Advertisement

ಅಂಗನವಾಡಿ ಕಾರ್ಯಕರ್ತರಿಗೆ ಸಿಗಲಿದೆ ಸ್ಮಾರ್ಟ್‌ ಫೋನ್‌

09:21 AM Oct 03, 2019 | sudhir |

ಉಡುಪಿ: ಅಂಗನವಾಡಿ ಕೇಂದ್ರಗಳ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಗಣಕೀಕೃತ ಗೊಳಿಸುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಸರಕಾರ ಸ್ಮಾರ್ಟ್‌ಫೋನ್‌ ವಿತರಿಸಲು ನಿರ್ಧರಿಸಿದ್ದು, ಉಡುಪಿ ಜಿಲ್ಲೆಯ 1,119 ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಯೋಜನೆ ಲಭ್ಯವಾಗಲಿದೆ.
ಸ್ನೇಹ ಆ್ಯಪ್‌ ಕಾರ್ಯ ವೈಖರಿ?
ಕೇಂದ್ರ ಸರಕಾರವು ಪೋಷಣ್‌ ಅಭಿಯಾನ ಯೋಜನೆಯಡಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಆನ್‌ಲೆ„ನ್‌ ವ್ಯಾಪ್ತಿಗೆ ತರಲು ಯೋಜನೆ ಸಿದ್ಧಪಡಿಸಿದೆ. ಅದಕ್ಕಾಗಿ “ಸ್ನೇಹಾ’ ಆ್ಯಪ್‌ ರೂಪಿಸಿದೆ. ಅ ಧಿಕಾರಿಗಳು ಹಾಗೂ ಮೇಲ್ವಿಚಾರಕರಿಗೆ ಸೇ°ಹಾ ಆ್ಯಪ್‌ ಬಳಕೆಗೆ ಪ್ರತ್ಯೇಕ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ ನೀಡಲಾಗುತ್ತದೆ. ಮೇಲ್ವಿಚಾರಕರಿಗೆ ಟ್ಯಾಬ್‌ ವಿತರಿಸಲಾಗುತ್ತದೆ. ಅವರು ಟ್ಯಾಬ್‌ ಮೂಲಕವೇ ಮಕ್ಕಳ ಆಧಾರ್‌ ಸಂಖ್ಯೆ ಜೋಡಣೆ ಹಾಗೂ ಅಂಗನವಾಡಿಗಳನ್ನು ಜಿಪಿಎಸ್‌ ಜಾಲಕ್ಕೆ ಸಂಪರ್ಕಿಸುವ ಕಾರ್ಯ ನಿರ್ವಹಿಸಲಿದ್ದಾರೆ.
ಕಡತ ನಿರ್ವಹಣೆ
ಅಂಗನವಾಡಿ ಕಾರ್ಯಕರ್ತೆಯರು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌), ಮಾತƒಪೂರ್ಣ, ಮಾತೃ ವಂದನ, ಮಾತೃಶ್ರೀ, ಭಾಗ್ಯಲಕ್ಷ್ಮೀ ಯೋಜನೆ ಸೇರಿದಂತೆ ಕೇಂದ್ರದ ಪ್ರತಿನಿತ್ಯದ ಆಗುಹೋಗುಗಳ ಕುರಿತ ಸುಮಾರು 40 ಬಗೆಯ ಕಡತಗಳನ್ನು ನಿರ್ವಹಣೆ ಮಾಡಬಹುದಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಹಾಜರಾತಿಯೂ ಕೂಡ ಇದರಲ್ಲಿ ದಾಖಲಿಸಲು ಸಹಕಾರಿಯಾಗಿದೆ.
ಸ್ಮಾಟ್‌ ಫೋನ್‌ ಯಾಕೆ?
ಕಾರ್ಯಕರ್ತರ ಮತ್ತು ಅ ಧಿಕಾರಿಗಳ ಕಾರ್ಯ ಒತ್ತಡ ತಗ್ಗಿಸಲು ಹಾಗೂ ಅಂಗನವಾಡಿ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಇಲಾಖೆಯು ಅಂಗನವಾಡಿಗಳನ್ನು ಆನ್‌ಲೆ„ನ್‌ ವ್ಯಾಪ್ತಿಗೆ ತರಲು ಮುಂದಾಗಿದೆ. ಕಾರ್ಯಕರ್ತೆಯರು ಸ್ಮಾರ್ಟ್‌ ಫೋನ್‌ ಮೂಲಕ ದಾಖಲಿಸುವ ಪ್ರತಿ ವಿವರವು ಇಲಾಖೆಯ ಕೇಂದ್ರ ಕಚೇರಿಯ ಸರ್ವರ್‌ನಲ್ಲಿ ಅಡಕವಾಗುತ್ತದೆ. ಈ ದತ್ತಾಂಶವನ್ನು ರಾಜ್ಯ, ಜಿಲ್ಲಾ ಮಟ್ಟದ ಅ ಧಿಕಾರಿಗಳು ಕುಳಿತಲ್ಲೇ ಪರಾಮರ್ಶಿಸಬಹುದು.
ಜಿಲ್ಲೆಗಳಿಗೆ ಸುತ್ತೋಲೆ ಬಂದಿಲ್ಲ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಪೋಷಣ್‌ ಅಭಿಯಾನದ ಒಂದು ಹಾಗೂ ಎರಡನೇ ಹಂತದಲ್ಲಿ ಸ್ಮಾರ್ಟ್‌ ಫೋನ್‌ ತಲುಪಿದೆ. ಅಭಿಯಾನದ ಮೂರನೇ ಹಂತದಲ್ಲಿ ಉಡುಪಿ ಸೇರಿದಂತೆ 11 ಜಿಲ್ಲೆಗಳಲ್ಲಿ ವಿತರಣೆಯಾಗಲಿದೆ. ಇದುವರೆಗೆ ಇಲಾಖೆಗೆ ಸುತ್ತೋಲೆ ಬಂದಿಲ್ಲ.
ಇಂಟರ್‌ ನೆಟ್‌ ವೆಚ್ಚ ಸರಕಾರ ಭರಿಸಲಿದೆ
ಉಡುಪಿ ಜಿಲ್ಲೆಯಲ್ಲಿ 1,119 ಅಂಗನವಾಡಿಗಳಿದ್ದು, ಎಲ್ಲ ಕಾರ್ಯಕರ್ತರಿಗೂ ಸ್ಮಾರ್ಟ್‌ ಫೋನ್‌ ವಿತರಿಸಲಾಗುತ್ತದೆ. ಉಡುಪಿ ತಾಲೂಕಿನಲ್ಲಿ 274, ಕುಂದಾಪುರ ತಾಲೂಕಿನಲ್ಲಿ 412, ಬ್ರಹ್ಮಾವರ ತಾಲೂಕಿನಲ್ಲಿ 275, ಕಾರ್ಕಳದಲ್ಲಿ 230 ಕಾರ್ಯಕರ್ತೆಯರಿದ್ದಾರೆ. ಈ ಯೋಜನೆಯಡಿ ಮೊಬೈಲ್‌ ಜತೆಗೆ ಸಿಮ್‌ ಕಾರ್ಡ್‌ ಸಹ ನೀಡಲಿದ್ದು, ಇಂಟರ್‌ನೆಟ್‌ ಸೇವಾ ವೆಚ್ಚವನ್ನು ಇಲಾಖೆಯೇ ಭರಿಸಲಿದೆ.

