Advertisement
ಹೌದು, ಕಾರ್ಕಳ ಪೇಟೆಯಲ್ಲಿ ಲವವವಿಕೆಯಿಂದ ಆಟೋ ಓಡಿಸುವ ಹಿರಿಯ ವ್ಯಕ್ತಿಯೊಬ್ಬರು ಕಾಣಸಿಗುತ್ತಾರೆ. ಇವರ ಹೆಸರು ಗಣೇಶ್ ದೇವಾಡಿಗ. ಕಾರ್ಕಳ ಸಿಟಿ ನರ್ಸಿಂಗ್ ಹೋಮ್ ಸಮೀಪದಲ್ಲೇ ಇವರ ಮನೆ. ಕಳೆದ 35 ವರ್ಷಗಳಿಂದ ಆಟೋ ಓಡಿಸುವ ಇವರು ಬೆಳಗ್ಗೆ 5:30ವರೆಯಿಂದ ಸಂಜೆ 7 ಗಂಟೆ ತನಕ ಸಾಮಾನ್ಯರಂತೆ ಆಟ ಓಡಿಸುತ್ತಾರೆ. ಶಾಲಾ ಮಕ್ಕಳನ್ನು ದಿನಂಪ್ರತಿ ಶಾಲೆಗೆ ತಲುಪಿಸುತ್ತಾರೆ. ಇವರ ದುಡಿಮೆ ಚೆ„ತನ್ಯದ ಚಿಲುಮೆಯೇ ಸರಿ.
60 ವರ್ಷದ ಗಣೇಶ್ ದೇವಾಡಿಗರು ನಾಲ್ಕು ತಿಂಗಳ ಹಿಂದೆ ಸಕ್ಕರೆ ಕಾಯಿಲೆಗೆ ತುತ್ತಾಗಿ ತಮ್ಮ ಬಲಗಾಲನ್ನು ಶಸ್ತ್ರಚಿಕಿತ್ಸೆಗೊಳಪಡಿಸಬೇಕಾಯಿತು. ಹೀಗಾಗಿ ತಮ್ಮ ಮೊಣಕಾಲಿನಿಂದ ಕೆಳಗೆ ಕಾಲನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಗಣೇಶರಿಗೆ ಬಂದೊದಗಿತು. ಆ ಬಳಿಕ ಕೃತಕ ಕಾಲು ಜೋಡಣೆ ಮಾಡಲಾಗಿ, ಇದೀಗ ಅದೇ ಕೃತಕ ಕಾಲಿನಲ್ಲಿ ಆಟೋ ಓಡಿಸುತ್ತಿದ್ದಾರೆ. 2 ಲಕ್ಷ ವೆಚ್ಚ
ಕೃತಕ ಕಾಲು ಜೋಡಣೆಗೆ ಸೇರಿದಂತೆ ಚಿಕಿತ್ಸೆಗಾಗಿ ಗಣೇಶ್ ಅವರಿಗೆ ಸುಮಾರು 2.ಲಕ್ಷ ರೂ. ವೆಚ್ಚ ತಗುಲಿದೆ. ಅವಿವಾಹಿತರಾಗಿರುವ ಇವರಿಗೆ ಅಷ್ಟೊಂದು ಹಣ ಭರಿಸುವುದು ಕಷ್ಟಕರವಾಗಿತ್ತು. ಈ ವೇಳೆ ಗೆಳೆಯರು, ಸಂಬಂ ಕರು ಧೆ„ರ್ಯ ತುಂಬಿದ್ದರು ಎಂದು ಸ್ಮರಿಸುವ ಗಣೇಶ್ ಅವರು ಮುಖ್ಯಮಂತ್ರಿ ಪರಿಹಾರ ನಿ ಯಿಂದ ರೂ. 17 ಸಾವಿರ, ಆಳ್ವಿನ್ ಲೂಯಿಸ್, ಮಾಜಿ ಶಾಸಕ ಗೋಪಾಲ ಭಂಡಾರಿ, ಉದಯಶೆಟ್ಟಿ ಮುನಿಯಾಲು, ಪವನ್ ಜ್ಯುವೆಲ್ಲರ್ನ ಸತೀಶ್ ಆಚಾರ್ಯ, ಸೊವರಿನ್‌ನ ಶಾಂತರಾಮ ಶೆಟ್ಟಿ, ಉಮೇಶ್ ರಾವ್ ಬಜಗೋಳಿ ಸೇರಿದಂತೆ ಅನೇಕರು ಆರ್ಥಿಕವಾಗಿ ಸಹಕರಿಸಿದ್ದಾರೆ ಎಂದು ನೆನಪು ಮಾಡಿಕೊಂಡರು.
8ನೇ ತರಗತಿ ತನಕ ಓದಿರುವ ನಾನು ಯಂಗ್ ಸ್ಟಾರ್ ಗೇಮ್ಸ್ ಕ್ಲಬ್‌ನ ಸದಸ್ಯ.
Related Articles
Advertisement
ಕಷ್ಟ ಬಂದಾಗ ಕೊರಗದೇ, ಎದೆಗುಂದದೇ ದೆ„ರ್ಯವಾಗಿ ಎದುರಿಸಬೇಕು. ನೋವು, ನಲಿವು ಜೀವನದಲ್ಲಿ ಸಹಜವಾಗಿದ್ದು, ನೋವನ್ನು ಮರೆತು ಸಂತೋಷದಿಂದ ಬದುಕು ಸಾಗಿಸುವುದು ಹೇಗೆಂಬುವುದನ್ನು ನಿರೂಪಿಸಬೇಕು ಎನ್ನುತ್ತಾರೆ.