Advertisement

ಹಾರರ್ “ಗಿಮಿಕ್’ನಲ್ಲಿ ಭಯಾನಕ ಗಣೇಶ್

12:27 PM Jan 05, 2019 | |

“ಚಮಕ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಗೋಲ್ಡನ್ ಸ್ಟಾರ್ ಗಣೇಶ್ “ಗಿಮಿಕ್’ ಮಾಡಲು ಮುಂದಾಗಿದ್ದಾರೆ. ಹೌದು, ಇಷ್ಟು ದಿನಗಳ ಕಾಲ ಲವರ್ ಬಾಯ್ ಲುಕ್‍ನಲ್ಲಿ ಮನರಂಜಿಸಿದ್ದ ಗಣೇಶ್ ಮೊಟ್ಟ ಮೊದಲ ಬಾರಿಗೆ ಭಯ ಬೀಳಿಸಲು ಮುಂದಾಗಿದ್ದಾರೆ. ಯೆಸ್, ಗಣೇಶ್ “ಗಿಮಿಕ್’ ಹೆಸರಿನ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

Advertisement

ಚಿತ್ರದ ಪೋಸ್ಟರ್ ನೋಡುತ್ತಿದ್ದರೆ, ಇಷ್ಟು ದಿನಗಳ ಕಾಲ ಗಣೇಶ್ ಹಿಂದೆ ಚೆಂದದ ಹುಡುಗಿಯರು ಬೀಳುತ್ತಿದ್ದರು. ಆದರೆ ಈಗ ಚೆಂದದ ಪ್ರೇತಾತ್ಮಗಳಿಗೂ ಗಣಿ ಮೇಲೆ ಲವ್ ಆಗಿರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಸದ್ಯ ಗಣೇಶ್ ಮನಾಲಿಯಲ್ಲಿ “ಗೀತಾ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ಸಹ, “ಗಿಮಿಕ್’ಗಾಗಿ ಸಿಕ್ಕಾಪಟ್ಟೆ ಗಿಮಿಕ್ ಮಾಡುತ್ತಿದ್ದಾರೆ. ಅಲ್ಲದೇ ಚಿತ್ರದ ಬಹುತೇಕ ಚಿತ್ರೀಕರಣ ಶ್ರೀಲಂಕಾದಲ್ಲಿ ವಿಭಿನ್ನವಾಗಿರುವ ಮನೆಯೊಂದರಲ್ಲಿ ನಡೆಯಲಿದ್ದು, ಉಳಿದಂತೆ ಬೆಂಗಳೂರು, ಮೈಸೂರಿನಲ್ಲಿ ನಡೆಯಲಿದೆ.

ಇನ್ನು ಚಿತ್ರಕ್ಕೆ “ಕೋಟಿಗೊಬ್ಬ’, “ಗೌರಮ್ಮ’, “ಕುಟುಂಬ’, “ಕುರುಕ್ಷೇತ್ರ’ ಚಿತ್ರಗಳ ಖ್ಯಾತಿಯ ನಾಗಣ್ಣ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಗಣೇಶ್ ಎದುರಿಗೆ ನಾಯಕಿಯಾಗಿ ಪಂಜಾಬಿ ನಟಿ ರೋನಿಕಾ ಸಿಂಗ್ ನಟಿಸುತ್ತಿದ್ದಾರೆ. ಉಳಿದಂತೆ ಸಾಧುಕೋಕಿಲಾ, ಶೋಭರಾಜ್, ಚಿ.ಗುರುದತ್, ರವಿಶಂಕರ್ ಗೌಡ ಸೇರಿದಂತೆ ದೊಡ್ಡ ತಾರಾಬಳಗವಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ರವಿವರ್ಮ ಸಾಹಸ, ಸುರೇಶ್ ಅರಸ್ ಸಂಕಲನ, ವಿಘ್ನೇಶ್ ಕ್ಯಾಮೆರಾ ಕೈಚಳಕ, ನಂಜುಂಡ ಸಂಭಾಷಣೆ ಸೇರಿದಂತೆ ನಾರಾಯಣ್ ನಿರ್ದೇಶನ ಸಹಕಾರವಿದೆ.

Advertisement

Udayavani is now on Telegram. Click here to join our channel and stay updated with the latest news.

Next