Advertisement

Gangavathi; ಗೋ ಸಂಪತ್ತು ದೇಶದ ಸಂಪತ್ತು: ಗಾಲಿ ಜನಾರ್ದನರೆಡ್ಡಿ

10:47 PM Oct 09, 2023 | Team Udayavani |

ಗಂಗಾವತಿ: ಗೋ ಸಂಪತ್ತು ದೇಶದ ಸಂಪತ್ತು.ಕೃಷಿ ಕ್ಷೇತ್ರದ ಏಳ್ಗೆ ಗೋ ಸಂಪತ್ತಿನ ಮೇಲಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು. ಅವರು ತಾಲೂಕಿನ ಆನೆಗೊಂದಿಯ ವಾಲಿಕೀಲ್ಲಾ ದುರ್ಗಾಬೆಟ್ಟದಲ್ಲಿ ಶ್ರೀ ದುರ್ಗಾ ಮಾತಾ ಗೋಶಾಲ ಟ್ರಸ್ಟ್, ಶ್ರೀ ಶಿವ ಗೋಸೇವಾ ಮಂಡಲ್ ಚಾರಿಟಬಲ್ ಟ್ರಸ್ಟ್ ಬೆಂಗಳೂರು ಮತ್ತು ರಾಜಸ್ಥಾನ ಸಮಾಜ, ಗೋಸೇವಾ ಸಮಿತಿ.ಸಹಯೋಗದೊಂದಿಗೆ ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿಯ ” ಏಕ್ ಶಾಮ್ ಗೋ ಮಾತಾ ಕೆ ನಾಮ್” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Advertisement

ಸ್ವಾತಂತ್ರ್ಯ ಪೂರ್ವದಲ್ಲಿ ಗೋ ಸಂಪತ್ತು ಹೆಚ್ಚಿತ್ತು.ನಂತರ ಕೃಷಿಕ್ಷೇತ್ರದಲ್ಲಿ ಆಧುನೀಕತೆ ಬಂದ ನಂತರ ಎತ್ತುಗಳ ಬಳಕೆ ಕಡಿಮೆಯಾಗಿದೆ. ಹಾಲು ಹೈನೋದ್ಯಮಕ್ಕೆ ಮಾತ್ರ ಆಕಳುಗಳನ್ನು ಸಾಕಲಾಗುತ್ತದೆ. ಇದರಿಂದ ಗೋ ಸಂಪತ್ತು ಕಡಿಮೆಯಾಗಿದೆ.ಹಾಲಲ್ಲಿ ತುಪ್ಪವಿರುವುದು ಎಷ್ಟು ಸತ್ಯವೋ ಭಗವಂತನು ಕೂಡ ಇರುವುದು ಅಷ್ಟೇ ಸತ್ಯ ಎಂಬುವ ನೀತಿ ಕಥೆ ಇದೆ. ಬಳ್ಳಾರಿಯಲ್ಲಿ ನನ್ನ ತಂದೆ ತಾಯಿಯ ಹೆಸರಲ್ಲಿ ವೃದ್ದಾಶ್ರಮ, ವಿಕಲಚೇತನ ಮಕ್ಕಳ ಶಾಲೆ ಹಾಗೂ ಗೋಶಾಲೆ ನಡೆಸುತ್ತಿದ್ದು ಬಳ್ಳಾರಿಯಿಂದ ನನ್ನನ್ನು ದೂರವಿಟ್ಟರೂ ಸಹ ಸ್ವರ್ಗದಂತಹ ಗಂಗಾವತಿಯಲ್ಲಿ ನಾನು ಶಾಸಕನಾಗಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದರು.

ಗೋ ಮಾತೆಯ ಪುಣ್ಯ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನ್ನ ಇಡೀ ಜೀವನದಲ್ಲಿಯೇ ಬಹು ಮುಖ್ಯ ಕ್ಷಣಗಳಲ್ಲೊಂದಾಗಿದೆ. ಮುಂದಿನ ದಿನಗಳಲ್ಲಿ ಬ್ರಹ್ಮಾನಂದ ಸ್ವಾಮೀಜಿಗಳಿಗೆ ಸಹಕರಿಸುತ್ತಾ ಗೋಶಾಲೆಯನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದರು. ಗೋಶಾಲೆಯಲ್ಲಿ ಗೋಸೇವೆ ಮಾಡುತ್ತಿರುವ ಎಲ್ಲಾ ಕೆಲಸಗಾರರಿಗೆಲ್ಲಾ ಸನ್ಮಾನಿಸಲಾಯಿತು.

ರಾಜಸ್ಥಾನದ ಪ್ರಖ್ಯಾತ ಗಾಯಕರಾದ ಓಂಜೀ ಮುಂಡೆಲ್ ದಿಗರನಾ ಮತ್ತು ರಮೇಶ್ ಮಾಳಿ ತಂಡದವರು ಭಜನೆ ಜರುಗಿತು.

ಕಾರ್ಯಕ್ರಮದಲ್ಲಿ ಬ್ರಹ್ಮಾನಂದ ಸ್ವಾಮೀಜಿ, ರಾಜ ಮನೆತನದ ಶ್ರೀ ಕೃಷ್ಣ ದೇವರಾಯಲು, ಸಂಸದ ಕರಡಿ ಸಂಗಣ್ಣ,ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ,ಬಸವರಾಜ್ ದಡೇಸುಗೂರು, ಗೋರಕ್ಷಕರಾದ ಮಹೇಂದ್ರ ಮುನ್ನೋತ ಜೈನ್ ಹಾಗೂ ಅನೇಕ ಮುಖಂಡರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next