Advertisement

“ರಕ್ತ ಪುಷ್ಪೆ„ ಸುಪೂಜಿತೈಃ’ಹೌದು”ಕೃತಕ ಪುಷ್ಪೆ„ ಸುಪೂಜಿತೈಃ’ಅಲ್ಲ

09:30 PM Aug 29, 2019 | Sriram |

ಉಡುಪಿ: ನಾವೀಗ ಯಾವುದೇ ಪೂಜೆ ಪುರಸ್ಕಾರ ನಡೆಸುವಾಗ ಎಲ್ಲ ವನ್ನೂ ಅಂಗಡಿಯಿಂದ ಖರೀದಿಸಿ ತರುವ ಕಾಲಘಟ್ಟದಲ್ಲಿದ್ದು ಕೊನೆಗೆ ಭಾರೀ ಖರ್ಚಾಯಿತು ಎಂದು ಉದ್ಗಾರ ತೆಗೆಯುತ್ತೇವೆ. ಒಬ್ಬ ಅತಿಥಿ ಯನ್ನು ಊಟಕ್ಕೆ ಕರೆದು “ಒಂದು ಊಟಕ್ಕೆ ಈಗ ಎಷ್ಟು ಖರ್ಚಾಗುತ್ತಿದೆ ಗೊತ್ತಾ?’ ಎಂದು ಗೊಣಗಾಡಿದರೆ ಆ ಅತಿಥಿಗೆ ಏನಾಗಬಹುದು?

Advertisement

ಪೂಜೆ ಪುರಸ್ಕಾರ ನಡೆಸಿ ಇಷ್ಟು ಹಣ ಖರ್ಚಾಯಿತು ಎಂದು ಹೇಳಿದರೆ ಪೂಜೆ ತೆಗೆದುಕೊಂಡ ದೇವರಿಗೆ ಏನಾಗ ಬಹುದು? ಗಣಪತಿ ಪೂಜೆಗೆ ಕೆಂಪು ಬಣ್ಣದ ಪುಷ್ಪಗಳು ಉತ್ತಮ ಎಂಬ ಮಾತು ಇದೆ. ಇದನ್ನೇ ಗಣಪತಿ ಅಥರ್ವ ಶೀರ್ಷ ಮಂತ್ರದಲ್ಲಿ “ರಕ್ತ ಪುಷ್ಪೆ„ ಸುಪೂಜಿತೈಃ’ ಎಂದು ಹೇಳಿದ್ದಾರೆ. ದಾಸವಾಳ, ಕೇಪಳ ಹೀಗೆ ಅನೇಕ ಕೆಂಪು
ಬಣ್ಣದ ಹೂವುಗಳಿವೆ. ಇವುಗಳು ಮನೆ ಆವರಣ, ಗದ್ದೆ ಬದಿ, ಹಾಡಿಗಳಲ್ಲಿ ಏನೂ ಪ್ರಯತ್ನವಿಲ್ಲದೆ ಬೆಳೆಯುವ ಸಸ್ಯಪ್ರಭೇದ ಗಳಾಗಿವೆ. ಗರಿಕೆ ಹುಲ್ಲು ಗಣಪತಿಗೆ ಬಹಳ ಪ್ರೀತಿ. ಇದಕ್ಕೇನಾದರೂ ಖರ್ಚಿದೆಯೆ?

“ರಕ್ತ ಪುಷ್ಪೆ„ ಸುಪೂಜಿತೈಃ’ ಎನ್ನುವ ಬದಲು “ಕೃತಕ ಪುಷ್ಪೆ„ ಸುಪೂಜಿತೈಃ’ ಎಂಬಂತೆ ವರ್ತಿಸುತ್ತಿದ್ದೇವೆ. ಇದಕ್ಕೆ ಬಾಹ್ಯಾಕರ್ಷಣೆ, ವ್ಯಾಪಾರೀ ದೃಷ್ಟಿಕೋನ ಮೂಲ ಹೇತುವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಹೂ ಗಿಡ ಬೆಳೆಸುವ ಬದಲು ಆದಾಯ ಹೆಚ್ಚಿಸುವ ತಂತ್ರಗಾರಿಕೆ ಕರಗತ ಮಾಡಿಕೊಂಡಿದ್ದೇವೆ. ಆದಾಯ ಹೆಚ್ಚಿರುವಾಗ ಎಷ್ಟು ಖರ್ಚಾದರೂ ಮಾಡಲು ಸಿದ್ಧರಿದ್ದೇವೆ. ಹೂವುಗಳಿ ಗಾಗಿಯೇ ನಾವೆಷ್ಟು ವಿನಿಯೋಗಿಸುತ್ತಿದ್ದೇವೆ? ಈ ಹೂವುಗಳಾದರೂ ಎಂತಹ ಗುಣಮಟ್ಟದವು ಎಂದು ಯೋಚಿಸಿದ್ದೇವೆಯೆ? ಮಾರುಕಟ್ಟೆ ಯಲ್ಲಿ ಸಿಗುವ ಬಹುತೇಕ ಹೂವು ಗಳು ಸುಗಂಧಭರಿತವಾಗಿರುವುದಿಲ್ಲ. ಮನೆ ಬಳಿ ಸಹಜವಾಗಿ ಬೆಳೆಯುವ ದಾಸವಾಳ, ಕೇಪಳಗಳೂ ಈಗ ಕಸಿ ಕಟ್ಟಿ ಪಸರಿಸಲಾಗಿದೆ. ಇವುಗಳಲ್ಲಿ ಯಾವುದೇ ಔಷಧೀಯ ಗುಣವಿರುವುದಿಲ್ಲ. ಪುಣ್ಯವಶಾತ್‌ ಗರಿಕೆ ಹುಲ್ಲಿಗೆ ಕಸಿ ಕಟ್ಟುವ ಪ್ರಯೋಗ ಮಾಡಿದಂತಿಲ್ಲ.

