ಗಣೇಶ್‌ಪುರಿ: ಭಗವಾನ್ ನಿತ್ಯಾನಂದರ ಸಮಾಧಿ ಕ್ಷೇತ್ರ ಗಣೇಶ್‌ಪುರಿಯಲ್ಲಿ ಭಗವಾನ್ ನಿತ್ಯಾನಂದ 57 ನೇ ಸಮಾಧಿ ದಿನದ ಆಚರಣೆಯು ಶ್ರೀ ನಿತ್ಯಾನಂದರು ಸಂಕಲ್ಪ ಸಮಾಧಿ ಪಡೆದ ದಿನ ಆ. 8 ರಂದು ದ್ವಾದಶಿ ದಿನವನ್ನು ಗಣೇಶ್‌ಪುರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮಂಜಾನೆ 4.20 ರಿಂದ ಕಾಕಡಿ ಆರತಿ, ನಿತ್ಯಾನಂದರ ಮೂರ್ತಿಗೆ ಮಹಾಭಿಷೇಕ, ಆರತಿ, ಭಜನೆ ನಡೆದು ಎಲ್ಲಾ ಭಕ್ತರು ಸಮಾಧಿ ಸ್ಪರ್ಶಿಸಿ ದರ್ಶನ ಪಡೆದರು. ಪೂಜಾ ವಿಧಿ-ವಿಧಾನಗಳನ್ನು ಕ್ಷೇತ್ರದ ಅರ್ಚಕ ವೃಂದ ನೆರವೇರಿಸಿದರೆ, ಪೂಜೆಯಲ್ಲಿ ಟ್ರಸ್ಟಿ ಯೋಗೇಶ್ ಗಿರ್‌ವಳ್ಕರ್ ದಂಪತಿ ಸಹಕರಿಸಿದರು.
ಆನಂತರ ನಡೆದ ಗೋಪಾಲ ಕೃಷ್ಣ ಯಜ್ಞವು ಸಂಜೆ 5 ರಿಂದ ಪೂರ್ಣಾಹುತಿಯೊಂದಿಗೆ ಸಮಾಪ್ತಿಗೊಂಡಿತು. ಆ. 7 ರಂದು ಬೆಳಗ್ಗೆ ಶ್ರೀ ನಿತ್ಯಾನಂದರು ಸಮಾಧಿ ಪಡೆದ ಬೆಂಗಳೂರುವಾಲ ಕಟ್ಟಡದಲ್ಲಿ ಘಟಸ್ಥಾಪಿಸಿ ಪ್ರಾರಂಭಗೊಂಡ ಓಂ ನಮೋ ಭಗವತೇ ನಿತ್ಯಾನಂದಾಯ ನಾಮಸ್ಮರಣೆಯು ಆ. 8 ರಂದು ಬೆಳಗ್ಗೆ 10.43 ಕ್ಕೆ ಕೊನೆಗೊಂಡಿತು. ಸಂಜೆ 5 ರಿಂದ ಶ್ರೀ ನಿತ್ಯಾನಂದ ಪಲ್ಲಕಿ ಯಾತ್ರೆಯು ಶಿವಾಜಿ ಚೌಕದಿಂದ ಬೆಂಗಳೂರುವಾಲ ಕಟ್ಟಡದವರೆಗೆ ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ತುಳು-ಕನ್ನಡಿಗರು ಸೇರಿದಂತೆ ಮರಾಠಿ ಗರು, ಗುಜರಾತಿಗರು, ಕೋಲಿ ಸಮಾಜದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಕನ್ನಡಿಗ ಭಕ್ತರಾದ ಸುರೇಂದ್ರ ಕಲ್ಯಾಣು³ರ್, ಯಕ್ಷಕಲಾ ಸಂಸ್ಥೆಯ ಅಧ್ಯಕ್ಷ ಹರೀಶ್ ಶೆಟ್ಟಿ, ಶೃಂಗೇರಿ ಸುರೇಶ್ ಶೆಟ್ಟಿ, ಯೋಗೇಶ್ ಶೆಟ್ಟಿ, ರಾಜೇಶ್ ಕೋಟ್ಯಾನ್, ನಿರಂಜನ್ ಸುವರ್ಣ ದಂಪತಿ, ಕರುಣಾಕರ ಸ್ವಾಮೀಜಿ ಸ್ಥಾಪಿತ ನಿತ್ಯಾನಂ ದಾಶ್ರಮದ ಟ್ರಸ್ಟಿಗಳಾದ ಅರುಣ್ ಶೆಟ್ಟಿ, ಕೃಷ್ಣ ಶೆಟ್ಟಿ ದಂಪತಿ, ತೋನ್ಸೆ ನವೀನ್ ಶೆಟ್ಟಿ, ಸುದೇಶ್ ಶೆಟ್ಟಿ, ಪುರಂದರ ಶೆಟ್ಟಿ, ಜೆ. ಬಿ. ಸುರೇಶ್, ತಾಳಿಪಾಡಿಗುತ್ತು ವಾಸು ಶೆಟ್ಟಿ, ರವೀಂದ್ರ ಶೆಟ್ಟಿ ಭಿವಂಡಿ, ಮಹಾಮಂಡಲೇಶ್ವರ ನಿತ್ಯಾನಂದ ಸ್ವಾಮೀಜಿ ಮತ್ತು ಅವರ ಭಕ್ತವೃಂದದವರು, ಶ್ರೀ ಸದಾನಂದ ಮಹಾರಾಜ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.