ಗಂಗಾವತಿ: ಕಕ್ಷಿದಾರರು ಮತ್ತು ಜನಸಾಮಾನ್ಯರ ಹಿತ ದೃಷ್ಟಿಯಿಂದ ಗಂಗಾವತಿಯಲ್ಲಿ ಎಸಿ ಕೋರ್ಟ್ ಕಾರ್ಯ ಆರಂಭ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ ಇದಕ್ಕಾಗಿ ಹಲವು ವರ್ಷಗಳಿಂದ ಗಂಗಾವತಿ ವಕೀಲರ ಸಂಘದಿಂದ ಹೋರಾಟ ನಡೆಸಲಾಗಿತ್ತು .ಇತ್ತೀಚೆಗೆ ಕೋರ್ಟ್ ಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗೆ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎಸಿ ಕೋರ್ಟ್ ಮಂಜೂರಾಗಿದ್ದು ಕಕ್ಷಿದಾರರಿಗೆ,ವಕೀಲರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ,ಕಾರ್ಯದರ್ಶಿ ಎಚ್.ಎಂ.ಮಂಜುನಾಥ ತಿಳಿಸಿದ್ದಾರೆ.
ಅವರು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕಳೆದ 2017ನೇ ಇಸ್ವಿಯಿಂದ ಗಂಗಾವತಿಯಲ್ಲಿ ಖಾಯಂ ಎಸಿ ಕಚೇರಿ ,ಆರ್ ಟಿ ಓ ಕಚೇರಿ ಮತ್ತು ಜೈಲು ಮಂಜೂರಿ ಮಾಡುವಂತೆ ಸರ್ಕಾರದ ಮೇಲೆ ವಕೀಲರ ಸಂಘದಿಂದ ಒತ್ತಡ ಹೇರಿ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ 15 ದಿನಕ್ಕೊಮ್ಮೆ ಗಂಗಾವತಿಯಲ್ಲಿ ತಾತ್ಕಾಲಿಕವಾಗಿ ಸಹಾಯಕ ಆಯುಕ್ತರು ತಹಸಿಲ್ ಕಚೇರಿಯಲ್ಲಿ ಎಸಿ ಕೋರ್ಟ್ ನಡೆಸಲಿದ್ದಾರೆ, ಇದರಿಂದ ಭೂ ವಿವಾದಗಳು ಸೇರಿದಂತೆ ಕಕ್ಷಿದಾರರ ಕೆಲಸ ಕಾರ್ಯಗಳು ನೆರವೇರಲಿವೆ. ಮತ್ತು ಜನನ ಮರಣ ಮತ್ತು ಹಿರಿಯ ನಾಗರಿಕರ ಸಮಸ್ಯೆಯನ್ನು ಸಹಾಯಕ ಆಯುಕ್ತರಿಗೆ ನಿವೇದನೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಎಸಿ ಕೋರ್ಟ್ ತಾತ್ಕಾಲಿಕ ಕಾರ್ಯ ನಿರ್ವಹಣೆಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಹಾಲಿ ಮಾಜಿ ಶಾಸಕರು ಸಚಿವರಿಗೆ ವಕೀಲರ ಪರವಾಗಿ ಅಭಿನಂದನೆಗಳು ಪ್ರಸ್ತುತ ಕೊಪ್ಪಳದಲ್ಲಿರುವ ಜೈಲು ಅತ್ಯಂತ ಚಿಕ್ಕದಾಗಿದ್ದು ಹೆಚ್ಚಿನ ವಿಚಾರಣಾಧಿ ಕೈದಿಗಳು ಸೇರಿದಂತೆ ಆರೋಪಿಗಳನ್ನು ಹೆಚ್ಚುವರಿಯಾಗಿ ಜೈಲ್ನಲ್ಲಿ ಇರಿಸಲಾಗುತ್ತಿದೆ . ಜತೆಗೆ ಹೂವಿನಹಡಗಲಿ ಗದಗ ಹೊಸಪೇಟೆ ಜಾಲಿಗೆ ಜೈಲಿಗೆ ವಿಚಾರಣಾಧಿಕಾರಿಗಳನ್ನು ಕಳಿಸಲಾಗುತ್ತಿದೆ. ಇದರಿಂದ ಭೌಗೋಳಿಕವಾಗಿ ಗಂಗಾವತಿ ನ್ಯಾಯಾಲಯದಲ್ಲಿ ಕೇಸ್ ಗಳ ವಿಚಾರವಾಗಿ ಕಲಾಪಗಳಲ್ಲಿ ಪಾಲ್ಗೊಳ್ಳಲು ಆರೋಪಿಗಳಿಗೆ ತೊಂದರೆಯಾಗುತ್ತದೆ .ಮತ್ತು ವಕೀಲರು ಅಲ್ಲಿಗೆ ಹೋಗಿ ಮಾಹಿತಿ ಸಂಗ್ರಹ ಮಾಡಲು ತೊಂದರೆ ಆಗುತ್ತದೆ. ಆದ್ದರಿಂದ ಈಗಾಗಲೇ ಆರ್ಹಾಳ,ಸೂಳೆಕಲ್ ಹತ್ತಿರ ಜೈಲು ನಿರ್ಮಾಣ ಮಾಡಲು ಭೂಮಿಯನ್ನ ಕಾಯ್ದಿರಿಸಿದ್ದು 45 ಕೋಟಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿ ಕೂಡಲೇ ನಿರ್ಮಾಣ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಕಾರ್ಯದರ್ಶಿ ಎಚ್ .ಎಂ .ಮಂಜುನಾಥ ಉಪಾಧ್ಯಕ್ಷ ಕೆ ಪರಶಪ್ಪ ನಾಯಕ, ಪದಾಧಿಕಾರಿ ವೆಂಕಟೇಶ್ ಗೌಡ ಇದ್ದರು.