Advertisement

Beef: ಅಕ್ರಮ ದನದ ಮಾಂಸ ಸಾಗಿಸುತ್ತಿದ್ದವರ ಮೇಲೆ ಗುಂಪು ದಾಳಿ- ಓರ್ವ ಸಾವು

06:13 PM Jun 26, 2023 | Team Udayavani |

ನಾಸಿಕ್‌: ಕಾರಿನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಿಸುತ್ತಿದ್ದ ಇಬ್ಬರ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ. ಕಾರಿನಲ್ಲಿದವರ ಮೇಲೆ ಭೀಕರವಾಗಿ ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟಿದ್ದು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.

Advertisement

ಅಕ್ರಮವಾಗಿ ದನದ ಮಾಂಸದೊಂದಿಗೆ ಕಾರಿನಲ್ಲಿ ಮುಂಬೈಗೆ ಹೊರಟಿದ್ದ ನಾಸಿರ್‌ ಶೇಕ್‌ ಮತ್ತು ಅಫಾನ್‌ ಅಬ್ದುಲ್‌ ಮಜೀದ್‌ ಅವರನ್ನು ಸಿನ್ನಾರ್‌ ಗೋಟಿ ಹೆದ್ದಾರಿಯಲ್ಲಿ ಗುಂಪೊಂದು ಕಾರನ್ನು ತಪಾಸಣೆ ಮಾಡುವ ಉದ್ದೇಶದಿಂದ ತಡೆದಿದ್ದು, ಕಾರಿನಲ್ಲಿ ಗೋ ಮಾಂಸ ಕಂಡು ಈರ್ವರ ಮೇಲೆಯೂ ಭೀಕರವಾಗಿ ಹಲ್ಲೆಗೈದಿದ್ದಾರೆ.

ಸುಮಾರು 15 ಕ್ಕೂ ಹೆಚ್ಚು ಮಂದಿಯಿದ್ದ ತಂಡವು ಕಬ್ಬಿಣದ ರಾಡ್‌, ದೊಣ್ಣೆಗಳಿಂದ ಇಬ್ಬರ ಮೇಲೆ ದಾರುಣವಾಗಿ ಹಲ್ಲೆಗೈದಿದೆ. ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಫಾನ್‌ ಅಬ್ದುಲ್‌ ಮಜೀದ್‌ ಸಾವನ್ನಪ್ಪಿದ್ದಾನೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ʼಬಸ್ತಾರ್‌ʼ ಮೂಲಕ ಮತ್ತೊಂದು ಸತ್ಯ ಘಟನೆಯ ಕಥೆ ಹೇಳಲು ಹೊರಟ ʼದಿ ಕೇರಳ ಸ್ಟೋರಿʼ ತಂಡ

Advertisement

Udayavani is now on Telegram. Click here to join our channel and stay updated with the latest news.

Next