ಮಾರುಕಟ್ಟೆಯಲ್ಲಿ ಸಿಗುವ ಗುಲಾಬಿ
ಹೂವುಗಳ ಪರಿಮಳ ನೋಡಿದರೆ ಅದರ “ಹೊರನೋಟದ ಚೆಂದದ ಒಳಗಿರುವ ಗಂಧ’ ಅರಿವಿಗೆ ಬರುತ್ತದೆ. ವಿದೇಶಗಳಲ್ಲಿ ಎಲ್ಲ ಹಣ್ಣುಗಳೂ ಬೀಜರಹಿತವಂತೆ (ಸೀಡ್‌ಲೆಸ್‌). ನಮಗೆ ತಿನ್ನಲು ಖುಷಿಯಾಗುತ್ತದೆ. ಆದರೆ ಬೀಜವಿಲ್ಲದ ಕಾರಣ ಮತ್ತೆ ಗಿಡದ ಸಂತತಿ ಬೇಕೆಂದರೆ ಸರಕಾರಿ ವ್ಯವಸ್ಥೆಗೇ ಶರಣಾಗಬೇಕು. ನಮ್ಮನ್ನು ಸದಾ ಪರಾವಲಂಬಿ
ಯಾಗಿಸುವ ತಂತ್ರಗಾರಿಕೆ ಆಡಳಿತದಲ್ಲಿ ಬೆಳೆಯುತ್ತಿದೆ. ಈ ಬಗೆಯ ಆಧುನಿಕ, ಕಾನೂನುಬದ್ಧ ಮೋಸಗಾರಿಕೆ ಯನ್ನು ನಮ್ಮದೇ ತೆರಿಗೆ ಹಣದಲ್ಲಿ ನಮ್ಮದೇ ವಿಜ್ಞಾನಿಗಳು ಕಂಡು ಹಿಡಿದು, ಅದಕ್ಕಾಗಿ ಇಂಕ್ರಿಮೆಂಟ್‌, ಅವಾರ್ಡ್‌ ಪಡೆದ ಮಹಾಮಹಿಮರಾದರು.

ಮಾರುಕಟ್ಟೆಯಲ್ಲಿ ಸಿಗುವ ಹಿಂಗಾರ (ಸಿಂಗಾರ) ಹೂವಿನ ಕತೆಯೂ ಇದೇ ರೀತಿಯಂತೆ. ಫ‌ಲ ಕೊಡುವ ಹಿಂಗಾರ ವನ್ನು ಯಾರೂ ಕೊಯ್ಯುವುದಿಲ್ಲ. ಫ‌ಲ ಕೊಡುವ ಗುಣ ವಿಲ್ಲದ್ದು ಅಷ್ಟೆ. ಇನ್ನೂ ಕಳಪೆ ದರ್ಜೆಯ, ಆದರೆ ಅಗ್ಗದ ದರದ ಹಿಂಗಾರ ಮಹಾರಾಷ್ಟ್ರದಿಂದಲೂ ಬರುತ್ತವೆಯಂತೆ. ಗಣೇಶ ಚತುರ್ಥಿಗೆ ಸಾರ್ವಜನಿಕ ಉತ್ಸವದ ಸಮಿತಿಯವರು ಅನಿ ವಾರ್ಯವಾಗಿ, ಒಂದು ಮಿತಿಯಲ್ಲಿ ಹೂವು ಖರೀದಿಸಬಹುದು. ಆದರೆ ಮನೆಮನೆಗಳಲ್ಲಿದ್ದು ಇತಿಶ್ರೀ ಹಾಡಿದ ಸಾಮಾನ್ಯ ಸ್ತರದ ಪುಷ್ಪಕೃಷಿ ಮಾಡುವ ಪ್ರವೃತ್ತಿಗೆ ಮತ್ತೆ ಜೀವ ತುಂಬಿಸಬೇಕಾಗಿದೆ. ಮನೆಯ ಎಲ್ಲ ಪೂಜೆ ಪುನಸ್ಕಾರಗಳಲ್ಲಿ ಇದೇ ಹೂವು ಬಳಸಿ ದೇವರನ್ನು ಚೆಂದಗಾಣಿಸೋಣವೆ?

Advertisement

-ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next