Advertisement

Gangavathi: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು; ಭತ್ತ, ಇತರ ಬೆಳೆಗಳಿಗೆ ಹಾನಿ

09:30 PM Oct 02, 2024 | Team Udayavani |

ಗಂಗಾವತಿ: ತಾಲೂಕಿನ ಕೇಸಕ್ಕಿ ಹಂಚನಾಳ, ಮರಕುಂಬಿ, ಗುಳದಾಳ, ಕಲ್ಗುಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾನಿಗೆ ಒಳಗಾಗಿದ್ದು, ಈ ವೇಳೆ ಭತ್ತ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟಾಗಿ ನಷ್ಟಕ್ಕೆ ಒಳಗಾಗಿವೆ. ಈ ಗ್ರಾಮದಲ್ಲಿ  ಗುಡಿಸಲು, ದನದ ಕೊಟ್ಟಿಗೆಗಳು (ಶೆಡ್ಡುಗಳು) ನೆಲಕ್ಕುರುಳಿದ್ದು ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.

Advertisement

ಪರಿಹಾರಕ್ಕೆ ಆಗ್ರಹ:
ಕೇಸಕ್ಕಿ, ಹಂಚಿನಾಳು, ಮರಕುಂಬಿ ಮತ್ಕು ಕಲ್ಗುಡಿ ಗ್ರಾಮಗಳಲ್ಲಿ ಮಳೆ ಹಾನಿಗೆ ಒಳಗಾಗಿರುವ ರೈತರ ಬೆಳೆಗಳು ಮತ್ತು ಮನೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಮುಖಂಡರ ನಿಯೋಗ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ್ ದಡೇಸೂಗೂರು, ಹೇರೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸನಗೌಡ ಮಾಲಿ ಪಾಟೀಲ್, ಉಮೇಶ್ ನಾಯಕ ಗ್ರಾಮದ ಹಿರಿಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next