ವಿಸರ್ಜಿಸಲಾಯಿತು. ಸುಭಾಷಚಂದ್ರ ಭೋಸ್, ಮಹಾತ್ಮ ಗಾಂಧಿ ವೃತ್ತ, ಗಡಿ ಗಣೇಶ, ಉಪನ್ಯಾಸಕರ ಬಡಾವಣೆ ಸೇರಿದಂತೆ ಸುಮಾರು 33 ಗಣೇಶ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿ ಪೂಜಿಸಲಾಗಿತ್ತು.
Advertisement
ಪ್ರತಿ ವರ್ಷ ಅನಂತ ಚತುರ್ಥಿಯಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಅನಂತ ಚತುದರ್ಶಿ ದಿನದಂದು ವಿಸರ್ಜಿಸಲಾಗುತಿತ್ತು. ಆದರೆ, ಈ ವರ್ಷ ಒಂದು ತಿಥಿ ಹೆಚ್ಚಿಗೆ ಬಂದ ಕಾರಣ 12ನೇ ದಿನಕ್ಕೆ ವಿಸರ್ಜಿಸಲಾಯಿತು.
ಮೂರ್ತಿ ನೋಡಲು ಜನರು ಮುಗಿಬಿದ್ದಿದ್ದರು. ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ನಡೆಯಬಾರದು ಎಂದು ಪಟ್ಟಣದಲ್ಲಿ ಪೊಲೀಸ್ ಪರೇಡ್ ನಡೆಸಲಾಗಿದ್ದು, ಸುಮಾರು 500 ಜನ ಸಿಬ್ಬಂದಿ ನಿಯೋಜಿಸಲಾಗಿತ್ತು. ಮುಂಜಾಗೃತಾ ಕ್ರಮದಿಂದಾಗಿ ಗಣೇಶ ವಿಸರ್ಜನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಶಾಂತ ರೀತಿಯಿಂದ ಗಣೇಶ ವಿಸರ್ಜನಾ ಕಾರ್ಯ ನಡೆಯಿತು ಎಂದು ಡಿವೈಎಸ್‌ಪಿ ವೆಂಕನಗೌಡ ಪಾಟೀಲ ತಿಳಿಸಿದ್ದಾರೆ.