Advertisement

ಕುಲಾಲ ಸಂಘದ ಥಾಣೆ ನಿವೇಶನದಲ್ಲಿ ಗಣೇಶೋತ್ಸವ

02:58 PM Sep 01, 2017 | Team Udayavani |

ಥಾಣೆ:  ಕುಲಾಲ ಸಂಘ ಮುಂಬಯಿ ಇದರ ಥಾಣೆ ಘೋಡ್‌ಬಂದರ್‌ನ ಕಾಸರವಾಡಿಯಲ್ಲಿರುವ ಸ್ವಂತ ನಿವೇಶನದಲ್ಲಿ ಆ.25ರಿಂದ 26ರ ತನಕ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಾಯಿತು.

Advertisement

ಆ. 25ರಂದು ಬೆಳಗ್ಗೆ ಗಣೇಶನ ಪ್ರತಿಷ್ಠೆ, ಬಳಿಕ ಸಂಘದ ಗುರು ವಂದನಾ ಭಜನಾ ಮಂಡಳಿಯ ಸದಸ್ಯರು ಹಾಗೂ 5 ಸ್ಥಳೀಯ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಭಜನೆ ನೆರವೇರಿಸಿದರು.

ಸಂಜೆ ಸಂಘದ ಮಹಿಳಾ ವಿಭಾಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮ
ವನ್ನು ಥಾಣೆಯ ಮೇಯರ್‌ ಮೀನಾಕ್ಷಿ ಶಿಂದೆ(ಪೂಜಾರಿ) ದೀಪ ಬೆಳಗಿಸಿ ಉದ್ಘಾಟಿಸಿ
ದರು. ಸಂಘದ ವತಿಯಿಂದ ಅಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌, ಕಾರ್ಯದರ್ಶಿ ಡಿ. ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌, ಉಪ ಕಾರ್ಯಾಧ್ಯಕ್ಷೆ ಸುಚಿತಾ ಬಂಜನ್‌, ಕಾರ್ಯದರ್ಶಿ ಮಾಲತಿ ಅಂಚನ್‌, ಕೋಶಾಧಿಕಾರಿ ಲತಾ ಎಸ್‌. ಮೂಲ್ಯ,  5 ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ  ಸುರೇಖಾ ಬಂಗೇರ, ಪುಷ್ಪಲತಾ ಸಾಲ್ಯಾನ್‌, ಇಂದಿರಾ ಬಂಜನ್‌, ರೇಖಾ ಎ. ಮೂಲ್ಯ, ಪ್ರೇಮಾ ಎಲ್‌. ಮೂಲ್ಯ ಅವರ ಉಪಸ್ಥಿತಿಯಲ್ಲಿ ಮೇಯರ್‌ ಮೀನಾಕ್ಷಿ ಶಿಂದೆ ಅವರನ್ನು ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿದ ಮೇಯರ್‌ ಮೀನಾಕ್ಷಿ ಶಿಂದೆ ಅವರು ಮಾತನಾಡುತ್ತಾ, ಸಮಾಜದ ಅಭಿವೃದ್ಧಿಗಾಗಿ ಮಹಿಳೆಯರು ಹೆಚ್ಚು ಸಹಭಾಗಿಗಳಾಗಬೇಕು. ಕುಲಾಲ ಸಂಘದ
ಚಟುವಟಿಕೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿರುವುದು ಸಂತಸ ತಂದಿದೆ. ಥಾಣೆ ಘೋಡ್‌ಬಂದರ್‌ನ ನಿವೇಶನದ ಯಾವುದೇ ಸಮಸ್ಯೆಯಿದ್ದರೂ ನನ್ನಿಂದಾಗುವ ಎಲ್ಲಾ ಸಹಕಾರ ನೀಡುತ್ತೇನೆ. ವಿಘ್ನಗಳನ್ನು ದೂರೀ ಕರಿಸುವ ಗಣೇಶೋತ್ಸವವು ಎಲ್ಲಾ ಕಾರ್ಯಕ್ಕೂ ಮಂಗಳವನ್ನುಂಟು ಮಾಡಲಿ. ಘೋಡ್‌ಬಂದರ್‌ನ ಈ ನಿವೇಶನ ಕುಲಾಲ ಸಮಾಜದ ದ್ಯೋತಕವಾಗುವಂತಹ ಮಹೋನ್ನತ ಕಾರ್ಯ ಇಲ್ಲಿ ನಡೆಯಲಿದೆ ಎಂದು ಹಾರೈಸಿದರು.

