ್ರತೇಕ ಅನುದಾನ ಮೀಸಲಿಟ್ಟು ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ಮತ್ತು ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಸ್ಪಷ್ಟ ಸೂಚನೆ ಇದ್ದರೂ 6 ವರ್ಷಗಳಿಂದ ಶಿಕ್ಷಣಕ್ಕಾಗಿ ಮೀಸಲಿಟ್ಟ ಅನುದಾನ ಸರಕಾರಕ್ಕೆ ಮರಳಿ ಹೋಗುತ್ತಿದ್ದರೂ ಕಲಂ 371(ಜೆ) ಅನುಷ್ಠಾನ ಸಮಿತಿ ಈ ಹಣವನ್ನು ಸಮರ್ಪಕವಾಗಿ ಬಳಸುತ್ತಿಲ್ಲ.
Related Articles
Advertisement
ಕಲಂ 371(ಜೆ) ಅನ್ವಯ 6 ಜಿಲ್ಲೆಗಳಲ್ಲಿರುವ ಅನುದಾನ ಮತ್ತು ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ಅನುದಾನ ನೀಡಲು ಅವಕಾಶವಿದೆ. ಹುದ್ದೆಗಳ ವೇತನಾನುದಾನ ಮಾಡಲು ಅವಕಾಶವಿದೆ. ಯುಪಿಎಸ್ಸಿ, ಕೆಪಿಎಸ್ಸಿ ಸೇರಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಬೇಕು. ಸ್ಥಳೀಯ ಇಲಾಖೆಗಳು ಸೇರಿ ವಿಶ್ವವಿದ್ಯಾಲಯಗಳಲ್ಲಿ ಜೇಷ್ಠತಾ ಪಟ್ಟಿ ಸಿದ್ದಪಡಿಸಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಅಗತ್ಯ. ಕ್ಯಾಬಿನೆಟ್ ಉಪಸಮಿತಿಗೆ ಸ್ಥಳೀಯ ಸಚಿವರನ್ನೇ ಅಧ್ಯಕ್ಷರನ್ನಾಗಿಸಬೇಕು. ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕು ಮತ್ತು ಖಾಸಗಿಯವರಿಗೂ ಅವಕಾಶ ನೀಡಬೇಕು.ಡಾ| ಶರಣಬಸಪ್ಪ ಕೋಲ್ಕಾರ್,
ಸಂಶೋಧಕರು ಕಲ್ಯಾಣ ಕರ್ನಾಟಕದ ಸಮಗ್ರ ಪ್ರಗತಿಗೆ ಕಲಂ 371(ಜೆ) ಯೋಜನೆ
ಸಮರ್ಪಕವಾಗಿ ಅನುಷ್ಠಾನ ಮಾಡಲು ಸರಕಾರ ಬದ್ಧವಾಗಿದೆ. ಶೈಕ್ಷಣಿಕ ಭಡ್ತಿ ನೇಮಕಾತಿಯಲ್ಲಿ ಕೆಲ ಸಮಸ್ಯೆಗಳಿದ್ದು ಅನುಷ್ಠಾನ ಕ್ಯಾಬಿನೆಟ್ ಉಪಸಮಿತಿಯಲ್ಲಿ ಚರ್ಚಿಸಿ ಪರಿಹರಿಸಲಾಗುತ್ತದೆ. 6 ಜಿಲ್ಲೆಗಳ ವ್ಯಾಪ್ತಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ, ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ಸೇರಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಕಲಂ 371(ಜೆ) ಸಮರ್ಪಕ ಅನುಷ್ಠಾನಕ್ಕೆ ತಜ್ಞರ ಶಿಕ್ಷಣ ಪರಿಣತರ ಸಲಹೆ ಸೂಚನೆ ಪಡೆಯಲಾಗುತ್ತದೆ.
ಬಿ.ಶ್ರೀರಾಮುಲು, ಸಚಿವರು ಹಾಗೂ
371(ಜೆ) ಅನುಷ್ಠಾನ ಕ್ಯಾಬಿನೆಟ್ ಉಪಸಮಿತಿ ಸದಸ್ಯರು.