Advertisement

ನಡೆದಾಡುವ ದೇವರಾಗಿದ್ದರು ಗಂಗಾಧರ ಶ್ರೀ

12:47 PM May 17, 2022 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದ ಆರಾಧ್ಯ ಗುರುವರ್ಯ, ಇಷ್ಟಲಿಂಗ ತಪೋಭೂಷಣರಾಗಿದ್ದ, ಈ ಭಾಗದ ನಡೆದಾಡುವ ದೇವರು ಹಾಗೂ ನಮಗೆ ಸದಾ ಮಾರ್ಗದರ್ಶನ, ಆಶೀರ್ವಾದ ನೀಡುತಿದ್ದ ಪೂಜ್ಯ ಗಂಗಾಧರ ಶ್ರೀಗಳನ್ನು ಶನಿವಾರ ಕಳೆದುಕೊಂಡಿದ್ದೇವೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸಂತಾಪ ಸೂಚಿಸಿದರು.

Advertisement

ಸೇಡಂ ತಾಲೂಕಿನ ಮಳಖೇಡ ಮಠದ ಪೂಜ್ಯ ಗಂಗಾಧರ ಶಿವಾಚಾರ್ಯರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಅವರು, ಶ್ರೀಗಳು ಕಲ್ಯಾಣ ಕರ್ನಾಟಕ ಅತ್ಯಂತ ಹಿರಿಯ ಪೂಜ್ಯರಾಗಿದ್ದರು. ವೀರಶೈವ ಲಿಂಗಾಯಿತ ಮಾತ್ರವಲ್ಲದೆ ಎಲ್ಲ ಧರ್ಮಜ ಜನರ ಕಷ್ಟ ಪರಿಹರಿಸುವ ಕೆಲಸವನ್ನು ಪೂಜ್ಯರು ಮಾಡುತ್ತಿದ್ದರು ಎಂದರು.

ಸೇಡಂ ಮಾತ್ರವಲ್ಲದೇ ಜಾಕನಳ್ಳಿ, ಎಲ್ಗೇರಿ, ಪೆದ್ದಿಮಠ ರುದ್ರಾರಂ, ವಾರಣಾಸಿ ಹಿರೇಮಠ ತಂಗೇಡಪಲ್ಲಿ ಮಠದ ಪೀಠಾಧಿಪತಿಗಳಾಗಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಸುದೀರ್ಘ‌ ಸೇವೆ ಸಲ್ಲಿಸಿದ್ದರು. ಅವರ ಪಾರ್ಥೀವ ಶರೀರದ ಅಂತಿಮ ವಿಧಿ ವಿಧಾನಗಳನ್ನು ಮಳಖೇಡದಲ್ಲಿ ನೆರವೇರಿಸಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಎಲ್ಗೇರಿಯಲ್ಲಿ ನಡೆಸಲಾಗುತ್ತಿದೆ. ಶ್ರೀಗಳ ಭಕ್ತ ಬಳಗಕ್ಕೆ ಅವರ ಅಗಲಿಕೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ, ಅವರು ನೀಡಿದ ಮಾರ್ಗದರ್ಶನ ಹಾಗೂ ಅವರ ಆಶೀರ್ವಾದ ಎಂದಿಗೂ ನಮ್ಮೊಂದಿಗೆ ಇರುತ್ತದೆ ಎಂದರು. ಈ ವೇಳೆ ವಿವಿಧ ಮಠಾಧೀಶರು, ವಿವಿಧ ಗಣ್ಯ ವ್ಯಕ್ತಿಗಳು ಶ್ರೀಗಳ ಅಂತಿಮ ನಮನದಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next