ಬಂಟ್ವಾಳ : ತಾಲೂಕಿನಾದ್ಯಂತ ಸಾರ್ವಜನಿಕ ಸಂಘ, ಸಂಸ್ಥೆಗಳ ಹಾಗೂ ದೇವಸ್ಥಾನಗಳ ಆಶ್ರಯದ ವೈಭವ ಪೂರ್ಣ ಗಣೇಶೋತ್ಸವ ಆ. 25ರಂದು ಸಂಪನ್ನಗೊಂಡಿತು.
ಗಣೇಶೋತ್ಸವ ಅಂಗವಾಗಿ ವಿವಿಧ ಕಡೆಗಳಲ್ಲಿ ಸಾಂಸ್ಕೃತಿಕ ವೈವಿಧ್ಯಗಳು, ಸ್ಪರ್ಧೆಗಳು ನಡೆದಿವೆ. ಮಧ್ಯಾಹ್ನದ ಸಾರ್ವಜನಿಕ ಅನ್ನ ಸಂತರ್ಪಣೆಗೆ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡಿದ್ದರು.
ಬಂಟ್ವಾಳದ ಜಕ್ರಿಬೆಟ್ಟು 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಮೊದಲು ಬಂಟ್ವಾಳ ಶ್ರೀ ಸೀತಾರಾಮ ದೇವಸ್ಥಾನ ದಿಂದ ಗಣೇಶೋತ್ಸವ ವೇದಿಕೆಯ ತನಕ ದೇವರ ಮೂರ್ತಿಯ ಮೆರವಣಿಗೆ ನಡೆ ಯಿತು. ಜಿಲ್ಲಾ ಉಸ್ತುವಾರಿ ಸಚಿವರು ಮೆರ ವಣಿಗೆಯ ಮುಂಚೂಣಿಯಲ್ಲಿ ನಡೆದು ಬಂದರು. ಬಿ.ಸಿ.ರೋಡ್‌ನ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ರಕ್ತೇಶ್ವರೀ ದೇವಸ್ಥಾನ ವಠಾರದಲ್ಲಿ 38ನೇ ವರ್ಷದ ಗಣೆಶೋತ್ಸವ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ಅಪಾರ ಜನಸಂದಣಿಯು ನೆರೆದಿತ್ತು. ವಿಶೇಷವಾದ ಟ್ರಕ್‌ನಲ್ಲಿ ಮೂರ್ತಿಯನ್ನು ಅಲಂಕರಿಸಿ ತರಲಾಗಿತ್ತು.
ಸಜೀಪಮೂನ್ನೂರು ಯುವಕ ಸಂಘ 44 ನೇ ವರ್ಷದ ಗಣಪತಿ ದೇವರನ್ನು ಅಭೂತಪೂರ್ವ ರೀತಿಯಲ್ಲಿ ಬೆಳಗ್ಗೆ 9 ಗಂಟೆಗೆ ತಂದು ಪ್ರತಿಷ್ಠಾಪಿಸಲಾಯಿತು. ನರಿಕೊಂಬು ನವಜೀವನ ವ್ಯಾಯಾಮ ಶಾಲೆಯ ಆಶ್ರಯದಲ್ಲಿ 35ನೇ ವರ್ಷದ ಗಣಪತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಂಭೂರು ರಾಮಾಂಜನೇಯ ವ್ಯಾಯಾಮ ಶಾಲೆ 14ನೇ ವರ್ಷದ ಗಣಪ ಉತ್ಸವ, ಶಂಭೂರು ಯುವ ಸಂಗಮ ಸೇವಾ ಟ್ರಸ್ಟ್ ಆಶ್ರಯದಲ್ಲಿ 24ನೇ ವರ್ಷದ ಗಣಪ ದೇವರ ಆರಾಧನೆ, ಕಲ್ಲಡ್ಕ ಶ್ರೀರಾಮ ಮಂದಿರ ಆಶ್ರಯದಲ್ಲಿ 42ನೇ ವರ್ಷದ ಗಣೇಶೋತ್ಸವ ನಡೆಯಿತು.
ತುಳಸೀವನ ಭಜನ ಮಂದಿರ ಆಶ್ರಯದಲ್ಲಿ ನಡೆದ ಒಂದು ದಿನದ ಗಣೇಶೋತ್ಸವದಲ್ಲಿ ಅಭೂತಪೂರ್ವ ಮೆರವಣಿಗೆ ನಡೆಸಿ ಗಣಪತಿ ಮೂರ್ತಿಯನ್ನು ಜಲಸ್ತಂಭನ ಮಾಡಲಾಯಿತು. ಮಾವಿನಕಟ್ಟೆ ಯಜಮಾನ ಇಂಡಸ್ಟಿÅàಸ್ 25ನೇ ವರ್ಷದ ಗಣಪತಿ ಉತ್ಸವ ಆಚರಿಸಿ ಸಂಜೆ ವಿಸರ್ಜನೆ ಪೂಜೆ ಬಳಿಕ ಜಲಸ್ತಂಭನ ಮಾಡಲಾಯಿತು.
ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ 35ನೇ ವರ್ಷದ ಮಹಾಗಣಪತಿ ಉತ್ಸವ ನಡೆಯಿತು. ವಾಮದಪದವಿನಲ್ಲಿ ಗೌರಿ ಗಣೇಶೋತ್ಸವ ಆ. 24ರಂದು ಆರಂಭವಾಗಿ ಮೂರು ದಿನಗಳ ವೈಶಿಷ್ಟéಪೂರ್ಣ ಕಾರ್ಯಕ್ರಮಗಳೊಂದಿಗೆ ನಡೆದಿದೆ.
ಬಹುತೇಕ ಕಡೆಗಳಲ್ಲಿ ಚತುಭುìಜ ಗಣೇಶ ವಿಗ್ರಹವನ್ನು ಸ್ಥಾಪಿಸಿ ಪೂಜೆಯನ್ನು ಸಲ್ಲಿಸಲಾಗಿತ್ತು. ಆದರೆ ಮನೆಗಳಲ್ಲಿ, ಕೆಲವೊಂದು ಸಂಘಟನೆಗಳು ದ್ವಿಭುಜ ಗಣಪತಿಯನ್ನು ಆರಾಧಿಸುವ ಮೂಲಕ ವೈಶಿಷ್ಟé ಮೆರೆದಿವೆ.
ನಂದಾವರ-ಫರಂಗಿಪೇಟೆಯಲ್ಲಿ ತೆನೆಹಬ್ಬ ತಾಲೂಕಿನಲ್ಲಿ ಪ್ರಮುಖ ಎರಡು ದೇವಸ್ಥಾನಗಳಲ್ಲಿ ತೆನೆ ಹಬ್ಬವನ್ನು ಚೌತಿ ಹಬ್ಬದಂದೇ ಆಚರಿಸಲಾಗಿದ್ದು, ಫರಂಗಿಪೇಟೆಯಲ್ಲಿ ಸಾರ್ವಜನಿಕ ಗಣೇಶೋತ್ಸವ, ನಂದಾವರ ಶ್ರೀ ವಿನಾಯಕ ಶಂಕರನಾರಯಣ ದುರ್ಗಾಂಬಾ ದೇವಸ್ಥಾನದಲ್ಲಿ ತೆನೆ ಹಬ್ಬ ನಡೆದಿದ್ದು ಸಹ ಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭತ್ತದ ತೆನೆಗಾಗಿ ಸರತಿ ಸಾಲಿನಲ್ಲಿ ನಿಂತು ಪಡೆದರು.