Advertisement

ಸಂಘದ ಅಧ್ಯಕ್ಷ ಗಿರೀಶ್‌ ಸಾಲ್ಯಾನ್‌ ಮಾತನಾಡುತ್ತಾ, ಗಣೇಶೋತ್ಸವ ಯಶಸ್ವಿ ಯಾಗುವಲ್ಲಿ ಸಮಾಜದ ಬಹುತೇಕ ಬಂಧು ಗಳು ಸಹಕಾರ ನೀಡಿದ್ದಾರೆ. ಅವರೆಲ್ಲರ ಪ್ರೋತ್ಸಾಹ ದಿಂದ ಥಾಣೆ ನಿವೇಶನದಲ್ಲಿ ಗಣೇಶೋತ್ಸವ ಮಾಡುವಂತಾಯಿತು. ಮಹಿಳಾ ವಿಭಾಗದ ಉತ್ಸವಕ್ಕೆ ವಿಶೇಷ ಮೆರುಗು ನೀಡುವಂತೆ ಅರಶಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಿ ಮಹಿಳೆಯರನ್ನು ಒಗ್ಗೂಡಿಸಿದೆ ಎಂದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌.ಗುಜರನ್‌ ಅವರು ಮಾತನಾಡಿ, ಮಳೆಯ ಆರ್ಭಟ ಜೋರಾಗಿದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಘೋಡ್‌ಬಂದರ್‌ನ ನಮ್ಮ ನಿವೇಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರಶಿನ ಕುಂಕುಮ ಮತ್ತು ಗಣೇಶೋತ್ಸವವನ್ನು ಯಶಸ್ವಿಗೊಳಿಸಿದ್ದೀರಿ. ಮುಂದಿನ ದಿನಗಳಲ್ಲೂ ಮಹಿಳಾ ವಿಭಾಗದ ಎಲ್ಲಾ ಕಾರ್ಯಕ್ರಮಕ್ಕೂ ಸಹಕಾರ ನೀಡಿ ಎಂದರು.

ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಅಂಚನ್‌ ನಿರೂಪಿಸಿದರೆ, ಸಂಘದ ಕಾರ್ಯದರ್ಶಿ ಡಿ.ಐ. ಮೂಲ್ಯ ವಂದಿಸಿದರು. ದಾನಿಗಳ ಯಾದಿಯನ್ನು ಜಯ ಅಂಚನ್‌, ಶೇಖರ ಮೂಲ್ಯ ಪಿ., ಸುನೀಲ್‌ ಕುಲಾಲ್‌, ಆನಂದ  ಕುಲಾಲ್‌ ಬಂಟ್ವಾಳ, ರಘು ಬಿ. ಮೂಲ್ಯ, ಆನಂದ ಬಿ. ಮೂಲ್ಯ, ಉಮೇಶ್‌ ಬಂಗೇರ, ನ್ಯಾ| ಉಮಾನಾಥ್‌ ಮೂಲ್ಯ ಅವರು ವಾಚಿಸಿದರು. ರಾತ್ರಿ ಗಣೇಶನಿಗೆ ಮಂಗಳಾರತಿಯನ್ನು ಶಂಕರ ವೈ. ಮೂಲ್ಯ ನಡೆಸಿ ಪ್ರಾರ್ಥನೆ ಸಲ್ಲಿಸಿದರು.

ನವಿಮುಂಬಯಿಯ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಪಾದೆಬೆಟ್ಟು ರಘು ಮೂಲ್ಯ ಅವರ ಮುಂದಾಳತ್ವದಲ್ಲಿ ಗುರುವಂದನಾ ಭಜನಾ ಮಂಡಳಿಯ ಶೀನ ಮೂಲ್ಯ ಅವರ ಸಹಕಾರದೊಂದಿಗೆ ಗಣೇಶೋತ್ಸವ ಯಶಸ್ವಿಯಾಗಿ ನಡೆಯಿತು.
ಆ.26ರಂದು ಸಂಜೆ ಸಂಘದ 5 ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಯುವ ವಿಭಾಗದ ಸದಸ್ಯರು, ಮಹಿಳಾ ವಿಭಾಗ ಹಾಗೂ ಭಕ್ತರ ಸಹಕಾರದೊಂದಿಗೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

ಗಣೇಶ ಉತ್ಸವಕ್ಕೆ ಥಾಣೆಯ ಕುಟ್ಟಿ ಜಿ. ಮೂಲ್ಯ ಮತ್ತು ಕೃಷ್ಣ ಎಸ್‌. ಮೂಲ್ಯ ಠಾಕುರ್ಲಿ ವಿಶೇಷ ಸಹಕಾರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next