Advertisement
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈದ್ಗಾ ಮೈದಾನದಲ್ಲಿ 3 ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಅಂಜುಮನ್ ಇಸ್ಲಾಂ ಹೈಕೋರ್ಟ್ ಮೊರೆ ಹೋಗಿತ್ತು. ತ್ವರಿತ ವಿಚಾರಣೆ ಹಿನ್ನೆಲೆಯಲ್ಲಿ ಮಂಗಳವಾರ ತಡ ರಾತ್ರಿಯ ವರೆಗೂ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಏಕಸದಸ್ಯ ನ್ಯಾಯಪೀಠ ಮಹತ್ವದ ತೀರ್ಪು ನೀಡಿ ಆದೇಶಿಸಿದೆ. ಅಲ್ಲದೆ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.
Related Articles
Advertisement
ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿದಂತೆ ಮಾಲಕತ್ವ ವಿವಾದವಿದೆ. ಆದರೆ ಹುಬ್ಬಳ್ಳಿ ಈದ್ಗಾ ಮೈದಾನದ ಮಾಲಕತ್ವ ವಿವಾದವಿಲ್ಲ. ಹೀಗಾಗಿ ಭೂಮಿಯನ್ನು ನಮಗೆ (ಪಾಲಿಕೆ) ಬೇಕಾದಂತೆ ಬಳಕೆ ಮಾಡಬಹುದು. ಇದಕ್ಕೆ ಹುಬ್ಬಳ್ಳಿ ಪಾಲಿಕೆಗೆ ಎಲ್ಲ ಅಧಿಕಾರವಿದೆ ಎಂದು ವಾದಿಸಿದರು.
ಚಾಮರಾಜಪೇಟೆ: ಯಥಾಸ್ಥಿತಿಗೆ ಸೂಚನೆಹೊಸದಿಲ್ಲಿ: ಬೆಂಗಳೂರಿನ ಚಾಮರಾಜ ಪೇಟೆಯ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮಂಗಳವಾರ ನ್ಯಾ| ಇಂದಿರಾ ಬ್ಯಾನರ್ಜಿ, ನ್ಯಾ| ಅಭಯ ಎಸ್. ಓಖಾ, ನ್ಯಾ| ಎಂ.ಎಂ. ಸುಂದರೇಶ್ ಅವರಿದ್ದ ನ್ಯಾಯಪೀಠ ಆದೇಶಿಸಿತು. “200 ವರ್ಷಗಳಿಂದ ಮೈದಾನದಲ್ಲಿ ಇಂಥ ಯಾವುದೇ ಉತ್ಸವ ನಡೆದಿಲ್ಲ. ಹೀಗಾಗಿ ಯಾಕೆ ಯಥಾಸ್ಥಿತಿ ಕಾಯ್ದುಕೊಳ್ಳಬಾರದು?’ ಎಂದು ನ್ಯಾಯಪೀಠ ಪ್ರಶ್ನಿಸಿತು. ಗಣೇಶೋತ್ಸವವನ್ನು ಬೇರೆಡೆ ಆಯೋಜಿಸಬಹುದು ಎಂದು ನ್ಯಾಯಪೀಠ ಹೇಳಿತು. ಈ ನಡುವೆ, ಸಮಿತಿ ಮುಖಂಡರು ಮೈದಾನದ ಪಕ್ಕದಲ್ಲೇ ಉತ್ಸವ ನಡೆಸು ವುದಾಗಿ ಹೇಳಿದ್ದಾರೆ.