Advertisement

ಗಣೇಶೋತ್ಸವ ಹಿಂದೂ ಧರ್ಮದ ಜಾಗೃತಿಯ ಸಂಕೇತ-ಸ್ವಾಮಿ ಪ್ರಕಾಶಾನಂದಜಿ

05:27 PM Sep 10, 2024 | Team Udayavani |

■ ಉದಯವಾಣಿ ಸಮಾಚಾರ
ರಾಣಿಬೆನ್ನೂರ: ಹಿಂದೂಗಳು ಸಂಘಟಿತರಾಗಲು, ಜಾಗೃತಿ ಮೂಡಲು ಬ್ರಿಟಿಷರ ವಿರುದ್ಧ ಹೋರಾಡುವ ಸಲುವಾಗಿಯೇ ಈ ಗಣೇಶ ಉತ್ಸವವನ್ನು ಹಿಂದಿನಿಂದಲೂ ಆಚರಿಸಲಾಗುತ್ತಿದೆ. ಈಗಲು ಸಹ ಗಣೇಶೋತ್ಸವವನ್ನು ಅದ್ಧೂರಿ ಹಾಗೂ ವೈಭವದಿಂದ ಎಲ್ಲೆಡೆ ಆಚರಿಸುತ್ತಿರುವುದು ಹಿಂದೂ ಧರ್ಮದ ಜಾಗೃತಿಯ ಸಂಕೇತವಾಗಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ
ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ ಹೇಳಿದರು.

Advertisement

ನಗರದ ನಗರಸಭಾ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ರಾಣಿಬೆನ್ನೂರು ಕಾ ರಾಜಾ ಗಣಪತಿಯ ನವದುರ್ಗಿಯರ ವೈಭವ ಗಣೇಶ ಮಂಟಪ ಹಾಗೂ ಸಾಧಕಿಯರ ಕುರಿತು ರಚಿಸಿರುವ ಪ್ರಾಃತ ಸ್ಮರಾಮಿ ಎಂಬ ಗ್ರಂಥ ಬಿಡುಗಡೆ ಮಾಡಿ ಹಾಗೂ ಗಣೇಶೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸದ್ಯ ರಾಜ್ಯ ಹಾಗೂ ದೇಶದಲ್ಲಿ ಗಣೇಶೋತ್ಸವ ಹಾಡು, ಕುಣಿತದ ಮೂಲಕ ಅಂತ್ಯವಾಗುತ್ತಿದೆ. ಆದರೆ ವಂದೇ ಮಾತರಂ ಸ್ವಯಂ ಸೇವಾ ಸಂಘ ಗಣೇಶ ಹಬ್ಬವನ್ನು ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯಕವಾಗಿ ಮಾರ್ಪಡಿಸಿ ತೋರಿಸಿದೆ. ಈ ಸಂಘ ಪ್ರತಿ ವರ್ಷವೂ ವಿಶೇಷ, ವಿಭಿನ್ನವಾಗಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ದೇಶದ ಜನರಿಗೆ ನಾವು ಅರಿವು, ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಅದಕ್ಕೆ ನಾವು ಎಲ್ಲರೂ ಸೇರಿ ಇಂತಹ ವಿನೂತನ  ಕಾರ್ಯಕ್ರಮ ಮೂಲಕ ರಾಷ್ಟ್ರದ ಪ್ರಜ್ಞೆ ಬಗ್ಗೆ
ತಿಳಿಸಬೇಕು ಎಂದರು.

ಮಿಡಿಯಾ ಮಾಸ್ಟರ್ಸ್‌ ಸಂಪಾದಕ ಎಂ.ಎಸ್‌. ರಾಘವೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಗಣೇಶ ಉತ್ಸವ ಪ್ರಾರಂಭವಾಗಿದ್ದು ಉತ್ತರ ಕರ್ನಾಟಕದ ರಾಣಿಬೆನ್ನೂರು ನಗರದಿಂದ ಎಂಬುದು ವಿಶೇಷವಾಗಿದೆ. 1925-31ರಲ್ಲಿ ನಗರದ ಮಾರ್ಕೆಟ್‌ ಗಲ್ಲಿಯಲ್ಲಿ ಮುದವೀಡು ಕೃಷ್ಣರಾಯರು ಗಣೇಶ ಪ್ರತಿಷ್ಠಾಪನೆ ಮಾಡಿದರು. ಅದರಂತೆ ರಾಣಿಬೆನ್ನೂರು ನಗರದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಘ ಸದಸ್ಯರು ಪ್ರತಿ ವರ್ಷವೂ ವಿನೂತನ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ರಾಜ್ಯದಲ್ಲಿ ಹೆಸರು ಮಾಡಿದೆ ಎಂದರು.

ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪ್ರಕಾಶ ಬುರಡಿಕಟ್ಟಿ ಮಾತನಾಡಿದರು. ನಗರಸಭೆ ಸದಸ್ಯರಾದ ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ಲೇಖಕರಾದ ಪ್ರಮೋದ ನಲವಾಗಲ, ಪ್ರೇಮಕುಮಾರ ಬಿದರಕಟ್ಟಿ, ಅಜೇಯ ಮಠದ, ಜಗದೀಶ ಗೌಡಶಿವಣ್ಣನವರ ಸೇರಿದಂತೆ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next