Advertisement

ಆಹಾರ ಧಾನ್ಯ-ವೈದ್ಯಕೀಯ ಸೌಕರ್ಯಕ್ಕೆ ಸೂಚನೆ

05:16 PM Apr 12, 2020 | Naveen |

ಗಂಗಾವತಿ: ಕೊವೀಡ್‌-19 ರೋಗದ ಹಿನ್ನೆಲೆಯಲ್ಲಿ ಜನರು ಕೆಲಸವಿಲ್ಲದೇ ಹಲವು ದಿನಗಳಿಂದ ಮನೆಯಲ್ಲಿದ್ದು, ಜನರಿಗೆ ಆಹಾರ ಮತ್ತು ವೈದ್ಯಕೀಯ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳೀನ್‌ ಕುಮಾರ ಕಟೀಲ್‌ ಸೂಚಿಸಿದ್ದಾರೆ.

Advertisement

ಅವರು ಶನಿವಾರ ಶಾಸಕರ ನಿವಾಸದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿ, ಕೋವಿಡ್  ವೈರಸ್‌ ಹರಡದಂತೆ ಕರ್ಫ್ಯೂ ವಿಧಿಸಲಾಗಿದೆ. ದೇಶದಲ್ಲಿ ಅಗತ್ಯ ವೈದ್ಯಕೀಯ ಸೇವೆ ಮಾಡಲಾಗುತ್ತಿದೆ. ಪ್ರತಿದಿನ ದುಡಿದು ತಿನ್ನುವ ಬಡವರಿಗೆ ಬಿಜೆಪಿ ಕಾರ್ಯಕರ್ತರು ಅಗತ್ಯ ಸೌಕರ್ಯ ನೀಡಬೇಕು. ದಾನಿಗಳು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹೇರಳ ದೇಣಿಗೆ ನೀಡಿ ಜನರ ಸಂಕಷ್ಟದಲ್ಲಿ ಪ್ರಧಾನಿ ಮೋದಿಯವರಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಕೊರೊನಾ ವಿರುದ್ಧ ಜಿಲ್ಲೆಯ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಯವರು ಮುನ್ನೆಚ್ಚರಿಕೆ ಕ್ರಮದ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚಿಗೆ ಅಕಾಲಿಕ ಮಳೆಗೆ ತಾಲೂಕಿನ 75 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ಸಂಪೂರ್ಣ ನಷ್ಟವಾಗಿದೆ. ಕೂಡಲೇ ಪರಿಹಾರ ನೀಡಲು ಸಹಕರಿಸುವಂತೆ ಕೋರಿದರು. ಬಿಜೆಪಿ ಮುಖಂಡರಾದ ಕಾಶಿನಾಥ ಚಿತ್ರ, ಮಳಗಿ ಚನ್ನಪ್ಪ, ಅಕ್ಕಿ ಪ್ರಕಾಶ, ಯಂಕಪ್ಪ ಕಟ್ಟಿಮನಿ, ಸಂತೋಷ ಕೆಲೋಜಿ, ಟಿ.ಆರ್‌. ರಾಯಬಾಗಿ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next