Advertisement

ಗಂಗಾ, ಯಮುನಾ ನದಿಗಳು ಮಾನವರಂತೆ ಅಲ್ಲ!: ಸುಪ್ರೀಂ

08:54 AM Jul 08, 2017 | Team Udayavani |

ಹೊಸದಿಲ್ಲಿ: ಗಂಗಾ ಮತ್ತು ಯಮುನಾ ನದಿಗಳನ್ನು ಮಾನವರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಮೂಲಕ ಉತ್ತರಾಖಂಡ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ. ಈ ಹಿಂದೆ ಗಂಗಾ ಮತ್ತು ಯಮುನಾ ನದಿಗಳ ಸಂರಕ್ಷಣೆ, ಶುಚಿತ್ವ ಕುರಿತಂತೆ ಉತ್ತರಾಖಂಡ ಹೈಕೋರ್ಟ್‌ ಅದನ್ನು “ಮಾನವ’ರಂತೆ ಪರಿಗಣಿಸಿ ಆದೇಶಿಸಿ, ಅವುಗಳಿಗೆ ಹಕ್ಕು ನೀಡುವ ತೀರ್ಪು ನೀಡಿತ್ತು. ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಉತ್ತರಾಖಂಡ ಸರಕಾರ ಸುಪ್ರೀಂ ಮೊರೆ ಹೋಗಿತ್ತು. ನದಿಗಳು ಅಂತಾರಾಜ್ಯಗಳಲ್ಲಿ ಹರಿಯುವಂಥವುಗಳಾಗಿದ್ದು, ಅವುಗಳ ಕುರಿತ ಕಾನೂನು ನೀತಿ ತರುವುದು ಕೇಂದ್ರಕ್ಕೆ ಸೇರಿದ್ದು, ನದಿಗಳು ಸಮಾಜಕ್ಕೆ ಪ್ರಯೋಜನಕಾರಿ. ಅವುಗಳ ರಕ್ಷಣೆ ಸಮಾಜದ ನಂಬಿಕೆ. ಆದರೆ ಅವುಗಳನ್ನು ಮಾನವ ರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next