Advertisement
ನಗರಕ್ಕೆ ಪ್ರತಿವರ್ಷ ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ, ಪರ್ಯಾಯ ಪ್ರಯುಕ್ತ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಹೂವಿನ ವ್ಯಾಪಾರಿಗಳು ಆಗಮಿಸುತ್ತಾರೆ. ವ್ಯಾಪಾರದಲ್ಲಿ ಉತ್ತಮ ಲಾಭಗಳಿಸಿ ನಗು ಮುಖದಿಂದ ಹಿಂದಿರುತ್ತಾರೆ. ಆದರೆ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ವ್ಯಾಪಾರಿಗಳು ಬರಿ ಗೈಯಲ್ಲಿ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಇದೇ ಮೊದಲ ಬಾರಿ ಹೂವಿನ ಮಾರಾಟ ಕುಂಠಿತವಾಗಿದೆ. ಮಳೆಯಿಂದಾಗಿ ಜನರು ಬೀದಿಗೆ ಬಂದು ಹೂವುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ತುಂತುರು ಮಳೆಯಿಂದಾಗಿ ಹೂವಿನ ಬಣ್ಣ ಹಾಳಾಗುತ್ತಿದೆ. ಜನಸಂಖ್ಯೆ ವಿರಳ
ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ರವಿವಾರ ಹಾಗೂ ಶನಿವಾರ ಸುರಿದ ಮಳೆ ನೀರೆರೆದಿದೆ! ಮನೆ ಬಿಟ್ಟು ಹೊರ ಬರಲು ಆಗದಂತೆ ಮಳೆ ಸುರಿದಿದೆ. ಇದರಿಂದಾಗಿ ತರಕಾರಿ, ಹೂವು ಮತ್ತು ಹಣ್ಣು ಹಂಪಲು ಮಾರುಕಟ್ಟೆಯಲ್ಲಿ ಜನರ ಸಂಖ್ಯೆ ವಿರಳವಾಗಿತ್ತು. ದರದಲ್ಲಿ ಏರಿಕೆಯಾಗ ದಿದ್ದರೂ, ಹಬ್ಬಕ್ಕಾಗಿ ಹೆಚ್ಚುವರಿ ಖರೀದಿ ಮಾಡಿ ತಂದಿಟ್ಟುಕೊಂಡ ಅಂಗಡಿಯವರು ಮಳೆ ದಿಸೆಯಿಂದ ಗ್ರಾಹಕರಿಗಾಗಿ ಕಾಯಬೇಕಾದ ಅನಿವಾರ್ಯತೆ ಇತ್ತು. ಕೆಲವೊಂದು ಸಂಘ-ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಅಲಂಕಾರಕ್ಕೆ ಬಿರುಸಿನ ತಯಾರಿಯಲ್ಲಿ ತೊಡಗಿದ್ದರು.
Related Articles
Advertisement
ಮಲ್ಲಿಗೆ ಅಟ್ಟೆಗೆ 600 ರೂ., ಸೇವಂತಿಗೆ ಮಾರಿಗೆ100 ರೂ., ಕಾಕಡ ಮಲ್ಲಿಗೆ ಮಾರಿಗೆ 100 ರೂ., ಜಿನಿಯಾ ಮಾರಿಗೆ 100 ರೂ. ದರದಲ್ಲಿ ಮಾರಾಟವಾಗಿದೆ. ಗಣೇಶ ವಿಗ್ರಹಗಳಿಗೆ ಅಂತಿಮ ಟಚ್ ನೀಡಲಾಗಿದೆ.
ಲಾಭಕ್ಕಿಂತ ನಷ್ಟವೇ ಅಧಿಕ!ಕಳೆದ 8ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವ್ಯಾಪಾರ ಕುಂಠಿತವಾಗಿದೆ. ಮಳೆಯಿಂದಾಗಿ ಜನರು ಹೂವಿನ ಖರೀದಿಗೆ ಮುಂದೆ ಬರುತ್ತಿಲ್ಲ. ಸಾವಿರಾರು ರೂ. ವ್ಯಯಿಸಿ ಖರೀದಿ ಮಾಡಿದ ಹೂ ಮಾರಾಟವಾಗದೆ ಹಾಗೇ ಉಳಿದುಕೊಂಡಿದೆ. ಸೋಮವಾರ ಬೆಳಗ್ಗೆ 12 ಗಂಟೆಯ ಒಳಗೆ ಮಾರಾಟವಾಗದೆ ಹೋದರೆ ಹೂವಿನ ನಷ್ಟ ಕೈಯಿಂದ ಭರಿಸಬೇಕಾಗುತ್ತದೆ. ಉಳಿದ ಹೂವು ಊರಿಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆದ್ದರಿಂದ ಯಾವುದಾದರೂ ದೇವಸ್ಥಾನಕ್ಕೆ ನೀಡಿ ಹೋಗಬೇಕಾಗುತ್ತದೆ ಎಂದು ಚಿಕ್ಕಮಗಳೂರು ವ್ಯಾಪಾರಿ ಶಿವನ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.