Advertisement
ಹಿಂದಿನ ದಿನದ ತೀರ್ಮಾನದಂತೆ ಮುಂಜಾನೆ ಬೇಗ ಎದ್ದು ಫ್ರೆಶ್ ಆಗಿ ತಿಂಡಿ ಮುಗಿಸಿ 8 ಗಂಟೆ ಸುಮಾರಿಗೆ ಸಾಂಗ್ಲಿಯ ಜಗದ್ವಿಖ್ಯಾತ ದೇಗುಲ ಗಣಪತಿ ಮಂದಿರಕ್ಕೆ ಭೇಟಿ ನೀಡಲು ಹೊರಟೆವು. ಮನೆಯಿಂದ ಸುಮಾರು 2 ಕಿ.ಮೀ. ದೂರದ ಲ್ಲಿರುವ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲೇ ಹೊರಟೆವು. ಈ ಮೂಲಕ ಮಹಾರಾಷ್ಟ್ರದ ಪ್ರಮುಖ ನಗರವೆಂದೇ ಪರಿಗಣಿಸಲ್ಪಟ್ಟಿರುವ ಸಾಂಗ್ಲಿಯಗಲ್ಲಿಗಲ್ಲಿಯದರು ಶನವೂ ಆಯಿತು.ಸದಾ ಜನ ಜಂಗುಳಿಯಿಂದ ತುಂಬಿದ್ದ ರಸ್ತೆಯಲ್ಲಿ ಯಾವ ಮುಲಾಜೂ ಇಲ್ಲದೆ ಸಾಗುವ ವಾಹನಗಳಿದ್ದರೂ ಪಾದಚಾರಿಗಳಿಗಾಗಿ ತತ್ ಕ್ಷಣ ಬ್ರೇಕ್ ಹಾಕುವಂಥ ಸನ್ನಿವೇಶ. ರಸ್ತೆ ಯಲ್ಲಿ ಸಾಕಷ್ಟು ಮಂದಿ ನಡೆದುಕೊಂಡು ಹೋಗುತ್ತಿದ್ದರೂ ಅವರ ನಡುವೆ ವಾಹನಗಳು ತೂರಿಕೊಂಡು ಹೋಗುವ ದೃಶ್ಯ ಭಯಭೀತರನ್ನಾಗಿದರೂ ಅಲ್ಲಿ ಪಾದ ಚಾರಿಗಳಿಗೆ ವಾಹನಗಳು ಸೈಡ್ ಕೊಡು ತ್ತವೆ ಎಂದು ಕೇಳಿ ಅಚ್ಚ ರಿಯೂ ಆಯಿತು. ಜತೆಗೆ ನಗರದ ರಸ್ತೆಗಳು, ಧೂಳು, ಜನ ಜಂಗುಳಿ, ವಾಹನಗಳು ಓಡಾಡುವ ಕರ್ಕಶ ಧ್ವನಿ, ಅಲ್ಲಲ್ಲಿ ತುಂಬಿ ಕೊಂಡಿರುವ ತ್ಯಾಜ್ಯ ನೋಡಿ ಇದಕ್ಕಿಂತ ನಮ್ಮ ಹಳ್ಳಿ ಯಲ್ಲಿ ಹೋಗಿ ನೆಲೆಸುವುದೇ ವಾಸಿ ಎನ್ನುವ ಭಾವನೆ ಮನದ ಲ್ಲೊಮ್ಮೆ ಓಡಿಯಾಗಿತ್ತು. ಇಷ್ಟೆಲ್ಲ ಯೋಚನೆಗಳ ಮಧ್ಯೆಯೂ ನಗರದ ಸೌಂದರ್ಯ,ಗಲ್ಲಿ ಗಳಲ್ಲಿ ಸಾಗಿರುವ ರಸ್ತೆಗಳು ಖುಷಿ ಕೊಟ್ಟಿತ್ತು. ಅಪರಿಚಿತ ಊರಿನ ಮಹಾನಗರದ ಪ್ರತಿ ವಸ್ತು ವಿಷಯವನ್ನು ಮನದಲ್ಲಿ ತುಂಬಿಕೊಂಡು ಸುಮಾರು ಅರ್ಧ ಮುಕ್ಕಾಲು ಗಂಟೆಯ ಹಾದಿಯನ್ನು ಕ್ರಮಿಸಿದ್ದೇ ತಿಳಿಯಲಿಲ್ಲ. ದೇವಸ್ಥಾನದ ಪ್ರವೇಶದ್ವಾರ ತಲುಪಿದಾಗ ಗಂಟೆ 8.45 ತೋರಿಸುತ್ತಿತ್ತು.
Related Articles
ದೇವಸ್ಥಾನದಿಂದ ಸುಮಾರು 10.30ರ ವೇಳೆಗೆ ಹೊರ ಬಂದ ನಾವು ಹತ್ತಿರದಲ್ಲೇ ಇದ್ದ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ದೆವು.ಇಲ್ಲಿ ದೇವರಿಗೆ ಹತ್ತಿರದಲ್ಲೇ ನಮ ಸ್ಕರಿಸಿ,ಎಳ್ಳೆಣ್ಣೆ ಎರಯಲು ಅವಕಾಶ ಸಿಕ್ಕಿದ್ದು ಮನಸ್ಸಿಗೆ ಖುಷಿ ಕೊಟ್ಟಿತ್ತು. ಅನಂತರ ಸಾಂಗ್ಲಿಯ ಪೇಟೆಯಲ್ಲಿ ಸ್ವಲ್ಪ ಸುತ್ತಾಡಿ,ಶಾಪಿಂಗ್ ಮಾಡಿ, ಅಲ್ಲಿನ ವಿಶೇಷ ತಿನಿಸುಗಳಾದ ವಡಾ ಪಾವ್, ಲಸ್ಸಿಯನ್ನು ಸವಿದು ಮನೆಗೆ ಮರಳುವಾಗ ಮಧ್ಯಾಹ್ನ ವಾಗಿತ್ತು.
Advertisement
ರೂಟ್ ಮ್ಯಾಪ್· ಮಂಗಳೂರಿನಿಂದ ಸಾಂಗ್ಲಿಗೆ 570 ಕಿ.ಮೀ. ದೂರ ಬಸ್,ರೈಲು ಸೌಲಭ್ಯವಿದೆ.
· ಸಾಂಗ್ಲಿ ಪೇಟೆಯಿಂದ ಗಣಪತಿ ದೇವಸ್ಥಾನಕ್ಕೆ ಸುಮಾರು 2 ಕಿ.ಮೀ. ದೂರವಿದೆ.
· ಪೇಟೆಯ ಸಮೀಪವೇ ದೇವಸ್ಥಾನವಿರುವುದರಿಂದ ಊಟ, ವಸತಿ ಸಮಸ್ಯೆಯಿಲ್ಲ.
· ದೇವಸ್ಥಾನದಲ್ಲಿ ಸಮಯಪಾಲನೆ ಇದ್ದು ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಮತ್ತು ಅಪರಾಹ್ನ 2 ರಿಂದ 8.30ರವ ರೆಗೆ ತೆರೆದಿರುತ್ತದೆ. -ವಿದ್ಯಾ ಕೆ.ಇರ್ವತ್ತೂರು