Advertisement

ಗಣೇಶ ತಯಾರಿಯ ಏಕಲವ್ಯ ಗಣೇಶ

11:14 PM Aug 30, 2019 | Sriram |

ಅಜೆಕಾರು:ಇವರ ಹೆಸರೇ ಗಣೇಶ.ಸಹಜವಾಗಿಯೇ ಗಣೇಶನ ಕುರಿತಾಗಿನ ಆಸಕ್ತಿ ಬುದ್ದಿ ತಿಳಿದಾಗಿನಿಂದಲೂ ಹೆಚ್ಚುತ್ತಲೇ ಇತ್ತು. ವಿನಾಯಕನ ವಿಗ್ರಹ ತಯಾರಿಕೆಯ ಕುತೂಹಲವೇ ಇವರನ್ನು ಸಮಾಜದಲ್ಲಿ ಗುರುತಿಸುವ ಮಟ್ಟಕ್ಕೆ ಏರಿಸಿದೆ.

Advertisement

ಇವರದ್ದು ಗಣೇಶ ವಿಗ್ರಹ ರಚಿಸುವ ಪರಂಪರೆಯ ಮನೆಯೂ ಅಲ್ಲ. ಗುರುವೂ ಇಲ್ಲ. ಸ್ವತಃ ಸಾಧನೆ ಮಾಡಿದ ಏಕಲವ್ಯ ಇವರು. ಇಂದು ಅವರ ಕಲೆಗೆ ಎಲ್ಲೆಡೆಯಿಂದಲೂ ಮನ್ನಣೆ ಸಿಗುತ್ತಿದೆ. ಅವರು ಅಂಚೆ ಪಾಲಕ ಗಣೇಶ್‌ ಎನ್ನುವುದಕ್ಕಿಂತಲೂ ಗಣಪತಿ ಮೂರ್ತಿ ರಚಿಸುವ ಗಣೇಶ್‌ ಎಂದೇ ಪರಿಚಿತರು. ಕಳೆದ 38 ವರ್ಷಗಳಿಂದ ಗಣೇಶನ ಹಬ್ಬಕ್ಕೆ ಗಣಪತಿ ವಿಗ್ರಹ ತಯಾರಿಸುತ್ತಿದ್ದಾರೆ. ಪ್ರಸ್ತುತ ಸುಮಾರು 250 ವಿಗ್ರಹಗಳನ್ನು ತಯಾರಿಸುತ್ತಿದ್ದು, ಎಲ್ಲವೂ ಪರಿಸರ ಗಣೇಶನ ಮೂರ್ತಿಗಳೇ ಆಗಿವೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಜೂನ್‌ ಮೊದಲ ವಾರದಲ್ಲಿ ಆವೆ ಮಣ್ಣಿನಿಂದ ಮೂರ್ತಿ ತಯಾರಿಸಲು ಆರಂಭಿಸುವ ಇವರು ಸುಮಾರು 3 ತಿಂಗಳ ಕಾಲ ಗಣೇಶನ ವಿಗ್ರಹ ತಯಾರಿಯಲ್ಲಿಯೇ ಮಗ್ನರಾಗಿದ್ದಾರೆ. ಮೂರ್ತಿ ತಯಾರಿಯ ಆರಂಭಿಕ ವರ್ಷಗಳಲ್ಲಿ ಮಂಗಳೂರು ಪರಿಸರದಿಂದ ಆವೆ ಮಣ್ಣು ಸಂಗ್ರಹಿಸಿ ತರುತ್ತಿದ್ದ ಇವರು ಪ್ರಸ್ತುತ ಕಲ್ಲಡ್ಕದಿಂದ ಅಗತ್ಯವಿರುವ ಆವೆ ಮಣ್ಣನ್ನು ತಂದು ಮೂರ್ತಿ ತಯಾರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next