Advertisement

ಕೆಲಸದ ಒತ್ತದ ಕಡಿಮೆ
ಸರಕಾರ ಶೀಘ್ರದಲ್ಲಿ ಸ್ಮಾರ್ಟ್‌ ಫೋನ್‌ ವಿತರಿಸಿದರೆ ಅಂಗನವಾಡಿ ಕಾರ್ಯಕರ್ತರ ಕೆಲಸದ ಒತ್ತದ ಕಡಿಮೆಯಾಗಲಿದೆ. ನಿತ್ಯ ಹತ್ತಾರು ಕಡತಗಳನ್ನು ನೋಡಿಕೊಳ್ಳುವುದರಲ್ಲಿ ಸಮಯ ಕಳೆದುಹೋಗುತ್ತಿದೆ.
-ಜಯಲಕ್ಷ್ಮೀ , ಅಂಗನವಾಡಿ ಕಾರ್ಯಕರ್ತರ ಸಂಘದ ರಾಜ್ಯಾಧ್ಯಕ್ಷೆ

ಸುತ್ತೋಲೆ ಬಂದ
ತತ್‌ಕ್ಷಣ ವಿತ ರ ಣೆ
ಕೇಂದ್ರ ಸರಕಾರವು ಪೋಷಣ್‌ ಅಭಿಯಾನದ 3ನೇ ಹಂತದಲ್ಲಿ ಉಡುಪಿ ಜಿಲ್ಲೆಯ ಅಂಗನವಾಡಿ ಸ್ಮಾರ್ಟ್‌ ಫೋನ್‌ ವಿತರಣೆಯಾಗಲಿದೆ. ಸುತ್ತೋಲೆ ಬಂದ ತತ್‌ಕ್ಷಣ ಸ್ಮಾರ್ಟ್‌ ಫೋನ್‌ ವಿತರಣೆ ಕಾರ್ಯ ಪ್ರಾರಂಭವಾಗಲಿದೆ.
-ಗ್ರೇಸಿ ಗೊನ್ಸಾಲ್ವಿಸ್‌, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ

ಜ ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next