Advertisement

ಗಂಗಾವತಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ನಾಲ್ಕು ಜೋಡಿ ದಂಪತಿಗಳು ಮತ್ತೆ ಒಂದಾದರು

07:23 PM Feb 11, 2023 | Team Udayavani |

ಗಂಗಾವತಿ: ರಾಷ್ಟ್ರೀಯ ಲೋಕ ಆದಾಲತ್‌ನಿಂದಾಗಿ ರಾಜೀಯಾಗಬಹುದಾದ ಹತ್ತು ಹಲವು ಕೇಸ್‌ಗಳು ಪರಿಹಾರ ಕಂಡುಕೊಳ್ಳುತ್ತಿವೆ. ಗಂಗಾವತಿಯ ನ್ಯಾಯಾಲಯದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ ವಿಚ್ಛೆಧನಕ್ಕೆ ಅರ್ಜಿ ಸಲ್ಲಿಸಿದ್ದ ನಾಲ್ಕು ಜೋಡಿ ದಂಪತಿಗಳು ನ್ಯಾಯಾಧೀಶರುಗಳು ಮತ್ತು ವಕೀಲರ ಮಧ್ಯಸ್ಥಿಕೆಯಿಂದ ಪುನಹ ಒಂದಾಗಿ ಬದುಕು ನಡೆಸಲು ತೀರ್ಮಾನಿಸಿದ ಅಪರೂಪದ ಘಟನೆ ಜರುಗಿದೆ.

Advertisement

ಶ್ರೀನಿವಾಸ ಹಾಗೂ ತುಳಸಿ, ವಿರೇಶ ಹಾಗೂ ಜಾನಕಮ್ಮ, ಲಿಂಗಣ್ಣ ಹಾಗೂ ಮಮತಾ ಮತ್ತು ದ್ಯಾಮಣ್ಣ ನಾಯಕ ಹಾಗೂ ಅನಸುಯಾ ಕೆಲ ಸಣ್ಣಪುಟ್ಟ ಮನಸ್ತಾಪದ ಕಾರಣಕ್ಕಾಗಿ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆಯಲು ವಕೀಲರ ಮೂಲಕ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಕಳೆದ ಹಲವು ತಿಂಗಳುಗಳಿಂದ ಕೋರ್ಟಿಗೆ ಅಲದಾಡುತ್ತಿದ್ದರು. ಇವರಲ್ಲಿ ಕೆಲ ದಂಪತಿಗಳಿಗೆ ಚಿಕ್ಕಮಕ್ಕಳಿರುವುದನ್ನು ಗಮನಿಸಿದ ಅರ್ಜಿದಾರರ ಪರ ವಕೀಲರು ಕುಟುಂಬಸ್ಥರು, ಗ್ರಾಮದ ಮುಖಂಡರು ಹಾಗೂ ದಂಪತಿ ಗಳೊಂದಿಗೆ ಕೌನ್ಸಲಿಂಗ್ ಮಾಡಿ ಪುನಹ ಒಂದಾಗಿ ಜೀವನ ಮಾಡುವ ಮೂಲಕ ಮಕ್ಕಳ ಬಾಳಲಿ ಸಂತೋಷ ತರುವಂತೆ ಮನವಿ ಮಾಡಿದರು. ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ ನಾಲ್ಕು ದಂಪತಿಗಳು ರಾಜೀಸಂಧಾನಕ್ಕೆ ಒಪ್ಪಿ ನ್ಯಾಯಾಧಿಶರುಗಳು ಮತ್ತು ವಕೀಲರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು ಪುನಹ ಹೊಸ ಜೀವನ ನಡೆಸಲು ತೀರ್ಮಾನಿಸಿದರು.

ಈ ಸಂದರ್ಭದಲ್ಲಿ ಒಂದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಜಿ.ಶಿವಳ್ಳಿ, ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಎಸ್ ಗಾಣಿಗೇರ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರಬಾರೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರಮ್ಮ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ, ಎಜಿಪಿ ಹನುಮೇಶ ಯಾದವ್ ವಕೀಲ, ಕಕ್ಷಿದಾರರ ಪರ ನ್ಯಾಯವಾದಿಗಳಾದ ಮಲ್ಲಿಕಾರ್ಜುನ ಮುಸಾಲಿ, ದೊಡ್ಡಬಸಪ್ಪ ಹಾಲಸಮುದ್ರ, ಹನುಮೇಶ ಕುಂಬಾರ, ನಾಗರಾಜ ಗುತ್ತೇದಾರ್, ಮಾರುತಿ ಮೆತಗಲ್ ಸೇರಿ ಎಲ್ಲಾ ನ್ಯಾಯಾವಾದಿಗಳಿದ್ದರು.

ಇದನ್ನೂ ಓದಿ: ಲೋಕ್ ಅದಾಲತ್ ಮೂಲಕ ಕಕ್ಷಿದಾರರದಲ್ಲಿ ಸೌಹಾರ್ದತೆ: 375 ಪ್ರಕರಣಗಳು ಇತ್ಯರ್ಥ

Advertisement

Udayavani is now on Telegram. Click here to join our channel and stay updated with the latest news.

Next