Advertisement
ಬುಧವಾರವೂ ಸಾರ್ವಜನಿಕ ಗಣೇಶೋತ್ಸವ ಕೇಂದ್ರಗಳಿಗೆ ಭಕ್ತರು ಭೇಟಿ ನೀಡಿದರು. ದೇವಸ್ಥಾನಗಳು, ಪೆಂಡಾಲುಗಳಲ್ಲಿ 108, 1,008 ಗಣಪತಿ ಹೋಮ, ಮೂಡುಗಣಪತಿ ಸೇವೆಗಳು ನಡೆದವು.
ವಿವಿಧ ದೇವಸ್ಥಾನಗಳಲ್ಲಿ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಗಣಪತಿ ಹೋಮಗಳು, ಮುಡಿಅಕ್ಕಿ ಕಡುಬು, ಮೂಡುಗಣಪತಿ ಸೇವೆಗಳು, ರಾತ್ರಿ ಹೂವಿನ ಪೂಜೆ ನಡೆದವು. ಮನೆಗಳಲ್ಲಿ ಗಣಪತಿ ವಿಗ್ರಹವಿಟ್ಟು ಪೂಜಿಸುವವರು ಮೊದಲ ದಿನವೇ ಜಲಸ್ತಂಭನ ಮಾಡಿದರು. ಹಲವು ಗಣೇಶೋತ್ಸವ ಪೆಂಡಾಲುಗಳಲ್ಲಿಯೂ ಮೊದಲ ದಿನವೇ ಜಲಸ್ತಂಭನ ಮಾಡಲಾಯಿತು. ಮಂಗಳವಾರ ಆಗಾಗ್ಗೆ ಮಳೆ ಸುರಿದಿತ್ತಾದರೂ ಹಬ್ಬದ ಸಂಭ್ರಮಕ್ಕೆ ತೊಡಕಾಗಲಿಲ್ಲ. ಸಣ್ಣ ಗಣಪತಿಯ ದೇವಸ್ಥಾನಗಳಲ್ಲಿಯೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಕಂಡುಬಂದರು. ಉಡುಪಿ ಜಿಲ್ಲೆಯಲ್ಲಿ 470 ಮತ್ತು ದ.ಕ. ಜಿಲ್ಲೆಯಲ್ಲಿ 381 ಗಣೇಶೋತ್ಸವಗಳು ಸಂಪನ್ನಗೊಂಡಿತು. ಕೆಲವೆಡೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.