ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್ ನ ‘ಸಖತ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ನವೆಂಬರ್ 12ರಂದು ‘ಸಖತ್’ ಚಿತ್ರ ಬಿಡುಗಡೆಯಾಗಲಿದೆ. ಚಿತ್ರ ನಿರ್ಮಾಣದ ಹೊಣೆ ಹೊತ್ತಿರುವ ಕೆವಿಎನ್ ಪ್ರೊಡಕ್ಷನ್ ಅಕ್ಟೋಬರ್ 24 ರಂದು ಸಿನಿಮಾ ಬಿಡುಗಡೆ ಸಂಬಂಧ ಅಧಿಕೃತ ಮಾಹಿತಿ ನೀಡಲಿದೆ, ಅದೇ ದಿನ ‘ಸಖತ್ ಬಾಲು’ ಟೀಸರ್ ಕೂಡ ರಿಲೀಸ್ ಆಗಲಿದೆ.
ಚಮಕ್ ಸಿನಿಮಾ ನಂತರ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್ ನ ಎರಡನೇ ಸಿನಿಮಾ ಇದಾಗಿದೆ. ಸಿನಿಮಾ ರಿಯಾಲಿಟಿ ಶೋ ಅಧರಿಸಿದ ಕಥೆಯಾಗಿದೆ. ಗಣೇಶ್ ಸಿನಿಮಾದಲ್ಲಿ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!
“ಸಖತ್’ಬಗ್ಗೆ ಮಾತನಾಡುವ ನಿರ್ದೇಶಕ ಸುನಿ, “ಇದೊಂದು ಕಾಮಿಡಿ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಟಿವಿ ರಿಯಾಲಿಟಿ ಶೋ, ಒಂದು ಮರ್ಡರ್ ಹಾಗೂ ಕೋರ್ಟ್ ಕೇಸ್ ಸುತ್ತ ಇಡೀ ಸಿನಿಮಾ ನಡೆಯುತ್ತದೆ. ಗಣೇಶ್ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಹೊಸಥರದಲ್ಲೇ ಈ ಸಿನಿಮಾದಲ್ಲಿ ಕಾಣುತ್ತಾರೆ. ಅವರ ಪರ್ಫಾರ್ಮೆನ್ಸ್ ಬೇರೆ ಲೆವೆಲ್‌ನಲ್ಲಿಯೇ ಇದೆ. ಆಡಿಯನ್ಸ್ “ಸಖತ್’ಆಗಿಯೇ ಸಿನಿಮಾ ಎಂಜಾಯ್ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್‌ಸಾಂಗ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಸದ್ಯ ಸಿನಿಮಾ ಸೆನ್ಸಾರ್ ಮುಂದಿದೆ’ ಎನ್ನುತ್ತಾರೆ.